September 19, 2024
ಬಿಜೆಪಿ ಜಿಲ್ಲಾ ವಕ್ತಾರ ಸಿ.ಎಚ್.ಲೋಕೇಶ್ ಪತ್ರಿಕಾಗೋಷ್ಠಿ

ಬಿಜೆಪಿ ಜಿಲ್ಲಾ ವಕ್ತಾರ ಸಿ.ಎಚ್.ಲೋಕೇಶ್ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು: ಉಡುಪಿ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಅವರು ಬಿಜೆಪಿ ನಾಯಕರ ಹೆಸರಲ್ಲಿ ಮತಕೇಳುವುದರಲ್ಲಿ ತಪ್ಪೇನಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸಿ.ಎಚ್.ಲೋಕೇಶ್ ಪ್ರಶ್ನಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಲ್ಲಿ ಮಾತನಾಡಿ, ಮೋದಿ ಹಸರೇಳಿಕೊಂಡು ಕೋಟಾ ಶ್ರೀನಿವಾಸ ಪೂಜಾರಿ ಮತ ಕೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು ಟೀಕಿಸಿದ್ದಾರೆ. ಅವರೇಕೆ ರಾಹುಲ್ ಗಾಂಧಿ ಹೆಸರೇಳಿಕೊಂಡು ಮತಕೇಳಬಾರದು ಎಂದ ಅವರು ಆ ರೀತಿ ಮಾಡಿದಲ್ಲಿ ಅವರಿಗೆ ಠೇವಣಿಯೂ ಸಿಗುವುದಿಲ್ಲ ಎಂದು ಛೇಡಿಸಿದರು.

ಬಿಜೆಪಿ ಹೋರಾಟ ಏನಿದ್ದರೂ ಕಾಗ್ರೆಸ್ ತತ್ವ ಸಿದ್ದಾಂತದ ವಿರುದ್ಧವೇ ವಿನಾ ವ್ಯಕ್ತಿ ವಿರುದ್ಧವಲ್ಲ. ಬಿಜೆಪಿ ತೊರೆಯುವ ಕೊನೆ ಕ್ಷಣದವರೆಗೂ ಅಧಿಕಾರ ಅನುಭವಿಸಿದ ಹೆಗ್ಡೆ ಅವರು ಸ್ವಾರ್ಥಕ್ಕಾಗಿ ಕಾಂಗ್ರೆಸ್ ಸೇರಿ ಬಿಜೆಪಿ ಮುಖಂಡರನ್ನು ದೂಷಿಸುತ್ತಾ ಗೋಸುಂಬೆತನ ಪ್ರದರ್ಶಿಸುತ್ತಿದ್ದಾರೆ. ಅಧಿಕಾರದಲ್ಲಿದ್ದಾಗ ಮಾಡಿದ ಒಂದರೆಡು ಒಳ್ಳೆಯ ಕೆಲಸವನ್ನೇ ದೊಡ್ಡ ಸಾಧನೆ ಎಂಬಂತೆ ಬಿಂಬಿಸುತ್ತಿದ್ದಾರೆ ಎಂದರು. ಕಡೂರು ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ, ಚಿಕ್ಕಮಗಳೂರು ಬೇಲೂರು ರಸ್ತೆ ಅಭಿವೃದ್ಧಿಗೆ ಡಿಪಿಆರ್, ಕೇಂದ್ರೀಯ ವಿದ್ಯಾಲಯ ಇವೆಲ್ಲಾ ಶೋಭಾ ಕರಂದ್ಲಾಕೆ ಅವರ ಸಾಧನೆ ಅಲ್ಲವೇ ಎಂದು ಪ್ರಶ್ನಿಸಿದರು.

