September 19, 2024

ದಾಸರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ದೀಪಕ್ ಅವಿರೋಧ ಆಯ್ಕೆ

0
ದಾಸರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ದೀಪಕ್ ಅವಿರೋಧ ಆಯ್ಕೆ

ದಾಸರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ದೀಪಕ್ ಅವಿರೋಧ ಆಯ್ಕೆ

ಚಿಕ್ಕಮಗಳೂರು: ತಾಲೂಕಿನ ದಾಸರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ದೀಪಕ್.ಇ ಅವರು ೨ನೇ ಬಾರಿಗೆ ಅವಿರೋಧ ಆಯ್ಕೆಯಾಗಿದ್ದಾರೆ.

ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಜಿಲ್ಲಾ ಬಿಜೆಪಿ ಮುಖಂಡ ಟಿ.ರಾಜಶೇಖರ್ ಕಳೆದ ೨೦ ವ?ಗಳಿಂದ ಈ ಗ್ರಾಮ ಪಂಚಾಯಿತಿ ಬಿಜೆಪಿ ಭದ್ರಕೋಟೆಯಾಗಿದ್ದು ಮಾಜಿ ಶಾಸಕ ಸಿ.ಟಿ ರವಿ ನೇತೃತ್ವದಲ್ಲಿ ಅಭಿವೃದ್ಧಿಯಾಗಿದೆ ಅದನ್ನು ಮುಂದುವರೆಸಲಿ ಎಂದು ಹಾರೈಸಿದರು.

ಬಡವರು, ದೀನದಲಿತರು, ಕೂಲಿ ಕಾರ್ಮಿಕರಿಗೆ ಹೆಚ್ಚು ಅನುಕೂಲವಾಗುವ ರೀತಿ ಮಾದರಿಯಾದ ಗ್ರಾಮ ಪಂಚಾಯಿತಿ ಆಗಲಿ ಇದೊಂದು ದೇವಾಲಯ ಎಂಬ ಮನೋಭಾವದಿಂದ ನೂತನ ಅಧ್ಯಕ್ಷರು ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ ಎಂದರು.

ಸಿ.ಟಿ ರವಿ ಹಾಕಿಕೊಟ್ಟ ಮಾರ್ಗದಲ್ಲಿ ಬಿಜೆಪಿಯನ್ನು ಶಕ್ತಿಶಾಲಿಯಾಗಿ ಕಟ್ಟಿ ದಾಸರಹಳ್ಳಿ ಗ್ರಾಮ ಪಂಚಾಯಿತಿ ಇವರ ಅಧಿಕಾರಾವಧಿಯಲ್ಲಿ ಇಡೀ ರಾಜ್ಯದಲ್ಲೇ ಮಾದರಿಯಾಗಿ ಹೊರಹೊಮ್ಮಲಿ ಎಂದ ಅವರು ಸರ್ಕಾರ ಗ್ರಾಮ ಪಂಚಾಯಿತಿಗಳಿಗೆ ಅನುದಾನ ಕಡಿತಗೊಳಿಸಿರುವುದರಿಂದ ಅಭಿವೃದ್ಧಿ ಕಾರ್ಯ ಸ್ಥಗಿತವಾಗಿದೆ ಎಂದು ಆರೋಪಿಸಿದರು.

ಶಾಸಕರ ಮೇಲೆ ಒತ್ತಡ ಹಾಕುವ ಮೂಲಕ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ವಿಶೇ? ಅನುದಾನ ನೀಡುವಂತೆ ಒತ್ತಾಯಿಸಲಾಗುವುದು ಈ ಮೂಲಕ ಹಳ್ಳಿಗಳ ಅಭಿವೃದ್ಧಿಯಾಗಬೇಕು ಜೊತೆಗೆ ಈ ಪಂಚಾಯಿತಿಯ ಅಭಿವೃದ್ಧಿಗೆ ಎಲ್ಲಾ ಸದಸ್ಯರು ಸಹಕರಿಸಬೇಕೆಂದು ಕಿವಿಮಾತು ಹೇಳಿದರು.

ಮಾಜಿ ಅಧ್ಯಕ್ಷ ಟಿ.ಎಸ್ ಶಿವೇಗೌಡ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಯ ಉದ್ಯೋಗ ಖಾತ್ರಿ ಯೋಜನೆಯಡಿ, ಗ್ರಾ.ಪಂ ನಲ್ಲಿ ೧೫ ನೇ ಹಣಕಾಸು ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದೆ. ನೂತನ ಅಧ್ಯಕ್ಷರ ಆಯ್ಕೆಗೆ ಸಹಕರಿಸಿದ ಎಲ್ಲಾ ಸದಸ್ಯರಿಗೆ ಅಭಿನಂದಿಸಿದರು.

ನೂತನವಾಗಿ ಆಯ್ಕೆಯಾದ ದೀಪಕ್.ಇ ಅವರು ಮಾತನಾಡಿ, ದಾಸರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಚರಂಡಿ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಎಲ್ಲ ಸದಸ್ಯರ ಸಹಕಾರ, ವಿಶ್ವಾಸ ಪಡೆದುಕೊಂಡು ಬದ್ಧನಾಗಿರುವುದಾಗಿ ಹೇಳಿದರು.

ಪಕ್ಷಕ್ಕೆ ಹಾಗೂ ಮಾಜಿ ಶಾಸಕರಿಗೆ ಶಿಸ್ತುಬದ್ಧವಾಗಿ ನಡೆದುಕೊಳ್ಳುತ್ತೇನೆ. ಜೊತೆಗೆ ನನ್ನ ಆಯ್ಕೆಗೆ ಸಹಕರಿಸಿದ ದಾಸರಹಳ್ಳಿ ಗ್ರಾಮ ಪಂಚಾಯಿತಿ ಎಲ್ಲಾ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಜೆ.ಡಿ ಲೋಕೇಶ್, ಮಾಜಿ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷರಾದ ವಿನೋದನಾಗೇಶ್, ಸದಸ್ಯರುಗಳಾದ ಲಲಿತಾ.ಆರ್, ಎನ್.ಮಂಜುನಾಥ್, ಹೆಚ್.ಸಿ.ಅವಿಲಾ, ಮಾಲಾಶ್ರೀ, ಸ್ಥಳೀಯರಾದ ಕೌಶಿಕ್, ದೇವರಾಜ್, ಪಾಪಣ್ಣ, ಬಿಜೆಪಿ ಮುಖಂಡರುಗಳಾದ ಸೀತಾರಾಮ್ ಭರಣ್ಯ, ವೆಂಕಟೇಶ್, ಎಸ್.ಡಿ.ಎಂ ಮಂಜು, ಹಿರೇಮಗಳೂರು ಕೇಶವ, ಕನಕರಾಜ್ ಅರಸ್, ಮತ್ತಿತರರಿದ್ದರು. ಚುನಾವಣಾಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ರವೀಶ್ ಹೆಚ್.ಸಿ ನೂತನ ಅಧ್ಯಕ್ಷ ದೀಪಕ್.ಇ ಅವರ ಆಯ್ಕೆಯನ್ನು ಘೋಷಿಸಿದರು.

Deepak was elected unopposed as Dasarahalli Gram Panchayat President

About Author

Leave a Reply

Your email address will not be published. Required fields are marked *

You may have missed