September 16, 2024

ಶಿಕ್ಷಕರ ಸ್ವಾಭಿಮಾನ – ವೃತ್ತಿಗೌರವದ ಪಾವಿತ್ರ್ಯತೆಗೆ ಧ್ವನಿ

0
ನೈರುತ್ಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎನ್.ಆರ್. ಹರೀಶ್ ಆಚಾರ್ಯ ಸುದ್ದಿಗೋಷ್ಠಿ

ನೈರುತ್ಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎನ್.ಆರ್. ಹರೀಶ್ ಆಚಾರ್ಯ ಸುದ್ದಿಗೋಷ್ಠಿ

ಚಿಕ್ಕಮಗಳೂರು: ಶಿಕ್ಷಕರ ಸ್ವಾಭಿಮಾನ ಮತ್ತು ವೃತ್ತಿಗೌರವದ ಪಾವಿತ್ರ್ಯತೆಗೆ ಧ್ವನಿಯಾಗಲಿದ್ದೇನೆಂದು ನೈರುತ್ಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎನ್.ಆರ್. ಹರೀಶ್ ಆಚಾರ್ಯ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಶನಿವಾರ ಮಾತನಾಡಿ,ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯನಾಗಿ, ದಕ್ಷಿಣಕನ್ನಡ, ಉಡುಪಿ ಮತ್ತು ಕೊಡಗು ಜಿಲೆಯ ಅತಿಥಿ ಉಪನ್ಯಾಸಕರ ಸಂಘದ ಗೌರವ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆಂದು ತಿಳಿಸಿದರು.

ಸಮಾಜದಲ್ಲಿ ಅತ್ಯುನ್ನತ ಸ್ಥಾನಮಾನ ಹೊಂದಿದ ವಿಶಿಷ್ಟ ವ್ಯಕ್ತಿ ಹಾಜಗೂ ಎಲ್ಲರನ್ನೂ ಸನ್ಮಾರ್ಗದಲ್ಲಿ ಕೊಂಡೊಯ್ಯುವ ಪ್ರೇರಕ ಶಕ್ತಿ ಶಿಕ್ಷಕ. ಭವಿಷ್ಯದ ಭವ್ಯ ಭಾರತದ ಕೀಲಿಕೈ ಶಿಕ್ಷಕ ಎಂದರೆ ಅತಿಶಯೋಕ್ತಿ ಆಗಲಾರದು. ನೈರುತ್ಯ ಶಿಕ್ಷಕರ ಕ್ಷೇತ್ರದ ನಿಮ್ಮೆಲ್ಲರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ಶಿಕ್ಷಣ ರಂಗದ ಮಹತ್ವ ಮತ್ತು ಶಿಕ್ಷಕ ಸಮುದಾಯದ ಹಿತವನ್ನು ಕಣ್ಣು ಮುಂದೆ ಇಟ್ಟುಕೊಂಡು ಈ ಕ್ಷೇತ್ರವನ್ನು ಗಟ್ಟಿಗೊಳಿಸಬೇಕಾ ಗಿದೆ. ಈ ಹಿನ್ನಲೆಯಲ್ಲಿ ನನ್ನನ್ನು ಶಿಕ್ಷಕರ ಧ್ವನಿಯಾಗಿ ಪರಿಗಣಿಸಿ, ಶಿಕ್ಷಕ ಸಮುದಾಯದ ಪ್ರತಿನಿಧಿಯಾಗಿ ಬಹುಮತದಿಂದ ಚುನಾಯಿಸಬೇಕೆಂದು ಮನವಿ ಮಾಡಿದರು.

ಅಧ್ಯಾಪಕ ವೃತ್ತಿ ಅತ್ಯಂತ ಪವಿತ್ರವಾದುದು.ಭವಿಷ್ಯದ ಸುಂದರ ಭಾರತ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಹಿರಿದು. ಶಿಕ್ಷಕ ಯಾವತ್ತೂ ಮಾರಾಟದ ಸರಕ್ಕಲ್ಲ, ಆದರೆ ಶಿಕ್ಷಕರ ಮತವನ್ನು ಆಮಿಷಗಳಿಂದ ಕೊಂಡುಕೊಳ್ಳ ಬಾರದು. ಈ ಕ್ಷೇತ್ರದ ಚುನಾವಣೆಯನ್ನು ಈ ರೀತಿಯೂ ನಡೆಸಬಹುದು ಎಂಬ ಮಾನಸಿಕತೆ ಪ್ರತಿನಿಧಿಸುವ ಅಭ್ಯರ್ಥಿಗಳಲ್ಲಿ ಮೂಡಿರುವುದು ಈ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತಂದಿದೆ ಎಂದರು.