ಜಿಲ್ಲಾ ಬಿಜೆಪಿ ವಕ್ತಾರ ಹೆಚ್.ಎಸ್ ಪುಟ್ಟಸ್ವಾಮಿ ಮಾತನಾಡಿ ದೇಶದಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಸಂದರ್ಭದಲ್ಲೂ ಮರಳುವುದಿಲ್ಲ. ಬಿಜೆಪಿ ಬಿಟ್ಟರೆ ರಾಜಕೀಯ ನಿವೃತ್ತಿ ಆಗುತ್ತೇನೆ ಎಂದು ಸ್ಪಷ್ಟಪಡಿಸಿದರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಸಂಯೋಜಕರಾಗಿ ನೇಮಕಗೊಳ್ಳುವ ಮೂಲಕ ಕಾಂಗ್ರೆಸ್‌ಗೆ ವಾಪಸ್ ಬಂದಿರುವುದು ಒಳ್ಳೆಯದು ಎಂದು ಜಿಲ್ಲೆಯ ಕೊಪ್ಪ, ತರೀಕೆರೆ, ಚಿಕ್ಕಮಗಳೂರು, ಮೂಡಿಗೆರೆ ಪ್ರದೇಶಗಳಿಂದ ಕಾಂಗ್ರೆಸ್‌ನ ಅನೇಕ ಮುಖಂಡರು ಘೋನಾಯಿಸಿ ಅಭಿನಂದಿಸಿ, ಸ್ವಾಗತಿಸುತ್ತಿರುವುದಾಗಿ ಹೇಳುತ್ತಿರುವುದು ನನಗೆ ತೀವ್ರ ಮುಜುಗರದ ಜೊತೆಗೆ ನೋವು ತಂದಿದೆ ಎಂದರು.

ಕಾಂಗ್ರೆಸ್‌ನ ಕೆಲ ಮುಖಂಡರು ಕಾಂಗ್ರೆಸ್‌ಗೆ ವಾಪಸ್ ಮರಳುವಂತೆ ಕೆಲ ಮುಖಂಡರು ವಿಶ್ವಾಸದಿಂದ ಕೇಳಿದ್ದಾರೆ. ಅವರುಗಳಿಗೆ ನನ್ನ ನಿಲುವನ್ನು ಸ್ಪಷ್ಟವಾಗಿ ತಿಳಿಸಿದ್ದೇನೆ. ಆದರೆ, ಅಲ್ಲಲ್ಲಿ ಪುಟ್ಟಸ್ವಾಮಿ ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಅವೆಲ್ಲವೂ ವದಂತಿಗಳು ಎಂಬುದನ್ನು ತಿಳಿಸುತ್ತಿದ್ದೇನೆ ಎಂದು ಹೇಳಿದರು.

ಭಾರತ ಸ್ವತಂತ್ರವಾದ ಸಂದರ್ಭದಲ್ಲಿ ಕಾಂಗ್ರೆಸ್ ಒಂದು ದೊಡ್ಡ ಮರವಾಗಿತ್ತು ನಿಜ. ಆದರೆ, ನಂತರದ ದಿನಗಳಲ್ಲಿ ಕಾಂಗ್ರೆಸ್ ನೆಹರು, ಗಾಂಧಿ ಕುಟುಂಬಕ್ಕೆ ಆದ್ಯತೆ ನೀಡಿದ್ದ ಪರಿಣಾಮ ಇಂದು ದೇಶದಲ್ಲಿ ಕಾಂಗ್ರೆಸ್ ಮರವಾಗಿ ಉಳಿಯದೇ ಒಂದು ಒಣಗಿದ ಬಳ್ಳಿಯಾಗಿ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದು ತಿಳಿಸಿದರು.

ಲೋಕಸಭಾ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಭಿವೃದ್ಧಿಯ ಪರವಾದ ಅಲೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿರುಗಾಳಿ ಎಬ್ಬಿಸಿದೆ. ಸರಳ ಸಜ್ಜನ, ಪ್ರಾಮಾಣಿಕ ವ್ಯಕ್ತಿತ್ವದ ನಮ್ಮ ಪಕ್ಷದ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಅವರು ಈಗಾಗಲೇ ಮತದಾರರ ಮನಸ್ಸಿನಲ್ಲಿ ಗೆದ್ದಾಗಿದೆ. ಮುಂದಿನ ದಿನಗಳಲ್ಲಿ ಮತಪೆಟ್ಟಿಗೆಯಲ್ಲಿ ಎಣಿಕೆಯಷ್ಟೇ ನಡೆಯಬೇಕಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಬಿ.ರಾಜಪ್ಪ, ನಾರಾಯಣಗೌಡ, ಜೆಡಿಎಸ್ ಮುಖಂಡರಾದ ಎ.ಸಿ ಕುಮಾರಗೌಡ, ಸಿ.ಕೆ ಮೂರ್ತಿ, ದೇವಿ ಪ್ರಸಾದ್ ಉಪಸ್ಥಿತರಿದ್ದರು.

Let the Congress ask for votes in the name of Rahul Gandhi

About Author

Leave a Reply

Your email address will not be published. Required fields are marked *

You may have missed