September 8, 2024
ವಿಧಾನ ಪರಿಷತ್ ಅಭ್ಯರ್ಥಿಗಳ ಪರ ಶಾಸಕ ಹೆಚ್.ಡಿ.ತಮ್ಮಯ್ಯರಿಂದ ಮತಯಾಚನೆ

ವಿಧಾನ ಪರಿಷತ್ ಅಭ್ಯರ್ಥಿಗಳ ಪರ ಶಾಸಕ ಹೆಚ್.ಡಿ.ತಮ್ಮಯ್ಯರಿಂದ ಮತಯಾಚನೆ

ಚಿಕ್ಕಮಗಳೂರು:  ಪದವೀಧರರು ಮತ್ತು ಶಿಕ್ಷಕರ ಧ್ವನಿಯಾಗಿ ಕರ್ತವ್ಯ ನಿರ್ವಹಿಸಲು ಆ ಯನೂರು ಮಂಜುನಾಥ್ ಮತ್ತು ಕೆ.ಕೆ.ಮಂಜುನಾಥ್‌ಕುಮಾರ್ ಸನ್ನದ್ದರಾಗಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿ ಗಳ ಪರವಾಗಿ ಮತಯಾಚಿಸಬೇಕು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಮನವಿ ಮಾಡಿದರು.

ನಗರದ ಬೈಪಾಸ್ ಸಮೀಪ ಎಂಇಎಸ್ ಬಿಎಡ್ ಕಾಲೇಜು, ಐಡಿಎಸ್‌ಜಿ, ಪಾಲಿಟೆಕ್ನಿಕ್ ಹಾಗೂ ಕೆ.ಎಂ.ರಸ್ತೆಯ ಸಮೀಪ ಎಂಇಎಸ್ ವಿದ್ಯಾಸಂಸ್ಥೆಯಲ್ಲಿ ಬುಧವಾರ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತ ಯಾಚಿಸಿದರು.

ನಿರುದ್ಯೋಗ ಸಮಸ್ಯೆಯಿಲ್ಲಿರುವ ಯುವಕರಿಗೆ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಯಡಿ ಯುವನಿಧಿ ನೀಡಿ ಪ್ರೋತ್ಸಾಹಿಸುತ್ತಿದೆ. ಅದರಂತೆ ಶಿಕ್ಷಕರು ಹಾಗೂ ಪದವೀಧರರ ಮೂಲಸವಲತ್ತುಗಳನ್ನು ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಲಿದ್ದಾರೆ ಎಂದರು.

ಪದವೀಧರರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್ ನಾಲ್ಕು ಸದನಗಳಲ್ಲಿ ಕೆಲಸ ನಿರ್ವಹಿಸಿರುವ ಅಪಾರ ಅನುಭವವಿದೆ. ಅಲ್ಲದೇ ತಳಮಟ್ಟದಿಂದ ಪದವೀಧರರ ಸಮಸ್ಯೆಗಳ ಬಗ್ಗೆ ಅರಿವಿರುವ ಹಿನ್ನೆಲೆಯಲ್ಲಿ ಸಮರ್ಪಕವಾಗಿ ಪ್ರತಿಯೊಂದು ಸೌಲಭ್ಯಗಳನ್ನು ನ್ಯಾಯಸಮ್ಮತವಾಗಿ ಒದಗಿಸಲಿದ್ದಾರೆ ಎಂದು ಭರವಸೆ ನೀಡಿದರು.

ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಕೆ.ಕೆ.ಮಂಜುನಾಥ್ ಕೂಡಾ ಅನೇಕ ವರ್ಷಗಳಿಂದ ಶಿಕ್ಷಕರಾಗಿ ಸೇವೆಸಲ್ಲಿಸಿದ್ದಾರೆ. ಶಿಕ್ಷಕರ ಸೌಲಭ್ಯ ಒದಗಿಸುವ ಮತ್ತು ವೃತ್ತಿಯಲ್ಲಿನ ಸಮಸ್ಯೆಗಳ ಬಗ್ಗೆ ಅರಿವಿದೆ. ಹೀಗಾಗಿ ಮತದಾರರು ಇವರನ್ನು ಆಯ್ಕೆಗೊಳಿಸಿದರೆ ಬಹುತೇಕ ಶಿಕ್ಷಕರ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಡಿ.ಎಲ್.ವಿಜಯ್‌ಕುಮಾರ್ ಮಾತನಾಡಿ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಯೊಬ್ಬರು ಮತ ಕೇಳುವ ಹಕ್ಕಿದೆ. ಏಳನೇ ವೇತನ, ಹಳೇ ಪಿಂಚಣಿ ವ್ಯವಸ್ಥೆಗೆ ಪ್ರಸ್ತುತ ರಾಜ್ಯ ಸರ್ಕಾರ ಪೂರಕವಾಗಿರುವ ಸ್ಪಂದಿಸುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಕರು, ಪದವೀಧರರು ಮುಕ್ತ ವಾಗಿ ಮತಯಾಚಿಸಬಹುದು ಎಂದು ತಿಳಿಸಿದರು.

ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎಲ್.ಮೂರ್ತಿ ಮಾತನಾಡಿ ವಿಧಾನ ಪರಿಷತ್ ಸ್ಥಾನಗಳಿಗೆ ಅರ್ಹರನ್ನು ಆಯ್ಕೆಗೊಳಿಸುವ ಜವಾಬ್ದಾರಿ ಶಿಕ್ಷಕರು, ಪದವೀಧರರ ಮೇಲಿದೆ. ಆ ನಿಟ್ಟಿನಲ್ಲಿ ಗಂಭೀರವಾಗಿ ಆಲೋಚಿಸುವ ಮೂಲಕ ಸವಲತ್ತುಗಳಿಗೆ ಸ್ಪಂದಿಸುವ ಹಾಗೂ ನಿಗಧಿತ ಸಮಯದಲ್ಲಿ ಸಮಸ್ಯೆ ಆಲಿಸುವ ಅಭ್ಯರ್ಥಿ ಗಳಿಗೆ ಗುರುತಿಸುವ ಮಹತ್ತರ ಜವಾಬ್ದಾರಿಯಿದೆ ಎಂದು ಹೇಳಿದರು.

ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ ಪಕ್ಷದ ಇಬ್ಬರು ಅಭ್ಯರ್ಥಿಗಳು ಗೆಲುವಿಗೆ ಮತದಾರರು ಶ್ರಮಿಸಬೇಕು. ರಾಜ್ಯ ಸರ್ಕಾರ ಜನತೆಗೆ ನೀಡಿರುವ ಗ್ಯಾರಂಟಿ ಯೋಜನೆಗಳ ಂತೆ ಶಿಕ್ಷಕರು, ಪದವೀಧರರಿಗೆ ಸಮರ್ಪಕವಾಗಿ ನ್ಯಾಯ ಒದಗಿಸುವ ಕೆಲಸ ಮಾಡಲಿದೆ ