September 19, 2024

ಗುಣಮಟ್ಟದ ಶಿಕ್ಷಣದಿಂದ ಗುಲಾಮಗಿರಿ ಮೆಟ್ಟಿ ನಿಲ್ಲಲು ಸಾಧ್ಯ

0
ನಿರಂತರ ಸಮುದಾಯ ಭವನದಲ್ಲಿ ನಡೆದ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ

ನಿರಂತರ ಸಮುದಾಯ ಭವನದಲ್ಲಿ ನಡೆದ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ

ಚಿಕ್ಕಮಗಳೂರು: ಸಮಾಜದಲ್ಲಿ ಮಕ್ಕಳಿಗೆ ಮತ, ಧರ್ಮ ಬೋಧಿಸಿದರೆ ಮೂಢ ನಂಬಿಕೆ ದಾಸರಾಗುವರು. ಗುಣಮಟ್ಟದ ಶಿಕ್ಷಣ ಬೋಧಿಸಿದರೆ ಗುಲಾಮಗಿರಿಯನ್ನು ಮೆಟ್ಟಿ ನಿಂತು ಶಾರೀಕವಾಗಿ ಗಟ್ಟಿಯಾ ಗುವರು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

ನಗರದ ಸಮೀಪದ ನಿರಂತರ ಸಮುದಾಯ ಭವನದಲ್ಲಿ ಡಾ|| ಬಿ.ಆರ್.ಅಂಬೇಡ್ಕರ್, ಜಗಜೀವನರಾಮ್ ಜಯಂತಿ ಹಾಗೂ ಚುನಾವಣಾ ವಾರ್ ರೂಂನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಅಂಬೇಡ್ಕರ್ ಸ್ವಾತಂತ್ರ್ಯ ಪೂರ್ವದಲ್ಲಿ ಸರ್ವ ಸಮಾನತೆಯ ಆಧಾರದಲ್ಲಿ ರಚಿಸಿದ ಸಂವಿಧಾನವು ಇಡೀ ಪ್ರಪಂಚವೇ ಮೆಚ್ಚುವಂತಾಗಿದೆ. ದೇಶದ ಜನಪ್ರತಿನಿಧಿಗಳು ಅಧಿಕಾರ ಪಡೆಯಲು ಹಾಗೂ ಸಾಮಾನ್ಯ ಜನರನ್ನು ಮುಖ್ಯ ವಾಹಿನಿಗೆ ತಂದು ಸ್ವಾಭಿಮಾನದಿಂದ ನೆಲೆಯೂರಲು ಸಾಧ್ಯವಾಗಿದೆ ಎಂದರು.

ಬೀದಿದೀಪದಲ್ಲಿ ವಿದ್ಯಾರ್ಜನೆ ನಡೆಸಿದ ಅಂಬೇಡ್ಕರ್ ಉನ್ನತ ಮಟ್ಟಕ್ಕೇರುವ ಮೂಲಕ ಬಡವರು, ಶೋಷಿ ತರು ಹಾಗೂ ದೀನದಲಿತರ ಜೀವನದ ಕತ್ತಲೆ ಬದುಕನ್ನು ಬೆಳಕಿನೆಡೆಗೆ ಕೊಂಡೊಯ್ದುವರು. ಸಮಾಜದ ಪ್ರತಿ ಕುಟುಂಬದವರು ಸಂವಿಧಾನ ಕೈಪಿಡಿ ಅಧ್ಯಯನ ನಡೆಸಬೇಕು ಎಂದು ಹೇಳಿದರು.

