September 8, 2024

ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ

0
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮನವಿ

ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮನವಿ

ಚಿಕ್ಕಮಗಳೂರು:  ನರಸಿಂಹರಾಜಪುರ ತಾಲೂಕಿನ ಸೂಸಲವಾನಿ ಗ್ರಾಮದಲ್ಲಿರುವ ಆದಿ ಕರ್ನಾಟಕ ಸಮುದಾಯದ ಕುಟುಂಬಗಳಿಗೆ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರವನ್ನು ನೀಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಡಳಿತವನ್ನು ಒತ್ತಾಯಿಸಿದೆ

ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರನ್ನು ಬುಧವಾರ ಸಮುದಾಯದವರೊಂದಿಗೆ ಭೇಟಿ ಮಾಡಿದ ಸಮಿತಿಯ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು

ನರಸಿಂಹರಾಜಪುರ ತಾಲೂಕಿನ ಸೂಸಲವಾನಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಆದಿ ಕರ್ನಾಟಕ ಸಮುದಾಯದ ಅನೇಕ ಕುಟುಂಬಗಳು ೧೫೦ ವರ್ಷಗಳಿಂದ ವಾಸವಾಗಿವೆ ಈ ಕುಟುಂಬಗಳು ತಮ್ಮ ಪೂರ್ವಜರ ಕಾಲದಿಂದಲೂ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರವನ್ನು ಪಡೆದಿವೆ ಎಂದರು

ಮೂಲತ: ಆದಿ ಕರ್ನಾಟಕ ಜಾತಿಯ ಈ ಕುಟುಂಬಗಳನ್ನು ೧೯೯೩ ರಲ್ಲಿ ಅಂದಿನ ತಹಶೀಲ್ದಾರರು ತಪ್ಪಾಗಿ ಪುಲಿಯನ್ ಜಾತಿ ಎಂದು ನಮೂದಿಸಿದ್ದಾರೆ ೨೦೧೩ ರ ನಂತರ ಈ ಕುಟುಂಬಗಳ ಜಾತಿ ಪ್ರಮಾಣ ಪತ್ರವನ್ನು ಸರ್ಕಾರ ನವೀಕರಣ ಮಾಡದೇ ಕಡೆಗಣಿಸಿದೆ ಎಂದು ಆರೋಪಿಸಿದರು

ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ದೊರೆಯದಿರುವುದರಿಂದಾಗಿ ಕಡುಬಡತನದಲ್ಲಿರುವ ಈ ಕುಟುಂಬಗಳು ಸರ್ಕಾರದ ಸವಲತ್ತುಗಳಿಂದ ವಂಚಿತವಾಗಿವೆ ಮಕ್ಕಳ ವಿದ್ಯಾಭ್ಯಾಸದ ಶುಲ್ಕವನ್ನು ಭರಿಸಲಾಗದೇ ಪರದಾಡುತ್ತಿವೆ ಎಂದು ತಿಳಿಸಿದರು

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಲ್‌ಎಸ್ ಶ್ರೀಕಾಂತ್ ಸಂಘಟನಾ ಸಂಚಾಲಕ ಡಿ ರಾಮು ತಾಲೂಕು ಸಂಘಟನಾ ಸಂಚಾಲಕ ಸುನಿಲ್ ಹೋಬಳಿ ಅಧ್ಯಕ್ಷ ಸಜಿ ಮಹಿಳಾ ವಿಭಾಗದ ಸಂಚಾಲಕಿ ರಾಗಿಣಿ ಶೀಲಾ ಗೋಪಾಲ್ ಹಾಜರಿದ್ದರು

Appeal to the Collector to issue Scheduled Caste certificate

About Author

Leave a Reply

Your email address will not be published. Required fields are marked *

You may have missed