September 8, 2024

ಚಾರ್ಮಡಿ ಘಾಟ್‌ನಲ್ಲಿ ಪ್ರಯಾಣೀಕರಿಗೆ ಗಜರಾಜನ ದರ್ಶನ

0
ಚಾರ್ಮಡಿ ಘಾಟ್‌ನಲ್ಲಿ ಪ್ರಯಾಣೀಕರಿಗೆ ಗಜರಾಜನ ದರ್ಶನ

ಚಾರ್ಮಡಿ ಘಾಟ್‌ನಲ್ಲಿ ಪ್ರಯಾಣೀಕರಿಗೆ ಗಜರಾಜನ ದರ್ಶನ

ಚಿಕ್ಕಮಗಳೂರು: ಮಳೆಯಾಗುತ್ತಿದ್ದರಿಂದ ಪಕೃತಿ ಸೌಂದರ್ಯವನ್ನು ಕಂಡು ಕಣ್ತುಂಬಿಕೊಳ್ಳಲು ಮಲೆನಾಡಿನ ಜಿಲ್ಲೆಗಳಿಗೆ ಪ್ರವಾಸಕ್ಕೆಂದು ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಿದ್ದಾರೆ. ವಿಶೇಷವಾಗಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಚಾರ್ಮಡಿಘಾಟ್‌ನ ರಸ್ತೆಯಲ್ಲಿ ಪ್ರಯಾಣಿಸುವುದು ಬಹಳ ರೋಮಾಂಚನಕಾರಿಯಾಗಿರುತ್ತದೆ. ಹಸಿರು ಕಾನನ ಮಧ್ಯೆ ಘಾಟ್‌ನಲ್ಲಿ ಪ್ರಯಾಣಿಸುವುದು ಅವರ್ಣಿಯ ಚಾರ್ಮಡಿ ಘಾಟ್‌ನಲ್ಲಿ ತೆರಳುತ್ತಿದ್ದ ಜನರಿಗೆ ಗಜರಾಜನ ದರ್ಶನವಾಗಿದೆ.

ಚಾರ್ಮಡಿ ಘಾಟ್‌ನ ರಸ್ತೆ ಮಧ್ಯೆದಲ್ಲಿ ಒಂಟಿ ಸಲಗ ಸೊಂಡಿಲಿನಲ್ಲಿ ಮರದ ದಿಂಬಿ ಹಿಡಿದು ನಿಂತಿದ್ದನು. ಗಜರಾಜನ ಈ ಅವತಾರ ಕಂಡು ಜನರು ವಾಹನಗಳನ್ನು ಸೈಡ್ ಅಲ್ಲಿ ಪಾರ್ಕ್ ಮಾಡಿ, ಮೊಬೈಲ್‌ನಲ್ಲಿ ಆನೆಯ ಆರ್ಭಟವನ್ನು ಸೆರೆ ಹಿಡಿದಿದ್ದಾರೆ. ಈ ಒಂಟಿ ಸಲಗಕ್ಕೆ ಒಂಟಿ ಸಲಗಕ್ಕೆ ಮದವೇರಿರುವ ಶಂಕೆ ವ್ಯಕ್ತವಾಗಿದೆ.

ರಸ್ತೆ ಮಧ್ಯೆದಲ್ಲಿ ಒಂಟಿ ಸಲಗ ನಿಂತಿದ್ದರಿಂದ ಚಾರ್ಮಾಡಿ ಘಾಟ್‌ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ, ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇನ್ನು ಈ ಒಂಟಿ ಸಲಗ ಹಗಲು-ರಾತ್ರಿ ಎನ್ನದೆ ಉಪಟಳ ನೀಡುತ್ತಿದೆ. ಆದರೂ ಕೂಡ ಅರಣ್ಯ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.

Gajaraja’s darshan to travelers at Charmadi Ghat

About Author

Leave a Reply

Your email address will not be published. Required fields are marked *

You may have missed