September 19, 2024

ಬುದ್ಧನ ವಿಚಾರಧಾರೆ ಜೀವನದಲ್ಲಿ ಅಳವಡಿಕೊಳ್ಳಬೇಕು

0
ಬುದ್ಧ ಪೂರ್ಣಿಮಾ ಅಂಗವಾಗಿ ವಿಗ್ರಹಕ್ಕೆ ಗುರುವಾರ ಪುಷ್ಪ ನಮನ

ಬುದ್ಧ ಪೂರ್ಣಿಮಾ ಅಂಗವಾಗಿ ವಿಗ್ರಹಕ್ಕೆ ಗುರುವಾರ ಪುಷ್ಪ ನಮನ

ಚಿಕ್ಕಮಗಳೂರು: ಬುದ್ಧನ ಸಂದೇಶಗಳು ಅಮರ. ಮಹತ್ಮರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ವೈಚಾರಿಕ ಚಿಂತನೆಗಳನ್ನು ಪಾಲಿಸುವವರು ಬುದ್ಧನ ಅನುಯಾಯಿಗಳಾ ಗುತ್ತಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಮೂರ್ತಿ ಹೇಳಿದರು.

ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪರಿಶಿಷ್ಟ ಜಾತಿ, ಪಂಗಡ ಗೌತಮಬುದ್ಧ ಸಹಕಾರ ಸಂಘದ ವತಿಯಿಂದ ಏರ್ಪಡಿಸಿದ್ದ ಬುದ್ಧ ಪೂರ್ಣಿಮಾ ಅಂಗವಾಗಿ ವಿಗ್ರಹಕ್ಕೆ ಗುರುವಾರ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಬುದ್ಧನ ಸಂದೇಶಗಳು ಅಮರ, ಅವುಗಳನ್ನು ನಮ್ಮ ಜೀವನದಲ್ಲಿ ಅಳ ವಡಿಸಿಕೊಂಡು ಪ್ರಜ್ಞಾವಂತ ಹಾಗೂ ವಿಚಾರವಂತರಾಗಿ ಸನ್ಮಾರ್ಗದಲ್ಲಿ ಸಾಗಬೇಕಿದೆ. ಬುದ್ಧನ ಬೋಧನೆಗಳು ಯಾವುದೇ ಒಂದು ಪ್ರದೇಶ ಅಥವಾ ಜನಾಂಗಕ್ಕೆ ಸೀಮಿತವಾದುದಲ್ಲ ಜಗತ್ತಿನಲ್ಲಿ ಶಾಂತಿ, ಸಹೋದರತ್ವ, ಸಹಬಾಳ್ವೆಯ ಜೀವನ ಬಯಸುವವರು ಬುದ್ಧ ಮಾರ್ಗವನ್ನು ಪಾಲಿಸಬೇಕು ಎಂದರು.

ಬುದ್ಧನ ವಿಚಾರಧಾರೆಗಳನ್ನು ನಮ್ಮಲ್ಲಿ ಅಳವಡಿಸಿಕೊಂಡರೆ ನಮ್ಮ ಜ್ಞಾನವು ಸಂಪತ್ಭರಿತವಾಗುತ್ತದೆ ಹಾಗೂ ನೆಮ್ಮದಿಯ ಬದುಕನ್ನು ನಡೆಸಲು ಸಾಧ್ಯವಾಗಲಿದೆ. ಪ್ರತಿಯೊಂದು ಜೀವಿಯನ್ನು ಪ್ರೀತಿಸುವ, ರಕ್ಷಿ ಸುವ ಮನೋಭಾವವು ಬುದ್ಧನ ಮಾರ್ಗವನ್ನು ಅನುಸರಿಸುವುದರಿಂದ ಬರಲಿದ್ದು ಬುದ್ಧನನ್ನು ಪೂಜಿಸು ವುದಕ್ಕಿಂತ ಅವನ ಬೋಧನೆಗಳನ್ನು ತಿಳಿದು ವಿಚಾರವಂತರಾಗಿ ಸನ್ಮಾರ್ಗದಲ್ಲಿ ನಡೆಯಬೇಕು ಎಂದರು.