ಕೇಂದ್ರದ ಬಿಜೆಪಿ ಸರ್ಕಾರ ಅಂಬೇಡ್ಕರ್ ಆಶಯಗಳಿಗೆ ವಿರುಧ್ಧವಾಗಿ ನಡೆದುಕೊಳ್ಳುತ್ತಿದೆ. ಅಲ್ಲದೇ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ೪೦೦ ಸ್ಥಾನ ಗಳಿಸಿದರೆ ಸಂವಿಧಾನ ಬದಲಾವಣೆ ಮಾಡುವುದರಲ್ಲಿ ಸಂಶಯವಿಲ್ಲ. ಹೀಗಾಗಿ ಮತದಾರರು ಹಾಗೂ ಅಂಬೇಡ್ಕರ್ ಅನುಯಾಯಿಗಳು ಯೋಚಿಸಿ ಮತಯಾಚಿಸಬೇಕಿದೆ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ಮಾತನಾಡಿ ಸಂವಿಧಾನದ ಹರಿಕಾರ ಹಾಗೂ ಬಡಜನತೆಯ ಅಶಾದೀಪ ಡಾ.ಬಿ.ಆರ್.ಅಂಭೇಡ್ಕರ್‌ರ ಆಶಯಗಳಿಗೆ ಬೆಲೆಕೊಡದ ಕೇಂದ್ರ ಸರ್ಕಾರ ದಲಿತರನ್ನು ಮತಬ್ಯಾಂಕ್ ಗಾಗಿ ಬಳಸಿಕೊಳ್ಳುತ್ತಿರುವುದು ದುರ್ದೈವ. ಕಾಂಗ್ರೆಸ್‌ನಲ್ಲಿ ದಲಿತರು, ಅಲ್ಪಸಂಖ್ಯಾತರು ಸೇರಿದಂತೆ ಸರ್ವ ಜನಾಂ ಗಕ್ಕೂ ಅಧಿಕಾರ ಹಾಗೂ ಸಮರ್ಪಕ ಸೌಲಭ್ಯವನ್ನು ಒದಗಿಸಿದೆ ಎಂದರು.

ಹೀಗಾಗಿ ಈ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಜಯಪ್ರಕಾಶ್‌ಹೆಗ್ಡೆ ಪರವಾಗಿ ಅತಿಹೆಚ್ಚು ಕಾರ್ಯ ಕರ್ತರು ಆಯಾಯ ಬೂತ್‌ಗಳಲ್ಲಿ ಹೆಚ್ಚು ಶ್ರಮವಹಿಸಬೇಕು. ಕಳೆದ ಚುನಾವಣೆಯಲ್ಲಿ ಕಡಿಮೆ ಮತಗಳ ಅಂತರ ವಿರುವ ಬೂತ್‌ಗಳನ್ನು ಗುರುತಿಸಬೇಕು. ಬಳಿಕ ಅತಿಹೆಚ್ಚು ಪ್ರಾಮುಖ್ಯತೆಯನ್ನು ಅಲ್ಲಿಗೆ ನೀಡುವ ಮೂಲಕ ಅಭ್ಯ ರ್ಥಿಗೆ ಗೆಲುವಿಗೆ ಮುಂದಾಗಬೇಕು ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ ಹುಟ್ಟಿನಿಂದ ಬಡತನ ಹಾಗೂ ಅವಮಾನವನ್ನು ಎದುರಿಸಿ ಕುಗ್ಗದೇ ಸಮಾನತೆಗಾಗಿ ಹೋರಾಡಿದವರು ಅಂಬೇಡ್ಕರ್. ಹಲವಾರು ದೇಶಗಳಲ್ಲಿ ಅಧ್ಯಯನ ನಡೆಸಿ ಸೌಹಾರ್ದತೆ, ಸಹಬಾಳ್ವೆ ಜೀವನಕ್ಕೆ ಸಂವಿಧಾನ ರಚಿಸಿ ಹಾಗೂ ಮತದಾನಕ್ಕೆ ಅವಕಾಶ ಕಲ್ಪಿಸಿದವರ ತ್ಯಾಗ ಅಜಾರಾಮರ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಡಿ.ಎಲ್.ವಿಜಯ್‌ಕುಮಾರ್ ಮಾತನಾಡಿ ಅಂಬೇಡ್ಕರ್ ಬಾಲ್ಯದಿಂದ ಲೇ ಬುದ್ದಿಶಕ್ತಿಯನ್ನು ಹೊಂದಿದ್ದರು. ಸಮಾಜದಲ್ಲಿನ ಶೋಷಣೆ ಹೋಗಲಾಡಿಸುವ ನಿಟ್ಟಿನಲ್ಲಿ ಭದ್ರಬುನಾದಿ ಹಾಕಿ ಕೀಳರಿಮೆ, ಬೇಧಭಾವ ತೊಡೆದು ಹಾಕುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಿ ಯಶಸ್ವಿ ಕಂಡವರು ಎಂದು ಹೇಳಿದರು.

