September 19, 2024

ಡೊನೇಷನ್ ಹಾವಳಿ ತಪ್ಪಿಸಿ ವಿದ್ಯಾರ್ಜನೆಗೆ ಅವಕಾಶ ಕಲ್ಪಿಸಿ

0
ಜಿಲ್ಲಾ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದಿಂದ ಜಿಲ್ಲಾಡಳಿತಕ್ಕೆ ಮನವಿ

ಜಿಲ್ಲಾ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದಿಂದ ಜಿಲ್ಲಾಡಳಿತಕ್ಕೆ ಮನವಿ

ಚಿಕ್ಕಮಗಳೂರು:  ಖಾಸಗೀ ಶಾಲೆಗಳಲ್ಲಿ ನಡೆಯುತ್ತಿರುವ ವ್ಯಾಪಕ ಡೊನೇಷನ್ ಹಾವಳಿ ತಪ್ಪಿಸಿ ಮಕ್ಕಳಿಗೆ ನಿಗಧಿತ ದರದಲ್ಲಿ ವಿದ್ಯಾರ್ಜನೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಜಿಲ್ಲಾ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘವು ಜಿಲ್ಲಾಡಳಿತವನ್ನು ಬುಧವಾರ ಒತ್ತಾಯಿಸಿತು.

ಈ ಸಂಬಂಧ ಶಿರಸ್ತೇದಾರ್ ಮನು ಅವರಿಗೆ ಮನವಿ ಸಲ್ಲಿಸಿದ ಸಂಘದ ಮುಖಂಡರುಗಳು ಡೊನೇಷನ್, ಸಮವಸ್ತ್ರ ಹಾಗೂ ಪುಠ್ಯಪುಸ್ತಕ ಹೆಸರಿನಲ್ಲಿ ಅಧಿಕ ಹಣ ಪಡೆಯುತ್ತಿರುವ ಶಾಲೆಗಳಿಗೆ ಕಡಿವಾಣ ಹಾಕುವ ಮೂಲಕ ಸುಲಲಿತ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಬೇಕು ಎಂದರು.

ಬಳಿಕ ಮಾತನಾಡಿದ ಸಂಘದ ಅಧ್ಯಕ್ಷ ಐ.ಕೆ.ಓಂಕಾರೇಗೌಡ ಜಿಲ್ಲೆಯಾದ್ಯಂತ ಖಾಸಗೀ ಶಿಕ್ಷಣ ಸಂಸ್ಥೆ ಗಳಲ್ಲಿ ಡೊನೇಷನ್ ಹಾವಳಿ ಹೆಚ್ಚಾಗಿರುವುದು ಸೇರಿದಂತೆ ವಿವಿಧ ಸಮಸ್ಯೆಗಳು ತಲೆದೋರಿರುವುದನ್ನು ತ್ವರಿತವಾಗಿ ಗಮನಹರಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಅತಿಹೆಚ್ಚು ಡೊನೇಷನ್ ವಸೂಲಿ ಮಾಡುತ್ತಿರುವ ಶಾಲೆಗಳು ರಶೀದಿ ನೀಡುತ್ತಿಲ್ಲ. ಪದವಿ ಹೊಂದಿ ರುವ ಶಿಕ್ಷಕರಿಗೆ ಕಡಿಮೆ ವೇತನ ನೀಡಿ ಶೋಷಿಸಲಾಗುತ್ತಿದೆ. ಸಮವಸ್ತ್ರ, ಪಠ್ಯಪುಸ್ತಕ ಸಾಮಾಗ್ರಿಗಳನ್ನು ಹೊರಗಿನಿಂದ ತರಿಸಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಪರಿಣಾಮ ಸ್ಥಳೀಯ ವರ್ತಕರಿಗೆ ವ್ಯವಹಾರಕ್ಕೆ ತೀವ್ರ ಸಮಸ್ಯೆ ಉಂಟಾಗುತ್ತಿದೆ ಎಂದರು.

ನೆರೆಯ ರಾಜ್ಯದಿಂದ ಸಾರಿಗೆಗೆ ಯೋಗ್ಯವಲ್ಲದ ಬಸ್ ಸೇರಿದಂತೆ ಇನ್ನಿತರೆ ಮಾದರಿಗಳ ವಾಹನ ಗಳನ್ನು ಖಾಸಗೀ ಶಿಕ್ಷಣ ಸಂಸ್ಥೆಗಳು ಖರೀದಿಸಿ ಅಧಿಕ ಮಕ್ಕಳನ್ನು ಸಾಗಿಸುತ್ತಿರುವುದು ಅಪಾಯಕಾರಿಯಾ ಗಿದೆ. ಆ ವಾಹನಗಳಿಂದ ವಿಷ ಅನಿಲ ಹೊರಸೂಸುತ್ತಿರುವ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಪರಿಸರಕ್ಕೆ ಹಾನಿಯಾಗುತ್ತಿದೆ ಎಂದು ಹೇಳಿದರು.

ಹೀಗಾಗಿ ಖಾಸಗೀ ಶಾಲೆಗಳಲ್ಲಿ ನಡೆಯುತ್ತಿರುವ ಡೋನೇಷನ್ ಹಾವಳಿ, ಗುಣಮಟ್ಟದವಿಲ್ಲದ ವಾಹ ನಗಳ ಬಳಕೆ ಹಾಗೂ ಶಿಕ್ಷಕರಿಗೆ ಸೂಕ್ತ ವೇತನ ನೀಡದಿರುವುದನ್ನು ಪರಿಶೀಲನೆ ನಡೆಸಿ ಅಂತಹ ಶಾಲೆಗ ಳ ವಿರುದ್ಧ ಸಂಬಂಧಪಟ್ಟ ಇಲಾಖೆಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಜಿ.ಬಸವರಾಜ್, ಕಾನೂನು ಸಲಹೆಗಾರ ಎಂ.ಬಿ.ಆನಂದ್, ಮುಖಂಡರುಗಳಾದ ವಿಕ್ರಾಂತ್, ರೇವನಾಥ್, ಸೋಮಶೇಖರ್, ಯಶೋಧ, ಗವನಹಳ್ಳಿ ಮಂಜು ಮತ್ತಿತರರಿದ್ದರು.

Appeal to the district administration from the district Dr. Rajkumar fans association

 

About Author

Leave a Reply

Your email address will not be published. Required fields are marked *

You may have missed