September 16, 2024

ಬಸವಾದಿ ಶರಣರು ರಚಿಸಿದ ವಚನಗಳು ಈಗಿನ ಕಾಲಘಟ್ಟಕ್ಕೆ ಪ್ರಸ್ತುತ

0
ಬಸವತತ್ವ ಪೀಠ-ಬಸವ ಮಂದಿರದಲ್ಲಿ ನಡೆದ ಶಿವಾನುಭವಗೋಷ್ಠಿ

ಬಸವತತ್ವ ಪೀಠ-ಬಸವ ಮಂದಿರದಲ್ಲಿ ನಡೆದ ಶಿವಾನುಭವಗೋಷ್ಠಿ

ಚಿಕ್ಕಮಗಳೂರು-ಪ್ರತಿಯೊಬ್ಬರು ಕೇವಲ ಸಮಯಕ್ಕಾಗಿ ಕಾಯದೆ ತಮ್ಮ ಬದುಕು ರೂಪಿಸಲು ಧೈರ್ಯ, ಸಾಹಸ, ಕಾಯಕ ಮಾಡಿದಾಗ ಮಾತ್ರ ಬದುಕು ಹಸನುಗೊಳ್ಳುತ್ತದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು.

ಅವರು ಕಲ್ಯಾಣ ನಗರದ ಬಸವತತ್ವ ಪೀಠ-ಬಸವ ಮಂದಿರದಲ್ಲಿ ವಿದ್ಯುತ್ ಇಲಾಖೆ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘ ಏರ್ಪಡಿಸಿದ್ದ ಶಿವಾನುಭವಗೋಷ್ಠಿ-೩೪ ಹಾಗೂ ಪ್ರಜಾಪ್ರಭುತ್ವದ ಪಿತಾಮಹ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.

ಯಾವ ವ್ಯಕ್ತಿ ಶ್ರದ್ಧೆ-ಪರಿಶ್ರಮದಿಂದ ಕಾಯಕ ಮಾಡುತ್ತಾನೋ ಅಂತವರು ಜೀವನದಲ್ಲಿ ಯಶಸ್ಸು ಪಡೆಯುತ್ತಾರೆ. ಮಾಜಿ ರಾ?ಪತಿ ಎಪಿಜೆ ಅಬ್ದುಲ್ ಕಲಾಂ, ಸ್ವಾಮಿ ವಿವೇಕಾನಂದ, ಬಸವಣ್ಣ, ಕನಕದಾಸರು ಸೇರಿದಂತೆ ಬಹಳ? ಮಂದಿ ಸಾಮಾನ್ಯ ಕುಟುಂಬದಲ್ಲಿ ಜನಿಸಿ ವಿಶ್ವವಿಖ್ಯಾತಿ ಪಡೆದಿದ್ದಾರೆ ಎಂದು ತಿಳಿಸಿದರು.

ಸರ್ಕಾರ ವಿಶ್ವಗುರು ಜಗಜ್ಯೋತಿ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋ?ಣೆ ಮಾಡಿದ ಬಳಿಕ ನಡೆಯುತ್ತಿರುವ ಶಿವಾನುಭವಗೋಷ್ಠಿ ಹಾಗೂ ವಿಶ್ವಗುರು ಬಸವಣ್ಣ ಜಯಂತಿ ವಿಶೇ?ವಾದದ್ದು ಎಂದು ಹೇಳಿದರು.

ಕೆಲವು ಗ್ರಾಮಗಳಿಗೆ ಸೀಮಿತವಾಗಿದ್ದ ಬಸವ ಮಂದಿರ ಬಸವತತ್ವ ಪೀಠವನ್ನು ಕರ್ನಾಟಕ, ಭಾರತ ದೇಶ ಮಾತ್ರವಲ್ಲದೆ ಆಸ್ಟ್ರೇಲಿಯಾದಲ್ಲಿ ೧೮ ದಿನಗಳ ಕಾಲ ಬಸವಣ್ಣನ ವಿಚಾರಧಾರೆ ವಚನಗಳನ್ನು ಪ್ರಚಾರ ಮಾಡುವ ಅವಕಾಶ ಬಸವತತ್ವದಲ್ಲಿ ಡಾಕ್ಟರೇಟ್ ಪಡೆದಿರುವ ಬಸವ ಮರುಳಸಿದ್ಧ ಶ್ರೀಗಳು ನಡೆಸಿದ್ದಾರೆ ಎಂದು ಶ್ಲಾಘಿಸಿದರು.

