September 16, 2024

ಶಿಕ್ಷಕರಲ್ಲದವರನ್ನು ತಿರಸ್ಕರಿಸಲು ಅರುಣ್ ಹೊಸಕೊಪ್ಪ ಮನವಿ

0
ಡಾ. ಅರುಣ್ ಹೊಸಕೊಪ್ಪ

ಡಾ. ಅರುಣ್ ಹೊಸಕೊಪ್ಪ

ಚಿಕ್ಕಮಗಳೂರು:  ಶಿಕ್ಷಕರ ಕ್ಷೇತ್ರದಿಂದ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಶಿಕ್ಷಕರಲ್ಲದವರನ್ನು ತಿರಸ್ಕರಿಸಿ ಶಿಕ್ಷಕರನ್ನು ಮಾತ್ರ ಆಯ್ಕೆ ಮಾಡುವಂತೆ ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡಾ. ಅರುಣ್ ಹೊಸಕೊಪ್ಪ ಅವರು ಮನವಿ ಮಾಡಿದರು.

ಇಂದು ನಗರಕ್ಕಾಗಮಿಸಿದ್ದ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಂದಿನ ಜೂನ್.೩ ರಂದು ನಡೆಯಲಿರುವ ವಿಧಾನಪರಿ?ತ್ ಚುನಾವಣೆಯಲ್ಲಿ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ತಾವು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಹಿಂದಿನ ಚುನಾವಣೆಯಲ್ಲಿಯೂ ತಾವು ಸ್ಪರ್ಧಿಸಿ ಪರಾಭವಗೊಂಡಿದ್ದು ಈಗ ಎರಡನೇ ಬಾರಿ ಸ್ಪರ್ಧಿಸುತ್ತಿರುವುದಾಗಿ ತಿಳಿಸಿದರು.

ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಮತದಾನ ಮಾಡಲು ಕನಿ? ೩ ವ? ಸೇವೆ ಸಲ್ಲಿಸಿದ ಅನುಭವ ಇರಬೇಕು. ಆದರೆ ಚುನಾವಣೆಗೆ ಸ್ಪರ್ಧಿಸುವವರಿಗೆ ಒಂದು ದಿನದ ಅನುಭವವೂ ಇರುವುದಿಲ್ಲ, ಈ ಪದ್ಧತಿ ಹೋಗಬೇಕು. ಶಿಕ್ಷಕರ ಕ್ಷೇತ್ರದಿಂದ ಶಿಕ್ಷಕರೇ ಆಯ್ಕೆಯಾಗಬೇಕೆಂದು ಪ್ರತಿಪಾದಿಸಿದ ಅವರು ತಾವು ಕೂಡ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಅನುಭವ ಹೊಂದಿದ್ದು ತಮ್ಮ ಪರವಾಗಿ ಪ್ರಥಮ ಪ್ರಾಶಸ್ತ್ಯದ ಮತ ನೀಡಬೇಕೆಂದು ವಿನಂತಿಸಿದರು.

ನೈರುತ್ಯ ಶಿಕ್ಷಕರ ಕ್ಷೇತ್ರ ಹಿಂದೆ ಶಿಕ್ಷಕರಾಗಿಯೇ ಬಂದಿದ್ದ ಗಣೇಶ್ ಕಾರ್ಣಿಕ್ ಅವರ ಕಾಲದಲ್ಲಿ ಉತ್ತಮವಾಗಿತ್ತು. ನಂತರ ಆಯ್ಕೆಯಾಗಿ ಬಂದ ಹಾಲಿ ಸದಸ್ಯರ ಅವಧಿಯಲ್ಲಿ ಆಮಿ?, ಭ್ರ?ಚಾರ, ಜಾತಿ ತಾರತಮ್ಯ ಇತ್ಯಾದಿಗಳಿಂದ ಶಿಕ್ಷಕರ ಕ್ಷೇತ್ರ ಮಲಿನವಾಗಿದೆ. ಇಂತಹ ಕಳಂಕ ಹೋಗಬೇಕಾಗಿದೆ ಎಂದು ಹೇಳಿದರು.

ಶಿಕ್ಷಕರ ಕ್ಷೇತ್ರಕ್ಕೆ ಶಿಕ್ಷಕರನ್ನೇ ಆಯ್ಕೆ ಮಾಡಲು ಇಡೀ ಶಿಕ್ಷಕ ಸಮೂಹ ತೀರ್ಮಾನ ಮಾಡಬೇಕು, ಇಲ್ಲದಿದ್ದಲ್ಲಿ ಕೋಟ್ಯಾಧಿಪತಿಗಳು, ಗಣಿ-ಧಣಿಗಳು, ಭ್ರ? ವ್ಯಕ್ತಿಗಳು ಆಯ್ಕೆಯಾಗಿ ಇಡೀ ವ್ಯವಸ್ಥೆಯೇ ಹಾಳಾಗುತ್ತದೆ. ಅಂತಹವರಿಗೆ ಶಿಕ್ಷಕರ ಸಮಸ್ಯೆಗಳ ಅರಿವು ಇರುವುದಿಲ್ಲವೆಂದು ತಿಳಿಸಿದರು.

ಈ ಬಾರಿ ಚುನಾವಣೆಯಲ್ಲಿ ಶಿಕ್ಷಕ ವೃತ್ತಿ ಮತ್ತು ಸಮಸ್ಯೆ ಬಗ್ಗೆ ಅನುಭವ ಹೊಂದಿರುವ ತಮಗೆ ಮತ ನೀಡುವಂತೆ ಮನವಿ ಮಾಡಿದರಲ್ಲದೆ, ತಮಗೆ ಮತ ನೀಡದಿದ್ದಲ್ಲಿ ಶಿಕ್ಷಕರಲ್ಲದವರನ್ನು ತಿರಸ್ಕರಿಸಿ ಶಿಕ್ಷಕ ವೃತ್ತಿಯಿಂದ ಬಂದವರಿಗೆ ಮಾತ್ರ ಮತ ನೀಡುವಂತೆ ಮನವಿ ಮಾಡಿದರು.

Arun Hosakoppa appeals to reject non-teachers

About Author

Leave a Reply

Your email address will not be published. Required fields are marked *