September 16, 2024

ಪೊಲೀಸ್ ಅಧಿಕಾರಿಗಳು-ಮಾಧ್ಯಮದವರಿಗೆ ಹೊಸ ಕಾನೂನುಗಳ ಅರಿವು ಕಾರ್ಯಗಾರ

0
ಪೊಲೀಸ್ ಅಧಿಕಾರಿಗಳು-ಮಾಧ್ಯಮದವರಿಗೆ ಹೊಸ ಕಾನೂನುಗಳ ಅರಿವು ಕಾರ್ಯಗಾರ

ಚಿಕ್ಕಮಗಳೂರು: ಭಾರತದ ದಂಡ ಪ್ರಕಿಯಾ ಪ್ರಮುಖ ಮೂರು ಕಾಯ್ದೆಗಳನ್ನು ಬದಲಾವಣೆ ಮಾಡಿ ಹೊಸ ಕಾನೂನುಗಳನ್ನಾಗಿ ಪರಿವರ್ತನೆ ಮಾಡಿದ್ದು, ಮುಂದಿನ ಜುಲೈ ೧ ರಿಂದ ಅನು?ನಕ್ಕೆ ಬರಲಿವೆ ಎಂದು ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶರು ಆಗಿರುವ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ಹನುಮಂತಪ್ಪ ತಿಳಿಸಿದರು.

ಅವರು ಇಂದು ನಗರಕ್ಕೆ ಸಮೀಪದ ಅಲ್ಲಂಪುರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಚಿಕ್ಕಮಗಳೂರು ಪ್ರಸ್‌ಕ್ಲಬ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ಏರ್ಪಡಿಸಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಮಾಧ್ಯಮದವರಿಗೆ ಹೊಸ ಕಾನೂನುಗಳ ಅರಿವು ಮೂಡಿಸುವ ಸಂಬಂಧ ಏರ್ಪಡಿಸಲಾಗಿದ್ದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಸೃಷ್ಠಿಚಲನಶೀಲವಾಗಿರುವಂತೆ ಬದಲಾವಣೆ ಅತ್ಯಗತ್ಯ. ಮನು?ನ ಬದುಕು ದಿನದಿಂದ ದಿನಕ್ಕೆ ಬದಲಾವಣೆ ಆಗುತ್ತದೆ. ನಾಗರೀಕ ಸಮಾಜ ಬದಲಾದಂತೆ ಕಾನೂನುಗಳು ಬದಲಾಗುತ್ತವೆ. ಈ ನಿಟ್ಟಿನಲ್ಲಿ ಅತ್ಯಂತ ಹಳೆಯದಾಗಿರುವ ಭಾರತೀಯ ದಂಡ ಸಂಹಿತೆ ಹಾಗೂ ಪೊಲೀಸ್ ಕಾಯ್ದೆಗಳಿಗೆ ಬದಲಾವಣೆ ಮಾಡಲಾಗಿದೆ ಎಂದರು.

ಕಾನೂನಿಗೆ ಸಂಬಂಧಿಸಿದ ಎಲ್ಲಾ ಬದಲಾವಣೆಗಳು ಸಂವಿಧಾನದ ಮೂಲ ಆಶಯಗಳಿಗೆ ಒಳಪಟ್ಟಿರುತ್ತವೆ. ಸಂವಿಧಾನದಲ್ಲಿ ಸಾಕ? ತಿದ್ದುಪಡಿಗಳಾಗಿದ್ದರೂ ಸಂವಿಧಾನದ ಮೂಲ ತಳಹದಿಯಲ್ಲಿರುತ್ತವೆ. ನಾಗರಿಕ ಸಮಾಜ ಬೇರೆಯವರ ಹಕ್ಕುಗಳನ್ನು ಹರಣ ಮಾಡಬಾರದೆಂಬ ಉದ್ದೇಶದಿಂದ ಕಾನೂನುಗಳು ಬದಲಾವಣೆ ಆಗಿದ್ದು ಜುಲೈ ೧ ರಿಂದ ಜಾರಿಗೆ ಬರುವ ಮೂಲಕ ಜನಸಾಮಾನ್ಯರ ಬಳಕೆಗೆ ಲಭ್ಯವಾಗಲಿದೆ ಎಂದು ಹೇಳಿದರು.

ಪ್ರಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ. ವಿಕ್ರಮ ಅಮಟೆ ಅವರು ೧೮೬೦ ರಿಂದ ಜಾರಿಯಲ್ಲಿದ್ದ ಐಪಿಸಿ ಸೆಕ್ಷನ್ ಇಂಡಿಯನ್ ಪೀನಲ್ ಕೋಡ್ ಹಾಗೂ ಇಂಡಿಯನ್ ಏವಿಡೆನ್ಸ್ ಆಕ್ಟ್ ಇವುಗಳಿಗೆ ಸರಳೀಕರಣ ಮಾಡಿ ಹೊಸ ಕಾಯ್ದೆಗಳನ್ನಾಗಿ ರೂಪಿಸಲಾಗಿದೆ ಎಂದು ತಿಳಿಸಿದರು.