೧೨ನೇ ಶತಮಾನದಲ್ಲಿ ಜೇಡರದಾಸಿಮಯ್ಯ ಹೇಳಿದ ಮಾತನ್ನು ಉಲ್ಲೇಖಿಸಿದ ತಮ್ಮಯ್ಯ ಮಠದಲ್ಲಿ ಬೃಹತ್ ಕಟ್ಟಡ ನಿರ್ಮಾಣವಾಗುತ್ತಿದ್ದು, ಸಧ್ಯದಲ್ಲೇ ಉದ್ಘಾಟನೆಗೆ ಸಿದ್ಧವಾಗುತ್ತಿದೆ ಎಂದು ಹೇಳಿದರು.

ಜೀವನದ ನಿಯಂತ್ರಣ ವ್ಯವಸ್ಥೆ ಬಂಡಿಗೆ ಕಡಾಣೆ ಇದ್ದಂತೆ ಎಂದು ಬಣ್ಣಿಸಿದ ಅವರು ಸರ್ವರೂ ಜೀವನದಲ್ಲಿ ನಿಯಂತ್ರಣ ಹೊಂದುವುದು ಅಗತ್ಯವಾಗಿದ್ದು, ಇದರಿಂದಾಗಿ ಜೀವನ ದಾರಿ ತಪ್ಪಲು ಅವಕಾಶವಾಗುವುದಿಲ್ಲ ಎಂದರು.

ಬಸವಾದಿ ಶರಣರು ೧೨ನೇ ಶತಮಾನದಲ್ಲಿ ಕನ್ನಡದಲ್ಲಿ ರಚಿಸಿರುವ ವಚನಗಳು ಈಗಿನ ಕಾಲಘಟ್ಟಕ್ಕೂ ಪ್ರಸ್ತುತವಾಗಿವೆ. ಭೂಮಿಮೇಲೆ ಈ ಪ್ರಪಂಚ ಇರುವವರೆಗೆ ಈ ವಚನಗಳು ಜೀವಂತವಾಗಿರುತ್ತವೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಬಸವತತ್ವ ಪೀಠದ ಅಧ್ಯಕ್ಷ ಡಾ. ಶ್ರೀ ಬಸವ ಮರಳಸಿದ್ದ ಸ್ವಾಮೀಜಿ ಆಶೀರ್ವಚನ ನೀಡಿದರು. ಧಾರವಾಡ ಹಿರೇಮಲ್ಲೂರು ಈಶ್ವರನ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಶಶಿಧರ ತೋಡ್ಕರ್ ಬಸವತತ್ವ ಕುರಿತು ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ವಿದ್ಯುತ್ ಇಲಾಖೆ ವೀರಶೈವ ನೌಕರರ ಸಂಘದ ಅಧ್ಯಕ್ಷ ಎಸ್.ಬಿ ಶಶಿಧರ್ ವಹಿಸಿ ಮಾತನಾಡಿದರು.ವೇದಿಕೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿ ಸಂತೋ?, ನಗರಸಭಾ ಸದಸ್ಯ ಅರುಣ್, ಟಿ.ಪಿಚಂದ್ರಕಲಾ,ಬಸವರಾಜಪ್ಪ, ಬಿ.ಎಚ್ ಹರೀಶ್ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

The verses composed by Basavadi Sharan are relevant to the present time

About Author

Leave a Reply

Your email address will not be published. Required fields are marked *