September 19, 2024

ಶಿಕ್ಷಣ ಕ್ಷೇತ್ರದ ಲೋಪದೋಷ ಪರಿಹಾರಕ್ಕೆ ಪ್ರಾಮಾಣಿಕ ಯತ್ನ

0
ನೈರುತ್ಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಭಾಸ್ಕರ್‌ಶೆಟ್ಟಿ ಸುದ್ದಿಗೋಷ್ಠಿ

ನೈರುತ್ಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಭಾಸ್ಕರ್‌ಶೆಟ್ಟಿ ಸುದ್ದಿಗೋಷ್ಠಿ

ಚಿಕ್ಕಮಗಳೂರು: ಶಿಕ್ಷಣ ವ್ಯವಸ್ಥೆಯಲ್ಲಿ ಹಲವಾರು ಲೋಪದೋ?ಗಳಿದ್ದು ಅವುಗಳನ್ನು ಸರಿಪಡಿಸುವ ಜೊತೆಗೆ ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಲು ಸಂಕಲ್ಪ ಮಾಡಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನೈರುತ್ಯ ಶಿಕ್ಷಕರ ಕ್ಷೇತ್ರದ ಭಾಸ್ಕರ್‌ಶೆಟ್ಟಿ ಮನವಿ ಮಾಡಿದರು.

ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿನ್ನೆ ನಾಮಪತ್ರ ಸಲ್ಲಿಸಿರುವುದಾಗಿ ತಿಳಿಸಿದರು.

ಸುಮಾರು ೩೦ ವ?ಗಳಿಗೂ ಹೆಚ್ಚು ಕಾಲದಿಂದ ಶಿಕ್ಷಣ ಕ್ಷೇತ್ರದಲ್ಲಿ ಪ್ರಾಥಮಿಕ ಶಾಲೆಯಿಂದ ಪದವಿಪೂರ್ವ ಕಾಲೇಜು, ಕ್ಷೇತ್ರ ಶಿಕ್ಷಣಾಧಿಕಾರಿ, ಪ್ರಭಾರಿ ಉಪನಿರ್ದೇಶಕರಾಗಿ ವಿವಿಧ ಹಂತದಲ್ಲಿ ಸೇವೆಸಲ್ಲಿಸಿ ಶಿಕ್ಷಣ ಕ್ಷೇತ್ರದ ಬಗ್ಗೆ ಸಂಪೂರ್ಣವಾಗಿ ಅರಿವು ಹೊಂದಿರುವ ಅನುಭವ ಹೊಂದಿರುವುದಾಗಿ ತಿಳಿಸಿದರು.

ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ವರ್ಗದ ಶಿಕ್ಷಕರು ಅನೇಕ ಸಮಸ್ಯೆಗಳಲ್ಲಿದ್ದಾರೆ ಬಡ್ತಿ, ಮುಂಬಡ್ತಿ, ಅವಕಾಶ ವಂಚಿತರಾಗಿದ್ದಾರೆ. ಪಿಂಚಣಿ ಯೋಜನೆಯಲ್ಲಿ ಅನಾನುಕೂಲವಾಗಿದೆ. ವರ್ಗಾವಣೆ ನಿಯೋಜನೆಗಳಲ್ಲಿ ವ್ಯಾಪಕವಾದ ತಾರತಮ್ಯವಿದ್ದು ಇವುಗಳನ್ನು ಸರಿಪಡಿಸಲು ಇಲ್ಲಿಯವರೆಗೂ ಯಾರೂ ಪ್ರಯತ್ನ ನಡೆಸಿಲ್ಲ ಎಂದರು.

ಶಿಕ್ಷಣ ಕ್ಷೇತ್ರದಲ್ಲಿನ ಸಂಪೂರ್ಣ ಅರಿವಿನೊಂದಿಗೆ ಸುಧೀರ್ಘಕಾಲದ ಅನುಭವ ಹೊಂದಿರುವ ತಾವು ಶಿಕ್ಷಕ ಸಮೂಹದ ಪರವಾಗಿ ಪ್ರಾಮಾಣಿಕವಾದ ಸೇವೆಸಲ್ಲಿಸಿರುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸಿದ್ದು ತಮ್ಮ ಅನುಭವವನ್ನು ಆಧರಿಸಿ ಶಿಕ್ಷಕರ ಸೇವೆ ಮಾಡಲು ಆಶೀರ್ವದಿಸುವಂತೆ ಮನವಿ ಮಾಡಿದರು.

ತಮ್ಮನ್ನು ಆಯ್ಕೆ ಮಾಡಿದಲ್ಲಿ ಪಠ್ಯಪುಸ್ತಕಗಳ ಗೊಂದಲ, ವೇತನ ಹಾಗೂ ಬಡ್ತಿ-ಮುಂಬಡ್ತಿಯ ತಾರತಮ್ಯ ಸರಿಪಡಿಸುವ ಜೊತೆಗೆ ಎಲ್ಲಾ ಹಂತದ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ಸಂಕಲ್ಪ ಮಾಡಿರುವುದಾಗಿ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಡಾ. ಸುಬ್ಬಣ್ಣಶೆಟ್ಟಿ, ಗಣೇಶ್ ಇದ್ದರು

A sincere attempt to solve the loopholes in the education sector

About Author

Leave a Reply

Your email address will not be published. Required fields are marked *

You may have missed