September 19, 2024
ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಹಾಫೀಝ್ ರಿಯಾಝ್ ಖಾನ್

ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಹಾಫೀಝ್ ರಿಯಾಝ್ ಖಾನ್

ಚಿಕ್ಕಮಗಳೂರು: ನಗರದ ಐ.ಜಿ ರಸ್ತೆಯ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ೨೬-೦೫-೨೦೨೪ ನೇ ಭಾನುವಾರ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮಂಗಳೂರು ಮತ್ತು ಚಿಕ್ಕಮಗಳೂರಿನ ನ್ಯಾಷನಲ್ ವೆಲ್ಫೇರ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ನ್ಯಾಷನಲ್ ವೆಲ್ಫೇರ್ ಆಂಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಹಾಫೀಝ್ ರಿಯಾಝ್ ಖಾನ್ ತಿಳಿಸಿದರು.

ಸುದ್ಧಿಗಾರರೊಂದಿಗೆ ಮಾತನಾಡಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ವೈದ್ಯಕೀಯ ಶಸ್ತ್ರ ತಜ್ಞರು, ಮೂಳೆ ತಜ್ಞರು, ಮಕ್ಕಳ ತಜ್ಞರು, ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞರು, ಶಸ್ತ್ರ ಚಿಕಿತ್ಸಾ ತಜ್ಞರು, ಚರ್ಮ ರೋಗ, ಕಿವಿ, ಮೂಗು, ಗಂಟಲು ತಜ್ಞರಿಂದ ಜನರಲ್ ಮೆಡಿಶನ್, ಅಸ್ತಮ ಸಂಬಂದ ಕಾಯಿಲೆಗಳು, ಕ್ಯಾನ್ಸರ್ ಚಿಕಿತ್ಸೆ, ಮಕ್ಕಳ ಶಸ್ತ್ರ ಚಿಕಿತ್ಸೆ, ಎಲುಬು ಮತ್ತು ಕಿವಿ ವಿಭಾಗ, ಬೆನ್ನು ಮೂಳೆ ಚಿಕಿತ್ಸೆ, ಮೊಣಕಾಲು ಚಿಕಿತ್ಸೆ, ಅಪೆಂಡಿಕ್ಸ್, ಅಲ್ಸರ್, ಹರ್ನಿಯಾ, ಮೂಲವ್ಯಾದಿ, ಗರ್ಭಕೋಶದ ಗಡ್ಡೆ, ಕಿವಿ, ಮೂಗು, ಗಂಟಲು, ಥೈರಾಯಿಡ್, ಚಿಕಿತ್ಸೆ ಮಾಡುವುದರ ಜೊತೆಗೆ ಉಚಿತವಾಗಿ ಔಷಧಿಗಳನ್ನು ನೀಡಲಾಗುವುದು, ನಗರದ ನಾಗರೀಕರು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ತಮ್ಮ ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆ ತಿಳಿಸಿದರು.

Massive free health checkup camp

About Author

Leave a Reply

Your email address will not be published. Required fields are marked *

You may have missed