September 16, 2024

ಮುಸ್ಲೀಂ ಸಮುದಾಯಕ್ಕೆ ಸ್ಥಾನಮಾನ ಕಲ್ಪಿಸಲು ಕಟಿಬದ್ಧ

0
ಚಿಕ್ಕಮಗಳೂರು ಮುಸ್ಲೀಂ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಒಕ್ಕೂಟದ ಸಭೆ

ಚಿಕ್ಕಮಗಳೂರು ಮುಸ್ಲೀಂ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಒಕ್ಕೂಟದ ಸಭೆ

ಚಿಕ್ಕಮಗಳೂರು:  ದೇಶ ಮತ್ತು ರಾಜ್ಯದ ಪ್ರತಿ ಚುನಾವಣೆಗಳಲ್ಲಿ ಮುಸ್ಲೀಂ ಸಮುದಾಯ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸುತ್ತಿದೆ. ಆ ನಿಟ್ಟಿನಲ್ಲಿ ಜನಾಂಗಕ್ಕೆ ಸೂಕ್ತ ಸ್ಥಾನಮಾನ ಕಲ್ಪಿಸಲು ಪಕ್ಷವು ಕಟಿಬದ್ಧವಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಅಭ್ಯರ್ಥಿ ಕೆ.ಜಯಪ್ರಕಾಶ್‌ಹೆಗ್ಡೆ ಹೇಳಿದರು.

ನಗರದ ಹೊರವಲಯದಲ್ಲಿ ಚಿಕ್ಕಮಗಳೂರು ಮುಸ್ಲೀಂ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಒಕ್ಕೂಟದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಪಂಚಾಯಿತಿಯಿಂದ ಪಾರ್ಲಿಮೆಂಟ್‌ವರೆಗೂ ಮುಸ್ಲೀಂ ಸಮುದಾಯ ಕಾಂಗ್ರೆಸ್‌ಗೆ ಮತ ನೀಡಿ ಆಧಾರಸ್ಥಂಭವಾಗಿದೆ. ಅಧಿಕಾರಕ್ಕೆ ಬಂದ ಕ್ಷಣಗಳಲ್ಲಿ ಅತಿಹೆಚ್ಚು ಶ್ರಮವಹಿಸಿ ಪಕ್ಷಕ್ಕಾಗಿ ದುಡಿದಿರುವ ಜನಾ ಂಗದ ಕಾರ್ಯಕರ್ತರಿಗೆ ಸ್ಥಾನಮಾನ ಕಲ್ಪಿಸುವ ಮೂಲಕ ಅವಕಾಶ ನೀಡಲಾಗುವುದು ಎಂದರು.

ಸಂವಿಧಾನಕ್ಕೆ ಬದ್ಧವಾಗಿ ದಲಿತರು, ಮುಸ್ಲೀಂ ಜನಾಂಗ ಕಾಂಗ್ರೆಸ್ ಜನ್ಮವಿತ್ತ ಕಾಲದಿಂದ ಸಹಕಾರ ನೀಡುತ್ತಿದೆ. ಅಲ್ಲದೇ ಸಾಮಾಜಿಕ ಸೇವೆ ಹಾಗೂ ಜನಪರ ಕಾಳಜಿ ಬಗ್ಗೆ ಹೆಚ್ಚು ಚಿಂತನೆ ಹೊಂದುವ ಮುಖ ಂಡರಿಗೆ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮುಖ್ಯಮಂತ್ರಿ ಬಳಿ ತೆರಳಿ ಚರ್ಚಿಸುವ ಮೂಲಕ ಅಧಿಕಾರ ಹಂಚಿಕೆ ಮಾಡಲಾಗುವುದು ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ಮಾತನಾಡಿ ಜಿಲ್ಲೆಯಲ್ಲಿ ಹಿಂದೂ-ಮುಸ್ಲೀಂ ಅಣ್ಣತಮ್ಮಂ ದಿರಂತೆ ಬಾಂಧವ್ಯವನ್ನು ಹೊಂದಿದ್ದಾರೆ. ಪರಸ್ಪರ ಪ್ರೀತಿ, ಗೌರವ ತರುವ ನಿಟ್ಟಿನಲ್ಲಿ ಪಕ್ಷದಲ್ಲಿ ಕೆಲಸ ಮಾಡ ಲಾಗುತ್ತಿದೆ ಎಂದ ಅವರು ವಿಶೇಷವಾಗಿ ಐದು ಕ್ಷೇತ್ರಗಳಲ್ಲಿ ಶಾಸಕರ ಗೆಲುವಿಗೆ ಪೂರಕವಾಗಿರುವ ಮುಸ್ಲೀಂ ಸಮಾಜವನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ಸಾಮಾಜಿಕ ನ್ಯಾಯದಡಿ ಪ್ರತಿಯೊಂದು ಸಮುದಾಯಕ್ಕೆ ಸಮಾನ ಅವಕಾಶ ವಿದೆ. ಜಿಲ್ಲೆಯ ಮುಸ್ಲೀಂ ಒಕ್ಕೊರಲಿನಂತೆ ಮುಖ್ಯಮಂತ್ರಿ ಬಳಿ ನಿಯೋಗ ತೆರಳುವ ಮೂಲಕ ಚರ್ಚಿ ಸೋಣ. ಇದಕ್ಕೆ ಜಿಲ್ಲಾ ಸಮಿತಿಯು ಗಟ್ಟಿಯಾಗಿ ಧ್ವನಿಗೂಡಿಸುವ ಕೆಲಸ ಮಾಡಲಿದೆ ಎಂದು ತಿಳಿಸಿದರು.

