September 16, 2024

ಚಿರತೆಗಳ ಹಾವಳಿ ತಪ್ಪಿಸಲು ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ

0
ಚಿರತೆಗಳ ಹಾವಳಿ ತಪ್ಪಿಸಲು ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ

ಚಿರತೆಗಳ ಹಾವಳಿ ತಪ್ಪಿಸಲು ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ

ಚಿಕ್ಕಮಗಳೂರು:  ಜಮೀನುಗಳಲ್ಲಿ ಚಿರತೆಗಳು ಕಾಣಿಸಿಕೊಂಡ ಪರಿಣಾಮ ಕೃಷಿ ಚಟು ವಟಿಕೆಗೆ ತೀವ್ರ ಅಡ್ಡಿಯಾಗಿರುವ ಹಿನ್ನೆಲೆಯಲ್ಲಿ ಕೂಡಲೇ ಚಿರತೆಗಳನ್ನು ಸೆರೆಹಿಡಿದು ಬೇರೆಡೆ ಸ್ಥಳಾಂತರಿಸ ಬೇಕು ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಈ ಕುರಿತು ಮಾತನಾಡಿದ ಬಿಜೆಪಿ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್ ಕನ್ನೇನಹಳ್ಳಿ, ಬಂಡಿಹಳ್ಳಿ, ಕರ್ತಿಕೆರೆ, ಮಲ್ಲೇದೇವರಹಳ್ಳಿ ಹಾಗೂ ಹಿರೇಮಗಳೂರು ಸುತ್ತಮುತ್ತಲು ರೈತರ ಜಮೀನುಗಳಲ್ಲಿ ಚಿರತೆಗಳ ಓಡಾಟದಿಂದ ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ ಎಂದರು.

ಪ್ರತಿನಿತ್ಯವು ಕೃಷಿ ಚಟುವಟಿಕೆಗೆ ತೆರಳುವ ರೈತಾಪಿ ವರ್ಗವು ಚಿರತೆಯಿಂದ ಕಾಯಕವನ್ನು ಕೈಬಿಟ್ಟಿ ದ್ದಾರೆ. ಅಲ್ಲದೇ ದನಕರುಗಳಿಗೆ ಮೇವು, ಭೂಮಿ ಬೀಜ ಬಿತ್ತುವುದು, ಬೆಳೆಗಳಿಗೆ ಔಷಧಿ ಸಿಂಪಡಣೆ ಇನ್ನಿತರೆ ಕೃಷಿ ಚಟುವಟಿಕೆಯಿಂದ ಜೀವನ ಸಾಗಿಸುವವರಿಗೆ ಕಳೆದೆರಡು ದಿನಗಳ ಚಿರತೆಯ ಕಾಟದಿಂದ ಕೆಲಸವನ್ನು ಸ್ಥಗಿತಗೊಳಿಸಿ ಗಾಬರಿಗೊಂಡಿದ್ದಾರೆ ಎಂದರು.

ಈ ಸಂಬಂಧ ಅರಣ್ಯ ಇಲಾಖೆ ಸ್ಥಳಕ್ಕಾಗಮಿಸಿ ಪಟಾಕಿಸಿ ಸಿಡಿಸಿದ್ದಾರೆ ಹೊರತು ಚಿರತೆಗಳು ಸಂ ಚರಿಸಿದ ಸ್ಥಳಿಗಳಿಗೆ ಭೇಟಿ ನೀಡಿಲ್ಲ. ಎತ್ತರದ ಮರಗಳಲ್ಲಿ ವೀಕ್ಷಣೆ ನಡೆಸಿರುವುದಿಲ್ಲ. ಹೀಗಾಗಿ ಜಿಲ್ಲಾಡಳಿತ ಗ್ರಾಮಸ್ಥರ ಹಿತದೃಷ್ಟಿಯಿಂದ ಹಾಗೂ ಕೃಷಿ ಚಟುವಟಿಕೆ ಪೂರಕವಾಗಿ ಸಾಗಲು ಕಟ್ಟುನಿಟ್ಟಿನ ಕ್ರಮ ಕೈ ಗೊಳ್ಳಬೇಕು ಎಂದರು.

ರೈತರುಗಳ ಜಮೀನುಗಳಲ್ಲಿ ಚಿರತೆಗಳು ಸಂಚರಿಸಿವೆಯೇ ಅಥವಾ ಇಲ್ಲವೆಂಬ ಮಾಹಿತಿಯನ್ನು ಚರ್ಚಿಸಿ ತಿಳಿಸಿದರೆ ರೈತರು ಕೃಷಿಯಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗಲಿದೆ. ಹೀಗಾಗಿ ಎರಡು ದಿನಗ ಳಿಂದ ರೈತರು ಮೇವನ್ನು ಕೊಂಡೊಯ್ಯಲು ಹಾಗೂ ದನ-ಕರುಗಳಿಗೆ ಮೇಯಿಸಲು ತೆರಳಿಲ್ಲ ಎಂದು ಹೇಳಿ ದರು.

ಆದ್ದರಿಂದ ಜಿಲ್ಲಾಡಳಿತ ಚಿರತೆಗಳ ಹಾವಳಿ ತಪ್ಪಿಸಲು ಸಲುವಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವ ಮೂಲಕ ಗ್ರಾಮಸ್ಥರ ಆತಂಕವನ್ನು ತಿಳಿಗೊಳಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಾಧ್ಯಮ ಸಹ ಪ್ರಮುಖ್ ಕೇಶವಮೂರ್ತಿ, ರೈತ ಮೋರ್ಚಾ ಉಪಾ ಧ್ಯಕ್ಷ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಧನಂಜಯ, ರೈತರಾದ ಎಸ್.ಬಸವರಾಜ್, ಲೋಕೇಶ್, ಶಿವ ಕುಮಾರ್, ರವಿಕುಮಾರ್, ರಾಜಣ್ಣ, ದೇವರಾಜ್ ಮತ್ತಿತರರು ಹಾಜರಿದ್ದರು.

Villagers appeal to the district administration to avoid the menace of leopards

 

About Author

Leave a Reply

Your email address will not be published. Required fields are marked *