September 19, 2024
ಕೃತಕ ಬುದ್ಧಿಮತ್ತೆ ಮತ್ತು ಯಂತ್ರಕಲಿಕೆ ಶಾಖೆ ವತಿಯಿಂದ ವಿದ್ಯಾರ್ಥಿ ಅಭಿವೃದ್ಧಿ ಕಾರ್ಯಕ್ರಮ

ಕೃತಕ ಬುದ್ಧಿಮತ್ತೆ ಮತ್ತು ಯಂತ್ರಕಲಿಕೆ ಶಾಖೆ ವತಿಯಿಂದ ವಿದ್ಯಾರ್ಥಿ ಅಭಿವೃದ್ಧಿ ಕಾರ್ಯಕ್ರಮ

ಚಿಕ್ಕಮಗಳೂರು: ಪ್ರಸ್ತುತ ವಿದ್ಯಾಮಾನದಲ್ಲಿ ತಂತ್ರಜ್ಞಾನವು ಅತಿಹೆಚ್ಚು ವೇಗವಾಗಿ ಬೆಳವ ಣಿಗೆ ಹೊಂದುತ್ತಿದೆ. ಹೊಸ ಜ್ಞಾನ ತಂತ್ರಾಂಶದ ಅಗತ್ಯ ಬಹಳಷ್ಟಿದ್ದು, ಜ್ಞಾನದ ಯುಗದಲ್ಲಿ ಪ್ರತಿಯೊಬ್ಬರು ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳಬೇಕು ಎಂದು ಎಐಟಿ ಕಾಲೇಜು ಪ್ರಾಂಶುಪಾಲ ಡಾ.ಸಿ.ಟಿ.ಜಯದೇವ್ ಹೇಳಿದರು.

ನಗರದ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಕೃತಕ ಬುದ್ಧಿಮತ್ತೆ ಮತ್ತು ಯಂತ್ರಕಲಿಕೆ ಶಾಖೆ ವತಿಯಿಂದ ಸೋಮವಾರ ಆಯೋಜಿಸಿದ್ದ ವಿದ್ಯಾರ್ಥಿ ಅಭಿವೃದ್ಧಿ ಕಾರ್ಯಕ್ರಮದ ಉದ್ಘಾಟನೆ ನಡೆಸಿ ಅವರು ಮಾತನಾಡಿದರು

ವಿದ್ಯಾರ್ಥಿಗಳು ಕಲಿಕೆಯ ಅವಧಿಯಲ್ಲಿ ಇವುಗಳ ಬಗ್ಗೆ ಜ್ಞಾನ ಹೊಂದುವುದು ಬಹಳ ಮುಖ್ಯವಾ ಗಿದೆ. ಇಲ್ಲದಿದ್ದರೆ ಸ್ಪರ್ಧಾತ್ಮಕ ಯುಗದಲ್ಲಿ ಅಭಿವೃದ್ಧಿ ಹೊಂದುವುದು ಕ?ಕರವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಕೃತಕ ಬುದ್ಧಿಮತ್ತೆಯ ಪಾತ್ರ ಅನಿವಾರ್ಯವಾಗಿದೆ ಎಂದರು.

ಕಲಿಯುವ ವಿ?ಯದಲ್ಲಿ ವಿಶೇ? ಜ್ಞಾನ ಹೊಂದುವುದು ಹಾಗೂ ಹೊಸತನವನ್ನು ಮಾಡುವ ಜ್ಞಾನವನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಕಲಿಕೆಯು ನಿಮ್ಮೊಂದಿಗೆ ದೇಶದ ಅಭಿವೃದ್ಧಿ ಗೂ ಸಹಕಾರಿ ಆಗುತ್ತವೆ ಆದ್ದರಿಂದ ವಿದ್ಯಾರ್ಥಿಗಳು ಇಂತಹ ವಿ?ಯಗಳಲ್ಲಿ ವಿಶೇ? ಆಸಕ್ತಿ ಹಾಗೂ ಜ್ಞಾನವನ್ನು ಹೊಂದಿ ಭವಿ?ದ ಬೆಳವಣಿಗೆಯತ್ತ ಗಮನಹರಿಸಬೇಕು ಎಂದು ತಿಳಿಸಿದರು.

ಪ್ರಾಧ್ಯಾಪಕ ಎಂ.ಎಸ್.ಧೃವ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿ ಕೃತಕ ಬುದ್ಧಿ ಮತ್ತು ಯಂತ್ರ ಕಲಿಕೆಯಲ್ಲಿ ವಿದ್ಯಾರ್ಥಿಗಳು ತಂತ್ರಾಂಶದಲ್ಲಿ ಅನೇಕ ವಿ?ಯಗಳನ್ನು ತಿಳಿದುಕೊಳ್ಳಬೇ ಕಾಗುತ್ತದೆ. ಈ ವಿ?ಯಗಳ ಬಗ್ಗೆ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಪ್ರೋಗ್ರಾಮಿಂಗ್ ಭಾ?ಗಳು ಬಹಳ ಮುಖ್ಯವಾಗುತ್ತವೆ ಎಂದರು.

