September 16, 2024

ಸರಕಾರದಿಂದಲೇ ವರ್ಷಕ್ಕೊಮ್ಮೆ ವೈದ್ಯರನ್ನು ಕರೆಯಿಸಿ ಉಚಿತ ಆರೋಗ್ಯ ತಪಾಸಣಾ ಶಿಬಿರ

0
ಉಚಿತ ಆರೋಗ್ಯ ತಪಾಸಣಾ ಶಿಬಿರ

ಉಚಿತ ಆರೋಗ್ಯ ತಪಾಸಣಾ ಶಿಬಿರ

ಚಿಕ್ಕಮಗಳೂರು: ಅನ್ನದಾನ, ವಿದ್ಯಾದಾನಗಳಿಗಿಂತ ಆರೋಗ್ಯ ದಾನ ಮಿಗಿಲು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಅಭಿಪ್ರಾಯಿಸಿದರು.

ನಗರದ ಉರ್ದುಶಾಲೆಯಲ್ಲಿ ನ್ಯಾಶನಲ್ ವೆಲೇರ್ ಚಾರಿಟಬಲ್ ಟ್ರಸ್ಟ್ ಹಾಗೂ ಕಣಚೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಅನ್ನದಾನ,ವಿದ್ಯದಾನ ಶ್ರೇಷ್ಠ ಎನ್ನುತ್ತಾರೆ. ಆದರೆ, ಸರಕಾರ ಅಥವಾ ಟ್ರಸ್ಟ್ ವತಿಯಿಂದ ಬಡವರಿಗೆ ನಡೆಸುವ ಉಚಿತ ಆರೋಗ್ಯ ಶಿಬಿರಗಳು ಎಲ್ಲಕ್ಕಿಂತ ಮಿಗಿಲು. ಯಾವುದೇ ಸರಕಾರ ಇರಲಿ ಆರೋಗ್ಯ, ಶಿಕ್ಷಣವನ್ನು ಉಚಿತವಾಗಿ ಕೊಡಬೇಕು. ಅದು ಬಡವರಿಗೆ ಒಳ್ಳೆಯದಾಗುತ್ತದೆ. ಈ ಬಗ್ಗೆ ಸರಕಾರದ ಮಟ್ಟದಲ್ಲಿ ಮಾತಾಡುತ್ತಿದ್ದೇವೆ. ಒಂದಷ್ಟು ಪ್ರಯತ್ನ ಮಾಡುತ್ತಿದ್ದೇವೆ. ಆರೋಗ್ಯ ಮತ್ತು ಶಿಕ್ಷಣ ಉಚಿತವಾಗಿ ದೊರೆತರೆ ಇನ್ಯಾವುದು ಅವರಿಗೆ ಉಚಿತ ಕೊಡುಗೆ ಬೇಡ. ಆರೋಗ್ಯ ಚೆನ್ನಾಗಿದ್ದರೆ ಏನೆಲ್ಲಾ ಸಂಪಾದನೆ,ಸಾಧನೆ ಮಾಡಲು ವಿಫುಲ ಅವಕಾಶಗಳಿವೆ ಎಂದರು.

ಯಾವುದೇ ಧರ್ಮದ ಜನರಿರಲಿ ಅವರು ದೇವರಲ್ಲಿ ಮೊದಲು ಬೇಡುವುದೆ ಆರೋಗ್ಯ ಚೆನ್ನಾನಿರಲಿ ಎಂದು. ಕಾಯಿಲೆಗಳು ಹೇಳಿ ಕೇಳಿ ಬರುವುದಿಲ್ಲ. ಮಧ್ಯಮ ಮತ್ತು ಬಡವರಿಗೆ ದೊಡ್ಡ ಕಾಯಿಲೆಗಳು ಬಾರದಿರಲಿ. ಬಂದರೆ ಅವರು ಎಲ್ಲ ಆಸ್ತಿ ಪಾಸ್ತಿ ಕಳೆದುಕೊಂಡು ನಿರ್ಗತಿಕರಾಗುತ್ತಾರೆ ಎಂದರು.

ನ್ಯಾಶನಲ್ ವೆಲೇರ್ ಟ್ರಸ್ಟ್ ನಿಂದ ೯ ವರ್ಷದಿಂದ ಈ ಉಚಿತ ಆರೋಗ್ಯ ತಪಾಸಣೆ ಶಿಬಿರ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ . ಈ ವರ್ಷದಿಂದ ಸರಕಾರದಿಂದಲೇ ವರ್ಷಕ್ಕೊಮ್ಮೆ ಒಳ್ಳೊಳ್ಳೆ ವೈದ್ಯರನ್ನು ಕರೆಯಿಸಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸುತ್ತೇವೆ. ಚಿಕ್ಕಮಗಳೂರಿಗೆ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಾಗಿದೆ ಅದನ್ನು ೨ ವರ್ಷದಲ್ಲಿ ಪೂರ್ಣಗೊಳಿಸಿ ಜನರಿಗೆ ಅರ್ಪಣೆ ಮಾಡುತ್ತೇವೆ ಎಂದು ಹೇಳಿದರು.

ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಶಫಿಉಲ್ಲಾ, ಬಡಜನರಿಗೆ ಉಚಿತ ಚಿಕಿತ್ಸೆ , ಸೌಲಭ್ಯ ಸಿಗಬೇಕು ಎಂಬುದ ಟ್ರಸ್ಟ್ ಉದ್ದೇಶ. ಕಾಯಿಲೆ ಎನ್ನುವುದು ಬಡವ ಬಲ್ಲಿದ ಎಂಬುದನ್ನು ನೋಡಿ ಬರುವುದಿಲ. ಹೀಗಾಗಿ ಸರಕಾರ ಎಲ್ಲರಿಗೂ ಸಮಾನ ಚಿಕಿತ್ಸೆ ಹಾಗೂ ಸೌಲಭ್ಯ ನೀಡಬೇಕು . ಕಣಚೂರು ಮೆಡಿಕಲ್ ಕಾಲೇಜು ಶೇ.೯೦ ರಷ್ಟು ಸೌಲಭ್ಯ ನೀಡುವ ಮೂಲಕ ಇಂದು ಉಚಿತ ಚಿಕಿತ್ಸಾ ಶಿಬಿರ ನಡೆಸುತ್ತಿದೆ. ದಾನಶೂರ ಕರ್ಣನಾಗಿ ಡಾ. ಹಾಜಿ ಮೋಣು ಅವರ ಕುಟುಂಬ ಕಣಚೂರು ಮೆಡಿಕಲ್ ಕಾಲೇಜು ಸಂಸ್ಥೆಯಿಂದ ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.

ಟ್ರಸ್ಟ್ ಅಧ್ಯಕ್ಷ ರಿಯಾಜ್ ಖಾನ್ ಮಾತನಾಡಿ, ಟ್ರಸ್ಟ್ ವತಿಯಿಂದ ಆರ್ಥೋ ,ಕ್ಯಾನ್ಸರ್ ಮತ್ತಿತರೆ ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದ ಅನೇಕರನ್ನು ಕಣಚೂರು ಮೆಡಿಕಲ್ ಆಸ್ಪತ್ರೆಗೆಸೇರಿಸಿ ಚಿಕಿತ್ಸೆ ಕೊಡಿಸಿದೇವೆ. ನಮ್ಮ ಆರೋಗ್ಯ ತಪಾಸಣೆ ಶಿಬಿರ ವರ್ಷವಿಡಿ ಇರಲಿದೆ. ನ್ಯಾಶನಲ್ ಟ್ರಸ್ಟ್ ನಿಂದ ಎರಡೂವರೆ ಸಾವಿರ ಆಪರೇಶನ್ ಮಾಡಿಸಿದ್ದೇವೆ, ಪ್ರತವರ್ಷ ಮುಂಜಿ ಕಾರ್ಯಕ್ರಮವನ್ನು ಇಲಿ ಮಾಡಿಸುತ್ತೇವೆ. ತುಂಬಾ ಬಡವರಿದ್ದರೆ ಅವರಿಗೆ ಉಚಿತ ಚಿಕಿತ್ಸೆ ಕೊಡಿಸುತ್ತೇವೆ ಎಂದು ಹೇಳಿದರು.

ಕಣಚೂರು ಆಸ್ಪತ್ರೆಯ ಮುಖ್ಯಸ್ಥ ಡಾ.ಅಬ್ದುಲ್ ರೆಹಮಾನ್ ಮಾತನಾಡಿ ಮಂಗಳೂರಿನ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಿಂದ ರಾಜ್ಯಾದ್ಯಂತ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸುತ್ತಿದ್ದು ಆಸಕ್ತರಿಗೆ ಉಚಿತವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದುರು. ಮುಖಂಡ ಷಹಬುದ್ದೀನ್ ಪ್ರಾಸ್ತಾವಿಸಿದರು. ಕಾಂಗ್ರೆಸ್ ಮುಖಂಡ ಎಂ.ಎಲ್.ಮೂರ್ತಿ, ಸಿಪಿಐ ಮುಂಡ ಬಿ.ಅಮ್ಜದ್, ಸಿಡಿಎ ಮಾಜಿ ಅಧ್ಯಕ್ಷ ಅತೀಕ್ ಖೈಸರ್, ಉಪಾಧ್ಯಕ್ಷರಾದ ಸೈಯದ್ ಗೌಸ್ ಮೋಹಿದ್ದೀನ್ ಶಾ, ನಿರ್ದೇಶಕರಾದ ಅಕ್ಮಲ್, ಇಕ್ಬಾದ್ ಅಹಮದ್, ಅನ್ವರ್, ರಫೀಕ್ ಅಹಮದ್, ಅಸ್ಲಾಮ್, ಪರ್ವೀಜ್, ಜಿಯಾ, ಪೈರಜ್ ಅಹಮದ್, ಮತ್ತಿತರರಿದ್ದರು.

Free health checkup camp

About Author

Leave a Reply

Your email address will not be published. Required fields are marked *