September 16, 2024

ಬುದ್ಧ ಪೌರ್ಣಿಮೆ ರಾಷ್ಟ್ರೀಯ ರಜಾದಿನವನ್ನಾಗಿ ಘೋಷಣೆ ಮಾಡಬೇಕು

0
ತೇಗೂರಿನ ಬುದ್ಧ ವಿಹಾರದಲ್ಲಿ ೨೫೬೮ನೇ ಬುದ್ಧ ಪೂರ್ಣಿಮಾ

ತೇಗೂರಿನ ಬುದ್ಧ ವಿಹಾರದಲ್ಲಿ ೨೫೬೮ನೇ ಬುದ್ಧ ಪೂರ್ಣಿಮಾ

ಚಿಕ್ಕಮಗಳೂರು: ಭಗವಾನ್ ಬುದ್ಧರ ಜನ್ಮದಿನವಾದ ಬುದ್ಧ ಪೌರ್ಣಿಮೆಯನ್ನು ರಾಷ್ಟ್ರೀಯ ರಜಾದಿನವನ್ನಾಗಿ ಘೋಷಣೆ ಮಾಡಿ ಗೌರವ ಸಲ್ಲಿಸುವಂತಾಗಬೇಕೆಂದು ಡಾ. ಬಿ.ಆರ್ ಅಂಬೇಡ್ಕರ್ ಅಧ್ಯಯನ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಮಾಜಿ ಸಚಿವ ಬಿ.ಬಿ ನಿಂಗಯ್ಯ ಅವರು ಪ್ರತಿಪಾದಿಸಿದರು.

ಅವರು ಇಂದು ತೇಗೂರಿನ ಬುದ್ಧ ವಿಹಾರದಲ್ಲಿ ಏರ್ಪಡಿಸಿದ್ದ ೨೫೬೮ನೇ ಬುದ್ಧ ಪೂರ್ಣಿಮಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬೌದ್ಧ ಧರ್ಮ ಜಗತ್ತಿನ ಶ್ರೇ? ಧರ್ಮದಲ್ಲಿ ಒಂದಾಗಿದ್ದು ಮಾನವೀಯ ಮೌಲ್ಯವನ್ನು ಸಾರುವ ಬೌದ್ಧ ಧರ್ಮಕ್ಕೆ ಅಂಬೇಡ್ಕರ್ ಅವರು ಮತಾಂತರವಾಗುವ ಮೂಲಕ ಶೋಷಿತ ಸಮಾಜಕ್ಕೆ ದಾರಿ ತೋರಿಸಿದ್ದು ಅದರಂತೆ ದಲಿತ ಸಮೂಹ ಸಾಗುತ್ತಿದೆ ಎಂದು ಹೇಳಿದರು.

ತೇಗೂರಿನಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಅಂಬೇಡ್ಕರ್ ಅಧ್ಯಯನ ಕೇಂದ್ರದಲ್ಲಿ ಜಿಲ್ಲೆಯ ಜನರ ಸರ್ವಜನಾಂಗದ ಏಳಿಗೆಗಾಗಿ ಬುದ್ಧ, ಬಸವ, ಅಂಬೇಡ್ಕರ್, ಕನಕದಾಸರು ಸೇರಿದಂತೆ ಎಲ್ಲಾ ಮಹನೀಯರ ಆದರ್ಶಗಳನ್ನು ಪ್ರಸಾರ ಮಾಡುವ ಕೇಂದ್ರವನ್ನಾಗಿ ಮಾಡುವ ಹಲವಾರು ಧೇಯೋದ್ದೇಶಗಳನ್ನು ಹೊಂದಿದ್ದು ಈ ಸಂಸ್ಥೆಗೆ ಜಮೀನು ಮಂಜೂರು ಮಾಡುವಂತೆ ಒತ್ತಾಯಿಸಿದರು.

ಪ್ರಧಾನ ಭಾ?ಣಕಾರರಾಗಿ ಆಗಮಿಸಿದ್ದ ಹಿರಿಯ ಸಾಮಾಜಿಕ ಚಿಂತಕ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಹೆಚ್.ಎಂ ರುದ್ರಸ್ವಾಮಿ ಮಾತನಾಡಿ ಜಗತ್ತಿನಾದ್ಯಂತ ಬೌದ್ಧ ಧರ್ಮ ಅನುಸರಿಸಿ ಬುದ್ಧ ಪೌರ್ಣಿಮೆ ಆಚರಿಸಲಾಗುತ್ತಿದೆ. ವಿವೇಕಾನಂದರಂತಹ ಮಹಾನ್ ದಾರ್ಶನಿಕರು ಬುದ್ಧನ ಪ್ರಭಾವಕ್ಕೆ ಒಳಗಾಗಿದ್ದಾರೆಂದು ಹೇಳಿದರು.

