September 19, 2024

ಬಸವತತ್ವ ಕೇವಲ ಸಂದೇಶವಲ್ಲ ಅದೊಂದು ಬದುಕಿನ ಪಥ

0
ಡಾ. ಬಿ.ಆರ್ ಅಧ್ಯಯನ ಸಂಸ್ಥೆ ವತಿಯಿಂದ ತೇಗೂರು ಸಮೀಪದ ಬುದ್ಧ ವಿಹಾರದಲ್ಲಿ ಏರ್ಪಡಿಸಲಾಗಿದ್ದ ಬಸವ ಜಯಂತಿ

ಡಾ. ಬಿ.ಆರ್ ಅಧ್ಯಯನ ಸಂಸ್ಥೆ ವತಿಯಿಂದ ತೇಗೂರು ಸಮೀಪದ ಬುದ್ಧ ವಿಹಾರದಲ್ಲಿ ಏರ್ಪಡಿಸಲಾಗಿದ್ದ ಬಸವ ಜಯಂತಿ

ಚಿಕ್ಕಮಗಳೂರು: ಬಸವತತ್ವ ಕೇವಲ ಸಂದೇಶವಲ್ಲ ಅದೊಂದು ಬದುಕಿನ ಪಥವಾಗಿದೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ರವೀಶ್ ಬಸಪ್ಪ ಅವರು ಪ್ರತಿಪಾದಿಸಿದರು.

ಡಾ. ಬಿ.ಆರ್ ಅಧ್ಯಯನ ಸಂಸ್ಥೆ ವತಿಯಿಂದ ತೇಗೂರು ಸಮೀಪದ ಬುದ್ಧ ವಿಹಾರದಲ್ಲಿ ಏರ್ಪಡಿಸಲಾಗಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಪ್ರಸ್ತುತ ಕಾಲಮಾನದಲ್ಲಿ ಎಲ್ಲರಿಗೂ ಅರಿವು ಅಂತಃಕರಣದ ಕೊರತೆ ಇದೆ. ಜಗತ್ತಿಗೆ ಬೇಕಾಗಿರುವುದು ವಿವೇಕ ಮತ್ತು ಅಂತಃಕರಣ. ಈಗ ಜಗತ್ತಿನಲ್ಲಿ ವಿವೇಕದ ಕೊರತೆ ಕಾಡುತ್ತಿದೆ. ಜಗತ್ತಿಗೆ ಉತ್ತರ ಕೊಡಲು ಬಸವ, ಬುದ್ಧ, ಅಂಬೇಡ್ಕರ್, ಕನಕದಾಸರ ವಿಚಾರಧಾರೆಯಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಬಸವ-ಬುದ್ಧನನ್ನು ಅನುಸರಿಸಿದರೆ ಬದುಕು ಸುಂದರವಾಗಿರುತ್ತದೆ ಆದರೆ ಬಸವಣ್ಣನವರ ಪೂಜೆಯ ಅರ್ಥವೇ ಗೊತ್ತಿಲ್ಲ ಎಂದ ಅವರು ಮಹಾಪುರು?ರು ಮತ್ತು ಅವರ ತತ್ವಗಳು ವ್ಯಾಪಾರದ ಸರಕಾಗಿವೆ ಅದರೊಂದಿಗೆ ಮಹಾಪುರು?ರ ವ್ಯಾಪಾರವಾಗಿದೆ. ಧರ್ಮ ರಾಜಕೀಯ ಎಲ್ಲವೂ ವ್ಯಾಪಾರದ ವಿ?ಯವಾಗಿದೆ ಎಂದರು.