ಶಿಕ್ಷಕ ಸಮುದಾಯ ಮತ್ತು ಶಿಕ್ಷಣ ವಲಯ ಇತ್ತೀಚಿನ ದಶಕಗಳಲ್ಲಿ ದಿವ್ಯ ನಿರ್ಲಕ್ಷಕ್ಕೆ ಒಳಗಾಗುತ್ತಿದೆ. ರಚನಾತ್ಮಕ ಸಮಾಜ ನಿರ್ಮಾಣದಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುವ ಶಿಕ್ಷಣ ವಲಯ ಮತ್ತು ಶಿಕ್ಷಕ ಸಮುದಾಯದ ಬಗ್ಗೆ ಸರ್ಕಾರದ ಪ್ರಾಶಸ್ತ್ಯ ಕೊನೆಯದಾಗಿದೆ ಎಂಬುದು ಅತ್ಯಂತ ವಿಷಾದದ ಸಂಗತಿ ಎಂದು ಹೇಳಿದರು

ನೆಮ್ಮದಿಯ ವೇತನವಿಲ್ಲ, ಬೋಧನಾಕಾರ್ಯ ನಿರ್ವಹಿಸಿದರೂ ಅದು ಸಿಗುತ್ತದೆಡ ಎಂಬ ಭರವಸೆ ಇಲ್ಲ. ಕನಿಷ್ಟ ರಜೆಯ ಸೌಲಭ್ಯವಿಲ್ಲ, ವೈದ್ಯಕೀಯ, ಹೆರಿಗೆ ರಜೆಗಳು ಮಾನವೀತೆಯನ್ನು ಅಣಕವಾಡುವಂತಿದೆ. ಇಷ್ಟದರೂ ಮುಂದೆ ಸೇವೆಯಲ್ಲಿ ಮುಂದುವರೆಯುತ್ತೇವೆಯೋ ಇಲ್ಲವೋ ಎಂಬ ಅನಿಶ್ಚಿತತೆಯಲ್ಲಿ ಶಿಕ್ಷಕರಿ ದ್ದಾರೆ. ಒಟ್ಟಾರೆಯಾಗಿ ಸಮಾಜದಲ್ಲಿ ಇಂದು ಶಿಕ್ಷಕರು ಶೋಷಿತ ಸಮುದಾಯದ ಪ್ರತಿನಿಧಿಯಂತೆ ಕಾಣುತ್ತಿದ್ದಾರೆಂದು ತಿಳಿಸಿದರು.

ಅತಿಥಿ ಉಪನ್ಯಾಸಕರು, ದೈಹಿಕ ಶಿಕ್ಷಣ ಶಿಕ್ಷಕರು,ಪದವಿಪೂರ್ವ ಕಾಲೇಜು ಶಿಕ್ಷಕರು ಪ್ರೌಢಶಾಲಾ ಶಿಕ್ಷಕರು, ಖಾಸಗಿಕಾಲೇಜು ಶಿಕ್ಷಕರು ಹಾಗೂ ಸರ್ಕಾರಿ ಕಾಲೇಜು ಶಿಕ್ಷಕರು ಸೇರಿದಂತೆ ಶಿಕ್ಷಕ ಸಮುದಾಯ ಆಶೋತ್ತರಗಳಿಗೆ ಧ್ವನಿಯಾಗಿ ಕೆಲಸಮಾಡಿರುತ್ತೇನೆಂದು ಹೇಳಿದರು. ವಿಶ್ವನಾಥ, ಕವೀಶ್, ಚಂದ್ರಶೇಖರ್ ಇದ್ದರು.

Teachers’ Self -esteem – Voice to the sanctity of professional

About Author

Leave a Reply

Your email address will not be published. Required fields are marked *