ಬೌದ್ಧ ಧರ್ಮವೆಂದರೆ ಸರಿಯಾಗಿ ನಡೆಯುವುದು ಎಂದರ್ಥ. ಸಮಾನತೆಯ ವಿಚಾರಧಾರೆ ಬೌದ್ಧ ಧರ್ಮದಲ್ಲಿದೆ. ನವ್ಯಕಾಲದ ಸಾಹಿತಿಗಳಾದ ರಾಷ್ಟ್ರಕವಿ ಕುವೆಂಪು, ಬೇಂದ್ರೆ ಮುಂತಾದವರು ಬೌದ್ಧ ಧರ್ಮದ ಮಹತ್ವವನ್ನು ತಮ್ಮ ಸಾಹಿತ್ಯದಲ್ಲಿ ಪ್ರಸ್ತಾಪಿಸಿದ್ದರು ಎಂದು ವಿವರಿಸಿದರು.

ಸುಳ್ಳು ಧರ್ಮದ ಭಾಗವಾಗಿರುವುದು ಪ್ರಸ್ತುತ ಕಾಲದ ದುರಂತವೆಂದ ರುದ್ರಸ್ವಾಮಿಯವರು ನವ ಜೀವನ ಆಂದೋಲನದಲ್ಲಿ ಹೊಸ ಸಂಘ? ಮಾಡಬಾರದು. ತಾಳ್ಮೆ, ಬುದ್ಧಿವಂತಿಕೆ, ಮೈತ್ರಿ ಭಾವದಿಂದ ಬಿಡುಗಡೆ ಹೊಂದಬೇಕೆಂದು ಕರೆ ನೀಡಿದರು.

ಜಿಲ್ಲಾ ವಚನ ಸಾಹಿತ್ಯ ಪರಿ?ತ್ ಅಧ್ಯಕ್ಷ ರವೀಶ್‌ಬಸಪ್ಪ ಮಾತನಾಡಿ ಜಗತ್ತಿನ ವಿವೇಕಕ್ಕೆ ಬುದ್ಧ ಮಾರ್ಗ ಎಚ್ಚರಿಕೆ ಎಂದು ವಿವರಿಸಿದರು.

ದಲಿತ ಹೋರಾಟಗಾರ ಪಿ. ವೇಲಾಯುಧನ್ ಮಾತನಾಡಿ ಬೌದ್ಧ ಧರ್ಮದಿಂದ ಮಾತ್ರ ಬದುಕಿನಲ್ಲಿ ಆನಂದ ಕಾಣಲು ಸಾಧ್ಯ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್ ಮೂರ್ತಿ ಮಾತನಾಡಿ ದಲಿತ ಸಮೂಹ ಬುದ್ಧನ ಆದರ್ಶವನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಒಗ್ಗಟ್ಟಿನಿಂದ ನಡೆದರೆ, ಏನನ್ನಾದರೂ ಸಾಧಿಸಬಹುದೆಂದು ಕಿವಿಮಾತು ಹೇಳಿದರು.

ಅಂಬೇಡ್ಕರ್ ಅಧ್ಯಯನ ಸಂಸ್ಥೆಯ ಅನೇಕ ಉದ್ದೇಶಿತ ಕಾರ್ಯಕ್ರಮಗಳಿಗೆ ಜಮೀನು ಮಂಜೂರು ಮಾಡುವುದು ಅತ್ಯಗತ್ಯವಾಗಿದ್ದು ಈ ಸಂಬಂಧ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ಹೋಗಿ ಬೇಡಿಕೆ ಸಲ್ಲಿಸಲು ಅಗತ್ಯವಾಗಿದ್ದು ಈ ಹೋರಾಟದಲ್ಲಿ ತಾವು ಪಾಲ್ಗೊಳ್ಳುವುದಾಗಿ ಭರವಸೆ ನೀಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ ಮಂಜೇಗೌಡ ಅವರು ಮಾತನಾಡಿ ಬುದ್ಧನ ಮಾರ್ಗದಲ್ಲಿ ಮೂಢನಂಬಿಕೆ ಬಿಟ್ಟು ಮುನ್ನಡೆಯಬೇಕೆಂದು ಕರೆ ನೀಡಿದರಲ್ಲದೆ ಇದೇ ಸ್ಥಳದಲ್ಲಿ ಅಂಬೇಡ್ಕರ್ ಅಧ್ಯಯನ ಸಂಸ್ಥೆಗೆ ಜಮೀನು ಮಂಜೂರು ಮಾಡಿಸಿಕೊಡಲು ಎಲ್ಲಾ ಪ್ರಯತ್ನ ಮಾಡುವುದಾಗಿ ಹೇಳಿದರು.

ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೆ.ಮಹಮದ್ ಮಾತನಾಡಿ ಭಗವಾನ್ ಬುದ್ಧರ ಮಾರ್ಗದರ್ಶನದಲ್ಲಿ ನಡೆಯಲು ಕರೆ ನೀಡಿದರು.ವಿವಿಧ ದಲಿತ ಸಂಘಟನೆಗಳ ಮುಖಂಡರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Buddha Pournima should be declared as a national holiday

About Author

Leave a Reply

Your email address will not be published. Required fields are marked *