ವಚನಕಾರರಿಗೂ, ಬುದ್ಧನಿಗೂ ಅವಿನಾವಭಾವ ಸಂಬಂಧವಿದೆ. ಶೋಷಿತ ಸಮುದಾಯದವರೇ ಬಸವಣ್ಣನವರ ನಿಜವಾದ ವಾರಸುದಾರರು ಎಂದು ತಿಳಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಮಾತನಾಡಿ, ಶೋಷಿತ ಸಮಾಜದವರೇ ಬಸವಣ್ಣನವರ ನಿಜವಾದ ವಾರಸುದಾರರಾಗಿರುವುದರಿಂದ ಇದೊಂದು ಅರ್ಥಪೂರ್ಣ ಕಾರ್ಯಕ್ರಮ ಎಂದು ಹೇಳಿದರು.

ದಲಿತ ಚಳುವಳಿಗಳು ಬರದಿದ್ದರೆ ಬಸವಣ್ಣನವರು ಗರ್ಭಗುಡಿಯಿಂದ ಹೊರಗೆ ಬರುತ್ತಿರಲಿಲ್ಲ. ದಾಸೋಹ ಮತ್ತು ಕಾಯಕದ ಕಲ್ಪನೆ ಕೊಟ್ಟ ಬಸವಣ್ಣನವರು ಒಬ್ಬ ಒಳ್ಳೆಯ ಆರ್ಥಿಕ ತಜ್ಞ. ಧಾರ್ಮಿಕ, ಸಾಮಾಜಿಕ ಸುಧಾರಣೆಯೊಂದಿಗೆ ಜಗತ್ತಿನಲ್ಲಿ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ತಂದವರೇ ಬಸವಣ್ಣನವರೆಂದು ಬಣ್ಣಿಸಿದರು.

ದಲಿತ ಸಂಘ? ಸಮಿತಿಯ ರಾಜ್ಯ ಸಂಚಾಲಕ ವಸಂತಕುಮಾರ್ ಮಾತನಾಡಿ, ನಾಡಿಗೆ ಸಮಾನತೆ, ಜಾತಿ ರಹಿತ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದವರೇ ಬಸವಣ್ಣನವರು ಎಂದರು.

ಅಧ್ಯಕ್ಷತೆ ವಹಿಸಿದ್ದ ಅಂಬೇಡ್ಕರ್ ಅಧ್ಯಯನ ಸಂಸ್ಥೆಯ ಅಧ್ಯಕ್ಷರು ಆಗಿರುವ ಮಾಜಿ ಸಚಿವ ಬಿ.ಬಿ ನಿಂಗಯ್ಯ ಅವರು ಮಾತನಾಡಿ, ತಮ್ಮ ಸಂಸ್ಥೆಯ ಆಶ್ರಯದಲ್ಲಿ ಬುದ್ಧ, ಬಸವ, ಅಂಬೇಡ್ಕರ್, ಕನಕದಾಸ, ಪೆರಿಯಾರ್ ಮುಂತಾದ ಮಹಾನ್ ಪುರು?ರು ಸಮಾಜ ಸುಧಾರಣೆಯ ಕಾರ್ಯಕ್ರಮಗಳನ್ನು ಅನು?ನಕ್ಕೆ ತರುವ ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಗುವುದೆಂದು ಹೇಳಿದರು.

ಅಂಬೇಡ್ಕರ್ ಅಧ್ಯಯನ ಸಂಸ್ಥೆ ಕಾರ್ಯದರ್ಶಿ ಮಹೇಂದ್ರ ಮೌರ್ಯ ಸ್ವಾಗತಿಸಿ ದಸಂಸ ಜಿಲ್ಲಾ ಸಂಚಾಲಕ ಮರ್ಲೆ ಅಣ್ಣಯ್ಯ ವಂದಿಸಿದರು.

ರಾಜ್ಯದ ಸುಪ್ರಸಿದ್ಧ ರಾಜಕೀಯ ಮುತ್ಸದ್ದಿಯಾಗಿದ್ದ ಬಿ.ರಾಚಯ್ಯನವರ ಪುತ್ರ ಬಾಲರಾಜ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Basavatva is not just a message it is a path of life

About Author

Leave a Reply

Your email address will not be published. Required fields are marked *

You may have missed