September 16, 2024

ಭೂ ಮಂಜೂರಾತಿ ಹಗರಣ ಲೋಪಗಳ ಬಗ್ಗೆ 90 ದಿನಗಳಲ್ಲಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ಅಂತಿಮ ವರದಿ

0
ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್

ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್

ಚಿಕ್ಕಮಗಳೂರು:  ಕಡೂರು ಮತ್ತು ಮೂಡಿಗೆರೆ ತಾಲ್ಲೂಕುಗಳಲ್ಲಿ ನಡೆದಿರುವ ಭೂ ಮಂಜೂರಾತಿ ಹಗರಣದ ಬಗ್ಗೆ ನಡೆದ ತನಿಖಾ ವರದಿಯಲ್ಲಿ ಸರ್ವೇ ಆಗಬೇಕಿರುವ ಪ್ರಕರಣಗಳು ಮತ್ತು ಮಂಜೂರಾತಿ ಪ್ರಕ್ರಿಯೆಗಳಲ್ಲಾದ ಲೋಪಗಳ ಬಗ್ಗೆ ೯೦ ದಿನಗಳಲ್ಲಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ತಿಳಿಸಿದರು.

ಈ ಕುರಿತು ಸೋಮವಾರ ಮಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಗರಣದ ತನಿಖೆಗೆ ಸಂಬಂಧಿಸಿದಂತೆ ಸರ್ಕಾರದಿಂದ ತಮಗೆ ಪತ್ರ ಬಂದಿರುವುದು ಹೌದು. ಹಗರಣದಲ್ಲಿ ಯಾವುದೆಲ್ಲಾ ಅನರ್ಹ ಮಂಜೂರಾತಿ ಎಂದು ತೀರ್ಮಾನ ಆಗಿದೆ ಅಂತಹ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ಕ್ರಮ ಆಗಲಿದೆ ಎಂದರು.

ಹಗರಣದ ತನಿಖೆಗೆ ರಾಜ್ಯದಿಂದ ಬಂದಿದ್ದ ತನಿಖಾ ತಂಡವು ಮೂರು ರೀತಿಯ ಪ್ರಕರಣಗಳನ್ನು ಉಲ್ಲೇಖವನ್ನು ಮಾಡಿತ್ತು. ಮೊದಲನೆಯದಾಗಿ ಕರ್ನಾಟಕ ಭೂಮಂಜೂರಿ ನಿಯಮಗಳನ್ನು ಉಲ್ಲಂಘಿಸಿ ಮಂಜೂರಾತಿ ಮಾಡಿರುವ ಒಂದು ಗುಂಪು ಮಾಡಲಾಗಿದೆ.

ಅಂದರೆ ಅದು ಸಂಪೂರ್ಣ ಅನರ್ಹ ಪ್ರಕರಣಗಳಾಗಿರುತ್ತವೆ. ಉದಾಹರಣೆಗೆ ೧೮ ವರ್ಷ ಯೋಮಿತಿಗಿಂತ ಕಡಿಮೆ ಇರುವವ ಅರ್ಜಿದಾರರಿಗೆ ಮಂಜೂರು ಮಾಡಿರುವುದು ಅಥವಾ ಅಥವಾ ನಗರಸಭೆ, ಪುರಸಭೆ ಇತರೆ ನಗರ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಿಂದ ೩ ಅಥವಾ ೫ ಕಿ.ಮೀ. ಹೊರಗಿರುವ ನಿರ್ಧರಿತ ಗಡಿಯಿಂದ ಒಳಗೆ ನಿಯಮ ಉಲ್ಲಂಘಿಸಿ ಮಂಜೂರಾತಿ ಮಾಡಿರುವುದು ಇವೆಲ್ಲವೂ ಮೇಲ್ನೋಟಕ್ಕೆ ಅಧಿಕೃತವಾಗಿ ಸಂಪೂರ್ಣ ಅನರ್ಹ ಪ್ರಕರಣಗಳಾಗಿರುತ್ತವೆ.

ಇದಕ್ಕೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲೇ ಕ್ರಮ ತೆಗೆದುಕೊಳ್ಳುತ್ತಿದೆ ಎಂದರು.
ಇನ್ನೆರಡು ರೀತಿಯ ಪ್ರಕರಣಗಳಲ್ಲಿ ಇನ್ನೂ ಸ್ವಲ್ಪ ಹೆಚ್ಚುವರಿ ತನಿಖೆ ಮಾಡಿ ಅವುಗಳು ಅರ್ಹ ಅಥವಾ ಅನರ್ಹ ಎಂದು ನಿರ್ಧರಿಸಬೇಕಿದೆ ಎಂದರು.

ಉದಾಹರಣೆಗೆ ಒಂದು ಸರ್ವೇ ನಂಬರ್‌ನಲ್ಲಿ ಅರಣ್ಯ ಮತ್ತು ಗೋಮಾಳ ಎಂದು ಇರುತ್ತದೆ. ಅಂತಹ ಪ್ರಕರಣಗಳಲ್ಲಿ ತನಿಖಾ ತಂಡಕ್ಕೆ ಸರ್ವೇ ಮಾಡಿಸಲು ಸಾಧ್ಯವಾಗಲಿಲ್ಲ. ಅಂತಹ ಸರ್ವೇ ನಂಬರ್‌ಗಳನ್ನು ಈಗ ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಪರಿಶೀಲನೆ ಮಾಡಿ ಅದು ಅಧಿಕೃತ ಅಥವಾ ಅನಧಿಕೃತ ಮಂಜೂರಾತಿ ಎಂಬುದನ್ನು ನಿರ್ಧರಿಸಲು ಸರ್ಕಾರ ಸೂಚಿಸಿದೆ ಎಂದರು.

ಮೂರನೇ ಹಂತದಲ್ಲಿ ಮಂಜೂರಾತಿ ಹಂತದಲ್ಲಾಗಿರುವ ಪ್ರಕ್ರಿಯೆಗಳ ಲೋಪಗಳನ್ನು ಗುರುತಿಸುವುದು. ಉದಾಹರಣೆಗೆ ಅರ್ಹತೆ ಇದ್ದರೂ ಕೆಲವು ದಾಖಲೆಗಳು ಸರಿಯಾಗಿ ಲಗತ್ತಾಗದೇ ಇರುವುದು, ಕಡತ ಕಳೆದು ಹೋಗಿರುವುದು ಅಥವಾ ಸಮಿತಿ ಸಭೆ ಕರೆದಿದ್ದರೂ ಸಹಿ ಪಡೆಯದಿರುವಂತಹದ್ದು.

ಹೀಗೆ ಎರಡು ಮತ್ತು ಮೂರನೇ ಹಂತದ ಪ್ರಕರಣಗಳನ್ನು ೯೦ ದಿನಗಳ ಒಳಗೆ ಇತ್ಯರ್ಥ ಮಾಡಿ ಕಳಿಸಿಕೊಡಬೇಕು ಎಂದು ಸರ್ಕಾರದಿಂದ ಸೂಚನೆ ಇದೆ. ಈ ಹಿನ್ನೆಲೆಯಲ್ಲಿ ತನಿಖಾ ತಂಡಕ್ಕೆ ನಾವು ಹಿಂದೆ ಕೊಟ್ಟಿದ್ದ ಸಂಪೂರ್ಣ ದಾಖಲೆಗಳನ್ನು ವಾಪಾಸ್ ಕೊಡಬೇಕು ಎಂದು ಕೇಳಿಕೊಂಡಿದ್ದೇವೆ. ಇಂದು ಅಥವಾ ನಾಳೆಯೊಳಗಾಗಿ ಇ-ಆಫೀಸ್ ಮೂಲಕ ನಮಗೆ ಆ ಎಲ್ಲಾ ದಾಖಲೆಗಳು ತಲುಪಲಿದೆ. ನಂತರ ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಎಷ್ಟು ಸರ್ವೇ ನಂಬರ್‌ಗಳಲ್ಲಿ ಸರ್ವೇ ಮಾಡಿಸಬೇಕಾಗುತ್ತದೆ. ಸರ್ವೇ ಸಿಬ್ಬಂದಿಗಳ ಲಭ್ಯತೆ ಎಲ್ಲವನ್ನೂ ಆಧರಿಸಿ ೬೦ ರಿಂದ ೯೦ ದಿನಗಳ ಒಳಗಾಗಿ ವರದಿ ಸಿದ್ಧಪಡಿಸುತ್ತೇವೆ ಎಂದು ತಿಳಿಸಿದರು.

Review and final report to the government within 90 days

About Author

Leave a Reply

Your email address will not be published. Required fields are marked *