ಸರ್ಕಾರದ ಹಲವು ಮಂಡಳಿಗಳು ಸೇರಿದಂತೆ ಇನ್ನಿತರೆ ಜಿಲ್ಲಾವಾರು ಅಧ್ಯಕ್ಷರುಗಳ ಹಂಚಿಕೆ ಕೆಲಸ ಗಳು ಬಾಕಿಯಿವೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಆದೇಶದ ಮೇರೆಗೆ ಪಕ್ಷದಲ್ಲಿ ನಿರಂತರ ವಾಗಿ ದುಡಿದು ಪಕ್ಷಕ್ಕಾಗಿ ಸೇವೆ ಸಲ್ಲಿಸಿರುವವರಿಗೆ ಸಾಮಾಜಿಕ ನ್ಯಾಯದಡಿ ಅವಕಾಶ ಕಲ್ಪಿಸಿ ಕೊಡುವ ಭರವಸೆ ನೀಡಿದರು.

ಕಾಂಗ್ರೆಸ್ ಹಿರಿಯ ಮುಖಂಡ ಅತೀಖ್ ಖೈಸರ್ ಮಾತನಾಡಿ ಕ್ಷೇತ್ರದಲ್ಲಿ ಎರಡು ದಶಕಗಳ ಬಳಿಕ ಹಾಗೂ ರಾಜ್ಯದಲ್ಲಿ ಬಹುಮತದಿಂದ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಹೀಗಾಗಿ ಕ್ಷೇತ್ರದಲ್ಲಿ ಯಾ ವುದೇ ಫಲಪೇಕ್ಷೆ ಇಲ್ಲದೇ ಸಾಮಾಜಿಕ ಸೇವೆ ಹಾಗೂ ಕೊರೋನಾ ಸಂದರ್ಭದಲ್ಲಿ ಬೇಧ ಭಾವ ವಿಲ್ಲದೇ ಎಲ್ಲಾ ಧರ್ಮದ ಕುಟುಂಬಕ್ಕೆ ಆಸರೆಯಾದ ಸಿ.ಎನ್.ಅಕ್ಮಲ್‌ಗೆ ಸಿಡಿಎ ಅಧ್ಯಕ್ಷಗಾದಿ ಒದಗಿಸಿಕೊಡಬೇಕು ಎಂದರು.

ಜಿ.ಪಂ. ಮಾಜಿ ಅಧ್ಯಕ್ಷ ಕೆ.ಮಹಮ್ಮದ್ ಮಾತನಾಡಿ ಕಳೆದ ನಾಲ್ಕೈದು ವರ್ಷಗಳ ಹಿಂದೆ ಮಹಾ ಮಾರಿ ಕೋವಿಡ್‌ನಲ್ಲಿ ಮೃತಪಟ್ಟವರನ್ನು ಸಂಬಂಧಿಕರೇ ಅಂತ್ಯಕ್ರಿಯೆಗೆ ಧಾವಿಸದಿರುವ ಸಮಯದಲ್ಲಿ ನೂ ರಾರು ಸಂಖ್ಯೆಯಲ್ಲಿ ಮುಸ್ಲೀಂ ಸಮಾಜದವರು ಪ್ರಾಣದ ಹಂಗು ತೊರೆದು ಶವಸಂಸ್ಕಾರಕ್ಕೆ ಮುಂದಾಗಿ ದ್ದ ರು. ಅಲ್ಲದೇ ಸಂಕಷ್ಟದಲ್ಲಿ ಆರ್ಥಿಕ, ಸಾಮಾಜಿಕವಾಗಿ ಸ್ಪಂದಿಸಿ, ಪಕ್ಷಕ್ಕಾಗಿ ಸೇವೆಗೈದ ಮುಖಂಡರಿಗೆ ಸ್ಥಾನ ಮಾನ ಕಲ್ಪಿಸುವ ಸಮಯ ಇದಾಗಿದೆ ಎಂದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರೇಖಾ ಹುಲಿಯಪ್ಪಗೌಡ, ಡಾ.ಡಿ. ಎಲ್.ವಿಜಯ್‌ಕುಮಾರ್, ಪಕ್ಷದ ಮಾಜಿ ಅಧ್ಯಕ್ಷ ಎಂ.ಎಲ್.ಮೂರ್ತಿ, ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಮಹಮ್ಮದ್ ಶಾಹೀದ್ ರಜ್ವಿ, ಕಿಸಾನ್ ಸೆಲ್ ರಾಜ್ಯ ಸಂಚಾಲಕ ಸಿ.ಎನ್.ಅಕ್ಮಲ್, ಮುಖಂಡರುಗಳಾದ ಎ.ಎನ್.ಮಹೇಶ್, ಬಿ.ಹೆಚ್.ಹರೀಶ್, ಹೆಚ್.ಪಿ.ಮಂಜೇ ಗೌಡ, ಮಸೀದಿ ಗುರುಗಳಾದ ಕ್ವಾಜಾ ಮೊಹಿಯುದ್ದೀನ್, ಅಶ್ರಫ್ ಆಲಿಖಾನ್, ಷರೀಫ್, ಶಹಾಬುದ್ದೀನ್, ಭದ್ರುದ್ದೀನ್ ಮತ್ತತಿರರು ಹಾಜರಿದ್ದರು.

Is communal for the Muslim community to make status

About Author

Leave a Reply

Your email address will not be published. Required fields are marked *