ವಿದ್ಯಾವಂತ ಯುವಕನಿಗೆ ಉದ್ಯೋಗ ಕಲ್ಪಿಸುವುದು, ಬಡ ಕುಟುಂಬದ ಮಹಿ ಳೆಗೆ ವರ್ಷಕ್ಕೆ ೧ ಲಕ್ಷ ರೂ. ಸಾಲಮನ್ನಾ, ಶ್ರಮಿಕನ್ಯಾಯ, ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ಖಚಿತಪಡಿ ಸಿಕೊಳ್ಳಲು ರಾಷ್ಟ್ರವ್ಯಾಪ್ತಿ ಜನಗಣತಿಯಲ್ಲಿ ಪ್ರತಿಯೊಬ್ಬ ವ್ಯಕ್ತಿ ಮತ್ತು ಸಮುದಾಯವನ್ನು ಪರಿಗಣಿಸುವ ಗ್ಯಾರಂಟಿ ಕಾರ್ಡ್‌ಗಳನ್ನು ಹಂಚಿ ಬಳಿಕ ಕುಟುಂಬದ ಮಾಹಿತಿಯನ್ನು ಸಂಗ್ರಹಿಸಿ ಕೆಪಿಸಿಸಿ ಕಳುಹಿಸಿಕೊಡಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮಲ್ಲೇಶ್‌ಸ್ವಾಮಿ ದೀನ ದಲಿತರ ಉದ್ದಾರಕ್ಕಾಗಿ ವೈಯಕ್ತಿಕ ಆಸೆ-ಆಕಾಂಕ್ಷೆಗಳನ್ನು ಬದಿಗಿರಿ ಇಡೀ ಜೀವನವನ್ನು ಮುಡಿಪಾಗಿಟ್ಟವರು ಅಂ ಬೇಡ್ಕರ್. ದೇಶದ ಜನತೆ ಸ್ವಾಭಿಮಾನ ಹಾಗೂ ಸಮಾಜಮುಖಿಯಾಗಿ ಬದುಕು ರೂಪಿಸಿಕೊಳ್ಳಲು ಸಂವಿಧಾನ ಗ್ರಂಥ ಮಹತ್ವದ ಪಾತ್ರ ವಹಿಸಿದೆ ಎಂದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್. ಪಿ.ಮಂಜೇಗೌಡ, ಪ್ರಚಾರ ಸಮಿತಿ ಅಧ್ಯಕ್ಷ ಸೈಯದ್ ಹನೀಫ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಮಹ್ಮದ್ ನಯಾಜ್, ಜಿ.ಪಂ. ಮಾಜಿ ಅಧ್ಯಕ್ಷ ಕೆ.ಮಹಮ್ಮದ್, ನಗರಸಭಾ ಸದಸ್ಯ ಮುನೀರ್ ಅಹ್ಮದ್, ಲಕ್ಷ್ಮಣ್, ಕೆಪಿಸಿಸಿ ಸಂಯೋಜಕ ಹಿರೇಮಗಳೂರು ರಾಮಚಂದ್ರ, ಮುಖಂಡರುಗಳಾದ ಎಂ.ಡಿ.ರಮೇಶ್, ಜಯರಾಜ್, ಪ್ರಕಾಶ್ ರೈ ಮತ್ತಿತರರು ಹಾಜರಿದ್ದರು.

Slavery can be eradicated with quality education

About Author

Leave a Reply

Your email address will not be published. Required fields are marked *

You may have missed