ಸಂಘದ ಅಧ್ಯಕ್ಷ ಜಿ.ಕೆ.ಬಸವರಾಜ್ ಮಾತನಾಡಿ ಸತ್ಯ ಹಾಗೂ ದುಃಖದ ಕಾರಣಗಳನ್ನು ಹುಡುಕುವ ಸಲುವಾಗಿ ಸುಖ ಭೋಗಗಳನ್ನು ರಾಜ್ಯವನ್ನು ಬಿಟ್ಟು ಸನ್ಯಾಸಿಯಾಗಿ ಧ್ಯಾನಕ್ಕೆ ಕುಳಿತವರು. ಅವರ ಹುಟ್ಟು, ಜ್ಞಾನೋದಯ ಹಾಗೂ ಮರಣವು ಹುಣ್ಣಿಮೆ ದಿನದಂದೆ ಸಂಭವಿಸಿರುವುದು ವಿಸ್ಮಯಕಾರಿಯಾಗಿದೆ ಎಂದು ತಿಳಿಸಿದರು.

ಹುಣ್ಣಿಮೆಯು ಪೂರ್ಣತೆಯ ಸಂಕೇತ ಬುದ್ಧರು, ಸಹ ಪರಿಪೂರ್ಣತೆಯನ್ನು ಹೊಂದಿದವರು ಜಗತ್ತಿನ ಸತ್ಯದ ಬಗ್ಗೆ ಅರಿತು ದುಃಖದಲ್ಲಿರುವವರಿಗೆ ಸುಖದ ದಾರಿಯನ್ನು ತೋರಿಸಿಕೊಟ್ಟವರು. ಅವರನ್ನು ದೇವರೆಂದು ಪೂಜಿಸುವುದಕ್ಕಿಂತ ಜೀವನ ಮಾರ್ಗದರ್ಶಕರೆಂದು ಪೂಜಿಸುವುದು ಉತ್ತಮ ಎಂದರು.

ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ ಮಾತನಾಡಿ ಬುದ್ಧನು ಕೇವಲ ಒಂದು ಧರ್ಮಕ್ಕೆ ಸೀಮಿತರಾದವರಲ್ಲ, ಅವರು ಏ?ದ ಬೆಳಕು. ಸತ್ಯ ಬೋಧನೆಗಳಿಂದ ಏ?ದೆಲ್ಲೆಡೆ ಅವರ ಅನುಯಾಯಿಗಳಿದ್ದು ಬುದ್ಧನು ತನ್ನನ್ನು ದೇವರು ಅಥವಾ ದೇವದೂತನೆಂದು ಎಲ್ಲಿಯೂ ಹೇಳಿಕೊಳ್ಳಲಿಲ್ಲ ಎಂದರು.

ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ ಬುದ್ಧರ ವಿಚಾರಧಾರೆಗಳನ್ನು ತಿಳಿದವರು ಜೀವನವನ್ನು ಸುಲಭ ಮಾರ್ಗದಲ್ಲಿ ಹಾಗೂ ಸುಖಮಯದಿಂದ ನೆಮ್ಮದಿಯ ಜೀವನವನ್ನು ಸಾಗಿಸುವರು ಎಂದ ಅವರು ಪ್ರತಿಯೊಬ್ಬರೂ ಅವರ ಅನುಯಾಯಿಗಳಾಗಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಹಂಪಯ್ಯ, ನಿರ್ದೇಶಕರುಗಳಾದ ನಾಗರಾಜ್, ಗಂಗಾ ಧರ, ಪರಮೇಶ್ವರ್, ಮುಖಂಡರುಗಳಾದ ಹರೀಶ್‌ಮಿತ್ರ, ರವೀಶ್ ಕ್ಯಾತನಬೀಡು, ಬಿಳೇಕಲ್ಲು ಬಾಲಕೃಷ್ಣ, ಗುರುಶಾಂತಪ್ಪ, ಶಹಾಬುದ್ದೀನ್, ಕಬ್ಬಿಕೆರೆ ಮೋಹನ್‌ಕುಮಾರ್ ಮತ್ತಿತರರು ಹಾಜರಿದ್ದರು.

Flower bowing to the idol as part of Buddha Purnima

 

About Author

Leave a Reply

Your email address will not be published. Required fields are marked *

You may have missed