ಪೈಥಾನ್, ಜಾವಾ ಅಂತಹ ಹಲವಾರು ತಂತ್ರಾಂಶದ ಭಾ?ಗಳು ಕಲಿಯುವುದು ಅಗತ್ಯ. ಈ ತಂತ್ರಜ್ಞಾನ ಯುಗದಲ್ಲಿ ಕಲಿಕೆಗೆ ಮಿತಿ ಇಲ್ಲ, ವಿಶೇ?ವಾಗಿ ಕಲಿತು ಹೊಸತನ ರೂಪಿಸುವುದರ ಮೂಲಕ ಎಲ್ಲರಿಗಿಂತ ವಿಭಿನ್ನವಾಗಿ ಕಲಿಯುವುದನ್ನು ಸಮಾಜದಲ್ಲಿ ಗುರುತಿಸಿಕೊಳ್ಳಬಹುದು ಎಂದರು.

ಪ್ರತಿಯೊಂದು ಕ್ಷೇತ್ರಕ್ಕೂ ತಂತ್ರಜ್ಞಾನ ಬಹಳ ಮುಖ್ಯ, ತಂತ್ರಜ್ಞಾನದಲ್ಲಿ ವಿಶೇ? ಜ್ಞಾನವನ್ನು ಹೊಂದಿ ಭವಿ?ವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಬಹುದು. ವಿದ್ಯಾರ್ಥಿ ದಿನಗಳಲ್ಲಿ ಇಂತಹ ವಿ?ಯಗಳನ್ನು ಹೆಚ್ಚು ಕಲಿತು ಉತ್ತಮ ಭವಿ? ರೂಪಿಸಿಕೊಳ್ಳಲು ಸಿದ್ದರಾಗಿ ಎಂದು ಭಾಷೆಯಲ್ಲಿ ಬಳಸಿಕೊಂಡು ಚಿತ್ರಾತ್ಮಕ ಮತ್ತು ಸಂಖ್ಯಾಶಾಸ್ತ್ರದ ವಿಶ್ಲೇಷಣೆಯ ಬಗ್ಗೆ ಉಪನ್ಯಾಸ ನೀಡಿದರು.

ಎಐಎಂಲ್ ಶಾಖೆ ಮುಖ್ಯಸ್ಥೆ ಡಾ. ಎಂ.ಆರ್.ಸುನೀತಾ ಮಾತನಾಡಿ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡಲು ೫೦ಕ್ಕೂ ಹೆಚ್ಚಿನ ವಿ?ಯಗಳಿವೆ. ಪ್ರತಿಯೊಬ್ಬರು ಒಂದೊಂದು ವಿ?ಯಗಳಲ್ಲಿ ತಮ್ಮದೇ ಆದ ಜ್ಞಾನವನ್ನು ಹೊಂದಿರುತ್ತಾರೆ. ಆಸಕ್ತಿಯಿರುವ ವಿ?ಯಗಳ ಮೇಲೆ ಅಧ್ಯಯನ ನಡೆಸುವುದ ರೊಂದಿಗೆ ಈ ಯುಗಕ್ಕೆ ಅಗತ್ಯವಿರುವ ಪಠ್ಯೇತರ ವಿ?ಯಗಳ ಬಗ್ಗೆ ಜ್ಞಾನವನ್ನು ಹೊಂದಬೇಕು ಎಂದರು.

ಈ ಕಾರಣದಿಂದ ಅನೇಕ ಚಟುವಟಿಕೆಗಳನ್ನು ಆಯೋಜಿಸಿ ವಿದ್ಯಾರ್ಥಿಗಳ ಜ್ಞಾನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದು ಪ್ರತಿಯೊಬ್ಬರು ಕಾರ್ಯಕ್ರಮದ ಉದ್ದೇಶ ಹಾಗೂ ಅದರ ಮಹತ್ವವನ್ನು ಮನಸ್ಸಿನ ತಮ್ಮ ಜ್ಞಾನವನ್ನು ಇನ್ನ? ವೃದ್ಧಿಸಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಡಾಟಾ ಸೈನ್ಸ್ ಶಾಖೆ ಮುಖ್ಯಸ್ಥ ಡಾ|| ಎಂ.ಜೆ.ಆದರ್ಶ್ ಹಾಗೂ ಬೋಧಕ, ಬೋಧಕೇತರ, ವಿದ್ಯಾಗಳು ಹಾಜರಿದ್ದರು.

Student Development Program by Artificial Intelligence and Machine Learning Branch

About Author

Leave a Reply

Your email address will not be published. Required fields are marked *

You may have missed