ಭಾರತೀಯ ದಂಡ ಪ್ರಕ್ರಿಯ ಸಂಹಿತೆ ಕಾನೂನನ್ನು ಭಾರತೀಯ ನ್ಯಾಯ ಸಂಹಿತೆ, ಭಾರತೀಯ ಪೊಲೀಸ್ ಕಾಯ್ದೆಯನ್ನು ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮ ಇಂದು ಹೊಸ ಕಾನೂನುಗಳಾಗಿ ಪರಿವರ್ತಿಸಲಾಗಿದೆ ಎಂದರು.

ಹೊಸ ಅಪರಾಧ ಕಾನೂನುಗಳ ಬಗ್ಗೆ ಮಾಹಿತಿ ನೀಡಿದ ಸರ್ಕಾರಿ ಅಭಿಯೋಜಕಿ ಶ್ರೀಮತಿ ಭಾವನ ಅವರು ೧೮೬೦ರ ಬ್ರಿಟಿ? ಆಳ್ವಿಕೆ ಕಾಲದಲ್ಲಿದ್ದ ಐಪಿಸಿ ಕಾನೂನುಗಳನ್ನು ಭಾರತೀಯ ನ್ಯಾಯ ಸಂಹಿತೆ ೨೦೨೩ ಎಂದು ಬದಲಾವಣೆ ಮಾಡಲಾಗಿದೆ ಎಂದು ಹೇಳಿದರು.

ಹಳೆ ಕಾನೂನುಗಳನ್ನು ಸಂಪೂರ್ಣವಾಗಿ ಬಿಡುವುದಿಲ್ಲ. ೧೮೭೨ ರಲ್ಲಿ ಜಾರಿಗೆ ಬಂದಿದ್ದ ಸಿಆರ್‌ಪಿಸಿ ಕಾನೂನನ್ನು ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆಯಾಗಿ ಬದಲಾವಣೆ ಮಾಡಿ ಅದರಲ್ಲಿದ್ದ ಉಪ ಕಾಲಂಗಳನ್ನು ಬದಲಾವಣೆ ಮಾಡಿ ನಿರ್ದಿ? ಅಪರಾಧಗಳಿಗೆ ನಿರ್ದಿ? ಶಿಕ್ಷೆಯ ಪ್ರಮಾಣವನ್ನು ನಿಗದಿಪಡಿಸಲಾಗಿದೆ ಎಂದರು.

ಬದಲಾಗುತ್ತಿರುವ ಈ ಪರಿಸ್ಥಿತಿಯಲ್ಲಿ ಡಿಜಿಟಲ್ ಅಪರಾಧಗಳು ಹಾಗೂ ಸೈಬರ್ ಕ್ರೈಂ ಅಪರಾಧಗಳಿಗೆ ಸೂಕ್ತವಾದ ಶಿಕ್ಷೆ ಕೊಡಿಸಲು ಹಳೆ ಕಾನೂನಿನಲ್ಲಿ ಸಾಧ್ಯವಾಗದಿರುವುದರಿಂದ ಈಗಿನ ಪರಿಸ್ಥಿತಿಗೆ ತಕ್ಕಂತೆ ಭಾರತೀಯ ದಂಡ ಸಂಹಿತೆ ಕಾನೂನಿಗೆ ಬದಲಾವಣೆ ತರಲಾಗಿದೆ ಎಂದು ತಿಳಿಸಿದರು.

ಹಳೆಯ ಐಪಿಸಿ ಕಾನೂನಿನಲ್ಲಿ ೨೩೨೭ ಉಪ ಕಾಲಂಗಳಿದ್ದು, ಹೊಸ ಕಾನೂನಿನಲ್ಲಿ ೩೫೦ ಪರಿಚ್ಚೇದ ೨೦ ಉಪ ಕಾಲಂಗಳನ್ನಾಗಿ ಸೀಮಿತಗೊಳಿಸಿ ೬೩೬೯ ರವರೆಗೆ ಒಂದೇ ವಿಧದ ಶಿಕ್ಷೆ ವಿಧಿಸುವಂತೆ ಆಗಿದೆ ಹಾಗೂ ಹಿಂದೆ ಐಪಿಸಿ ಕಲಂಗಳಡಿ ವಿಧಿಸುತ್ತಿದ್ದ ಅಪರಾಧ ಪ್ರಕರಣಗಳಿಗೆ ಶಿಕ್ಷೆಯ ಪದ್ಧತಿಯನ್ನು ಬದಲಾವಣೆ ಮಾಡಿ ಮೂರು ವ?ದಿಂದ ಏಳು ವ?ದವರೆಗೆ ವಿಧಿಸಬಹುದಾದಂತಹ ಕಾರಾಗೃಹ ಶಿಕ್ಷೆಗಳಿಗೆ ಬದಲಾಗಿ ಸಮಾಜಸೇವೆ ಎಂಬ ಶಿಕ್ಷೆ ಪದ್ಧತಿಯನ್ನು ಅಳವಡಿಸಲಾಗಿದೆ ಎಂದು ಹೇಳಿದರು.

ಹಿಂದಿನ ಕಾಯ್ದೆಯಲ್ಲಿದ್ದ ದೇಶದ್ರೋಹ ಭಯೋತ್ಪಾದಕತೆ ವಿದ್ವಂಸಕ ಕೃತ್ಯಗಳು ಸೇರಿದಂತೆ ಎಲ್ಲಾ ರೀತಿಯ ಸಂಘಟನಾ ಅಪರಾಧಗಳನ್ನು ಸಹ ಹೊಸ ಕಾಯ್ದೆಯಲ್ಲಿ ೧೧೧ ರಿಂದ ೧೧೩ ರವರೆಗೆ ಸೇರ್ಪಡೆ ಮಾಡಿ ಶಿಕ್ಷೆಯ ಪ್ರಮಾಣವನ್ನು ನಿಗದಿಪಡಿಸಲಾಗಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ಬಾಲಾಪರಾಧಿ ಪ್ರಕರಣ ಗೌಪ್ಯತೆ ಕಾಪಾಡುವ ಜೊತೆಗೆ ಕಟ್ಟುನಿಟ್ಟಿನ ಶಿಕ್ಷೆ ವಿಧಿಸಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಹೊಸ ಕಾಯ್ದೆಯಲ್ಲಿ ತಿದ್ದುಪಡಿಗೊಳಿಸಿ ಅಳವಡಿಸಲಾಗಿದೆ ಎಂದು ಹೇಳಿದರು.

ಪೊಲೀಸ್ ಇಲಾಖೆಯ ಸಹಾಯಕ ಅಭಿಯೋಜಕ ಬಿನು ಮಾತನಾಡಿ, ಭಾರತೀಯ ಸುರಕ್ಷಿತ ನ್ಯಾಯ ಸಂಹಿತೆ ೧೯೭೩ಕ್ಕಿಂತ ಹಿಂದೆ ಸುಮಾರು ೧೫೦ ವ?ದ ಕಾನೂನಾಗಿದ್ದು, ಅವುಗಳನ್ನು ಬದಲಾವಣೆ ಮಾಡಿ ೪೧೫ ಕಾನೂನುಗಳನ್ನು ಯಥಾವತ್ತಾಗಿ ಉಳಿಸಿಕೊಂಡು ೯ ಹೊಸ ಕಾನೂನುಗಳನ್ನು ಅಳವಡಿಸಲಾಗಿದೆ ಎಂದು ವಿವರಿಸಿದರು.

ಎಲೆಕ್ಟ್ರಾನಿಕ್ ಮಾಧ್ಯಮ, ಸೈಬರ್ ಅಪರಾಧಗಳ ಶಿಕ್ಷೆ ಹಾಗೂ ತನಿಖೆ ವ್ಯವಸ್ಥೆಯನ್ನು ಬದಲಾವಣೆ ಮಾಡಲಾಗಿದೆ. ಸಾಕ್ಷ್ಯ ಅಧಿನಿಯಮ ಬದಲಾವಣೆಯಿಂದ ಪ್ರಕರಣಗಳನ್ನು ಕಾಲಮಿತಿಯೊಳಗೆ ಇತ್ಯರ್ಥಪಡಿಸಲು ಹೊಸ ಕಾನೂನಿನಲ್ಲಿ ಅಳವಡಿಸಲಾಗಿದೆ ಎಂದು ತಿಳಿಸಿದರು.
ಸಹಾಯಕ ಸರ್ಕಾರಿ ಅಭಿಯೋಜಕ ರಾಘವೇಂದ್ರ ರಾಯ್ಕರ್ ಮಾತನಾಡಿ, ಹೊಸ ಕಾನೂನುಗಳ ಅನು?ನದಲ್ಲಿ ಮಾಧ್ಯಮಗಳ ಕಾರ್ಯನಿರ್ವಹಣೆ ಬಗ್ಗೆ ವಿವರಿಸಿದರು.

ಚಿಕ್ಕಮಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ರಾಜೇಶ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಮಹಿಳಾ ಪೊಲೀಸ್ ಪೇದೆ ಕು. ಸುನಿತ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃ?ಮೂರ್ತಿ ಸ್ವಾಗತಿಸಿದರು. ರಾಕೇಶ್ ನಿರೂಪಿಸಿದರು.

Police officers-media awareness worker on new laws

About Author

Leave a Reply

Your email address will not be published. Required fields are marked *