September 19, 2024

ದೇಶದ ಭವಿಷ್ಯ ರೂಪಿಸುವಲ್ಲಿ ರಾಜೀವ್ ಕೊಡುಗೆ ಅಪಾರ

0
ಶಾಸಕ ಹೆಚ್.ಡಿ.ತಮ್ಮಯ್ಯ ಸುದ್ದಿಗೋಷ್ಠಿ

ಶಾಸಕ ಹೆಚ್.ಡಿ.ತಮ್ಮಯ್ಯ ಸುದ್ದಿಗೋಷ್ಠಿ

ಚಿಕ್ಕಮಗಳೂರು:  ಸ್ಥಳೀಯಮಟ್ಟದಲ್ಲಿ ಅಧಿಕಾರ ವಿಕೇಂದ್ರೀಕರಣಗೊಳಿಸಿ ರಾಷ್ಟ್ರದ ದಲಿ ತರು, ಹಿಂದುಳಿದ ವರ್ಗ ಹಾಗೂ ಜನಸಾಮಾನ್ಯರಿಗೆ ಶಾಶ್ವತವಾಗಿ ಮೀಸಲಾತಿಯನ್ನು ಬೇರೂರಿಸಿದ ನಾ ಯಕ ದಿ|| ರಾಜೀವ್‌ಗಾಂಧಿ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಏರ್ಪಡಿಸಿದ್ದ ಮಾಜಿ ಪ್ರಧಾನಿ ದಿ|| ರಾಜೀವ್‌ಗಾಂಧಿ ೩೩ನೇ ಪುಣ್ಯಸ್ಮರಣೆ ಅಂಗವಾಗಿ ಮಂಗಳವಾರ ಕಾರ್ಯಕರ್ತರು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸಲ್ಲಿಸಿದರು.

ಮತದಾನದ ವಯಸ್ಸನ್ನು ಕಡಿಮೆಗೊಳಿಸುವುದು, ಪಂಚಾಯತ್ ರಾಜ್, ಟೆಲಿಕಾಂ ಮತ್ತು ಐಟಿ ಕ್ರಾಂತಿಯನ್ನು ಬಲಪಡಿಸುವುದು ಮತ್ತು ನಿರಂತರ ಶಾಂತಿ ಒಪ್ಪಂದಗಳಂತಹ ಬಹು ಮಧ್ಯಸ್ಥಿಕೆಗಳ ಮೂ ಲಕ ರಾಜೀವ್‌ಗಾಂಧಿ ಭಾರತವನ್ನು ಪರಿವರ್ತಿಸಿದರು ಎಂದರು.

ರಾಜೀವ್‌ಗಾಂಧಿ ಹತ್ಯೆಗೊಳಗಾಗದೇ ನಮ್ಮೊಂದಿಗೆ ಜೀವಂತವಾಗಿದಿದ್ದರೆ ದೇಶ ಇನ್ನಷ್ಟು ಬಲಿಷ್ಟವಾ ಗುವ ಜೊತೆಗೆ ಅಭಿವೃಧ್ದಿ ಭಾರತವನ್ನು ಕಾಣಲು ಸಾಧ್ಯವಾಗುತ್ತಿತ್ತು. ದುರಾದೃಷ್ಟ ಸಂಗತಿ ಇಂಥ ಮಹಾ ಮೇಧಾವಿ ನಾಯಕನನ್ನು ಕಳೆದುಕೊಂಡಿರುವುದು ದೇಶದ ದೊಡ್ಡ ದುರಂತ ಎಂದರು.

