September 16, 2024

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ವ್ಯಾಪಕ ಅಲೆ ಬೀಸುತ್ತಿದೆ

0
ಕೆಪಿಸಿಸಿ ಉಸ್ತುವಾರಿ ಎಂ.ರಮೇಶ್ ಶೆಟ್ಟಿ ಸುದ್ದಿಗೋಷ್ಠಿ

ಕೆಪಿಸಿಸಿ ಉಸ್ತುವಾರಿ ಎಂ.ರಮೇಶ್ ಶೆಟ್ಟಿ ಸುದ್ದಿಗೋಷ್ಠಿ

ಚಿಕ್ಕಮಗಳೂರು:  ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ವ್ಯಾಪಕ ಅಲೆ ಬೀಸುತ್ತಿದೆ ಎಂದು ನೈರುತ್ಯ ಶಿಕ್ಷಕರ ಕ್ಷೇತ್ರದ ಪದವೀಧರ, ಶಿಕ್ಷಕರ ಕ್ಷೇತ್ರದ ಕೆಪಿಸಿಸಿ ಉಸ್ತುವಾರಿ ಎಂ.ರಮೇಶ್ ಶೆಟ್ಟಿ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿರುವ ಹಾಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಬೋಜೇಗೌಡರನ್ನು ಶಿಕ್ಷಕರು ತಿರಸ್ಕರಿಸಲ್ಲಿದ್ದಾರೆಂದು ಹೇಳಿದರು.

ಕಳೆದ ೬ ವರ್ಷಗಳ ಕಾಲ ನೈರುತ್ಯ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸಿರುವ ಬೋಜೇಗೌಡರ ಅವಧಿಯಲ್ಲಿ ತಾವು ಚುನಾವಣೆಗೆ ಮುನ್ನ ನೀಡಿರುವ ಯಾವೊಂದು ಭರವಸೆಯನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡದೇ ಇರುವುದರಿಂದ ಇವರ ಬಗ್ಗೆ ಶಿಕ್ಷಕರು ಭ್ರಮ ನಿರಸನಗೊಂಡಿದ್ದಾರೆ. ಈ ಬಾರಿ ಶಿಕ್ಷಕರು ಯಾವುದೇ ಆಸೆ-ಅಮಿಷಗಳಿಗೆ ಬಲಿಯಾಗದೇ ಪ್ರಾಮಾಣಿಕ ಅಭ್ಯರ್ಥಿ ಪರ ನಿಲ್ಲಲ್ಲಿದ್ದಾರೆ. ಕಳೆದ ಬಾರಿ ನೈರುತ್ಯ ಕ್ಷೇತ್ರದಲ್ಲಿ ನಡೆಸಿದ ಬೋಜೇಗೌಡರ ಯಾವುದೇ ಮ್ಯಾಜಿಕ್ ಈ ಬಾರಿ ನಡೆಯುವುದಿಲ್ಲ ಎಂದರು.

ಬೋಜೇಗೌಡರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶಾಸಕರುಗಳನ್ನು ಸೋಲಿಸಲು ನಾನೇ ಕಾರಣ ಎಂದು ಜಿಲ್ಲೆಯಾದ್ಯಾಂತ ಹೇಳಿಕೊಂಡು ಓಡಾಡಿದ್ದರು. ಈಗ ಅದೇ ಬಿಜೆಪಿಯೊಡನೆ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ. ತಮ್ಮ ಸೋಲಿಗೆ ಕಾರಣರಾದ ಬೋಜೇಗೌಡರನ್ನು ಈ ಬಾರಿ ಮನೆಗೆ ಕಳುಹಿಸುವಲ್ಲಿ ಸೋತ ಬಿಜೆಪಿ ಶಾಸಕರುಗಳು ಪ್ರಮುಖ ಪಾತ್ರ ವಹಿಸಲಿದ್ದಾರೆ. ಹಾಗಾಗಿ ಅವರ ಸೋಲು ಕಟ್ಟಿಟ್ಟ ಬುತ್ತಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷದ ನೇತೃತ್ವದ ಸರ್ಕಾರ ಗ್ಯಾರಂಟಿಗಳ ಮೂಲಕ ಈ ರಾಜ್ಯದ ಬಡವರ. ಕೂಲಿ ಕಾರ್ಮಿಕರ, ಮಹಿಳೆಯರ, ನಿರುದ್ಯೋಗಿ ಯುವಕರ ಪರವಾಗಿ ನಿಂತು ಕೆಲಸ ಮಾಡುತ್ತಿರುವ ಹಿನ್ನಲೆಯಲ್ಲಿ ನಮ್ಮ ರಾಜ್ಯದ ಪದವೀದರರರು ಮತ್ತು ಶಿಕ್ಷಕರುಗಳು ಹೊಸ ಭರವಸೆಯಿಂದ ನಮ್ಮ ಸರ್ಕಾರದ ಕಡೆಗೆ ನೋಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ನಮ್ಮ ಪಕ್ಷದ ನೈರುತ್ಯ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಿರುವ ಆಯನೂರು ಮಂಜುನಾಥ್ ಹಾಗೂ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿರುವ ಡಾ.ಕೆ.ಕೆ. ಮಂಜುನಾಥ್ ಕುಮಾರ್ ಇಬ್ಬರೂ ಕೂಡ ಗೆಲುವು ಸಾಧಿಸಲಿದ್ದಾರೆ ಎಂದರು.

ಯುವನಿಧಿ ಅಡಿಯಲ್ಲಿ ಪದವೀಧರರಿಗೆ ೩೦೦೦ ರೂ. ಡಿಪ್ಲಮೋ ಪದವೀಧರರಿಗೆ ೧೫೦೦ ರೂ. ನೀಡುತ್ತಿರುವುದು ರಾಜ್ಯದ ಪದವೀಧರರು ಬಹು ದೊಡ್ಡ ಸಂಖ್ಯೆಯಲ್ಲಿ ನಮ್ಮ ಪಕ್ಷದ ಗೆಲುವಿಗೆ ಟೊಂಕಕಟ್ಟಿ ನಿಂತಿದ್ದಾರೆ. ಇದು ಕೂಡ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ದೊಡ್ಡ ಮಟ್ಟದ ಗೆಲುವನ್ನು ತಂದುಕೊಡಲಿದೆ ಎಂದರು.

ಶಿಕ್ಷಕರು ಹಾಗೂ ಪದವೀಧರರ ಸಮಸ್ಯೆಗಳ ಬಗ್ಗೆ ಆಗಾದ ಅರಿವಿರುವ ಕಾಂಗ್ರೆಸ್ ಪಕ್ಷದ ಇಬ್ಬರು ಸಮರ್ಥ ಅಭ್ಯರ್ಥಿಗಳ ಗೆಲುವು ಅತೀ ಮುಖ್ಯವಾಗಿದೆ. ಆ ಹಿನ್ನಲೆಯಲ್ಲಿ ಪದವೀಧರ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಆಯನೂರು ಮಂಜುನಾಥ್ ಹಾಗೂ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಡಾ.ಕೆ.ಕೆ.ಮಂಜುನಾಥ್ ಕುಮಾರ್ ಇವರನ್ನು ಆಯ್ಕೆ ಮಾಡುವುದರ ಮೂಲಕ ಕಲುಷಿತಗೊಂಡಿರುವ ನೈರುತ್ಯ ಶಿಕ್ಷಕರ ಕ್ಷೇತ್ರವನ್ನು ಪವಿತ್ರಗೊಳಿಸಬೇಕು ಎಂದರು.

ಗೋಷ್ಟಿಯಲ್ಲಿ ಫಣಿರಾಜ್ ಜೈನ್, ಶಾಂತವೀರ ನಾಯಕ್ ಇದ್ದರು

Widespread wave of Congress party candidates is blowing

About Author

Leave a Reply

Your email address will not be published. Required fields are marked *