ಜವಾಹರ್‌ಲಾಲ್ ನೆಹರು ಹಾಗೂ ಇಂದಿರಾಗಾಂಧಿ ಪ್ರಧಾನಿಯಾದ ಸಂದರ್ಭದಲ್ಲಿ ಭಾರತ ಹಲ ವಾರು ಯುದ್ಧಗಳನ್ನು ಎದುರಿಸಿ ವಿಜಯಶಾಲಿಯಾಗಿದೆ. ಆದರೆ ಅಂದಿನ ಸಮಯದಲ್ಲಿ ಹೆಚ್ಚಾಗಿ ಸಾಮಾ ಜಿಕ ಜಾಲತಾಣ ಹಾಗೂ ಮಾಧ್ಯಮಗಳು ಇಲ್ಲದಿದ್ದ ಪಕ್ಷದಲ್ಲಿ ಜನತೆಗೆ ಸಮರ್ಪಕವಾಗಿ ಮುಟ್ಟಿಲ್ಲ ಎಂ ದರು.

ದೇಶವನ್ನಾಳಿದ ಅನೇಕ ಮಹಾಮೇಧಾವಿ ನಾಯಕರುಗಳು ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿ ದೇಶ ದ ಅಭಿವೃಧ್ದಿಗೆ ಹೆಚ್ಚು ಒತ್ತು ನೀಡಿದ್ದಾರೆ. ಆ ಸಾಲಿನಲ್ಲಿ ದಿ|| ಮಾಜಿ ಪ್ರಧಾನಿ ರಾಜೀವ್‌ಗಾಂಧಿ ರೈತರು, ಬಡ ವರು, ಹಿಂದುಳಿದ ವರ್ಗಕ್ಕೆ ಸರಿಸಮಾನ ನ್ಯಾಯ ಒದಗಿಸಿ ಅಗ್ರಗಣ್ಯ ಸ್ಥಾನವನ್ನು ಹೊಂದಿದ್ದಾರೆ ಎಂದು ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ ಮಾತನಾಡಿ ಇಂದಿರಾಗಾಂಧಿ ಪ್ರಾಣತ್ಯಾಗದ ಬಳಿಕ ದೇಶದ ಅಧಿಕಾರದ ಚುಕ್ಕಾಣಿ ಹಿಡಿದು ಸಮಾಜದಲ್ಲಿನ ಅನ್ಯಾಯ, ಶೋಷಣೆ ಹಾಗೂ ನೊಂದ ಜನಾಂಗಕ್ಕೆ ನ್ಯಾಯ ಒದಗಿಸುವ ಜೊತೆಗೆ ಆರ್ಥಿಕ ಪ್ರಗತಿಯತ್ತ ಮುನ್ನೆಡೆಸಿ ಭದ್ರಬುನಾದಿ ಹಾಕಿದವರು ರಾಜೀವ್ ಗಾಂಧೀ ಎಂದು ಬಣ್ಣಿಸಿದರು.

ದೇಶವನ್ನು ಅಭಿವೃದ್ಧಿ ಪಥದತ್ತ ಮುನ್ನೆಡೆಸುವ ನಿಟ್ಟಿನಲ್ಲಿ ರಾಜೀವ್ ದೂರದೃಷ್ಟಿ ಹೊಂದಿದ್ದರು. ಸರ್ವರಿಗೂ ಸಮಾನ ಹಕ್ಕು, ನ್ಯಾಯ ಕಲ್ಪಿಸುವ ಗುರಿಯನ್ನು ಚಾಚುತಪ್ಪದೇ ಪೂರೈಸಿದ ಧೀಮಂತ ನಾಯ ಕರು ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದು ತಿಳಿಸಿದರು.

ಜೂನ್ ೪ ರಂದು ದೇಶದ ಭವಿಷ್ಯವನ್ನು ಉಜ್ವಲಿಸುವ ದಿನವಾಗಿದೆ. ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರುವ ಮೂಲಕ ರಾಹುಲ್‌ಗಾಂಧಿ ಪ್ರಧಾನಿಯಾಗಲಿದ್ದಾರೆ. ದೇಶದ ಉದ್ದಗಲಕ್ಕೂ ಪಾದಯಾತ್ರೆ ಕೈಗೊಂ ಡು ಬಡವರ ಸಂಕಷ್ಟ, ನೋವು ನಲಿವುಗಳಿಗೆ ಬೆನ್ನುಲುಬಾಗಿ ನಿಂತು ನಿಮ್ಮೊಂದಿಗೆ ನಾವಿದ್ದೇವೆ ಎಂಬ ಭರ ವಸೆ ಮೂಡಿಸಿದ್ದಾರೆ ಎಂದರು.

ಕೆಪಿಸಿಸಿ ವಕ್ತಾರ ಹೆಚ್.ಹೆಚ್.ದೇವರಾಜ್ ಮಾತನಾಡಿ ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಚಿಂತನೆ ಗಳೇ ರಾಷ್ಟ್ರವನ್ನು ಇಂದಿಗೂ ಮುನ್ನೆಡೆಸಲು ಕಾರಣವಾಗಿದೆ. ಜನಪರ ಅಭಿವೃಧ್ದಿ, ದೇಶದ ವಿಚಾರದಲ್ಲಿ ಸಮರ್ಪಕ ನಿರ್ಣಯಗಳನ್ನು ಕೈಗೊಂಡ ನಾಯಕ ನಮ್ಮೊಂದಿಗಿಲ್ಲದಿರುವುದು ನೋವಿನ ಸಂಗತಿ ಎಂದರು.

ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕರ ತೆರಿಗೆ ಹಣದಲ್ಲಿ ಆಡಂಬರ ಜೀವನ ನಡೆಸಿ ಜನತೆಯ ನ್ನು ಕಂಗಾಲಾಗಿಸಿದೆ. ಓರ್ವ ಜನನಾಯಕ ಜನತೆಯ ಜೊತೆ ಒಡನಾಡಿಯಾಗಿರದೇ ಐಶಾರಾಮಿ ವಾಹನ ಗಳಲ್ಲಿ ಸಂಚರಿಸಿದರೆ ಸಂಕಷ್ಟ ಅರಿಯಲು ಸಾಧ್ಯವೇ ಎಂದ ಅವರು ಆ ಸಾಲಿನಲ್ಲಿ ರಾಹುಲ್‌ಗಾಂಧಿ ಸಾಮಾ ನ್ಯ ಜನರೊಂದಿಗೆ ಬೆರೆತು ನೊಂದವರಿಗೆ ಸ್ಪಂದಿಸುವ ಗುಣ ಬೆಳೆಸಿಕೊಂಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರೇಖಾ ಹುಲಿಯಪ್ಪ, ಸಂಯೋಜಕ ಹಿರೇಮ ಗಳೂರು ರಾಮಚಂದ್ರ, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಮಲ್ಲೇಶಸ್ವಾಮಿ, ನಗರಾಧ್ಯಕ್ಷ ತನೋಜ್‌ನಾಯ್ಡು, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತುನಿಗಮದ ಅಧ್ಯಕ್ಷ ಬಿ.ಹೆಚ್.ಹರೀಶ್, ನಗರಸಭಾ ಸದಸ್ಯರುಗಳಾದ ಮುನೀರ್ ಅಹ್ಮದ್, ಜಾವೀದ್, ಶಾದಬ್ ಆಲಂ, ಮುಖಂಡರುಗಳಾದ ಅನ್ಸರ್ ಆಲಿ, ಜೇಮ್ಸ್ ಡಿಸೋಜಾ, ರಸೂಲ್‌ಖಾನ್, ಗುರುಮಲ್ಲಪ್ಪ, ಹುಣಸೇಮಕ್ಕಿ ಲಕ್ಷ್ಮಣ್ ಮತ್ತಿತರರು ಹಾಜರಿದ್ದರು.

Rajiv’s contribution in shaping the future of the country is immense

 

About Author

Leave a Reply

Your email address will not be published. Required fields are marked *

You may have missed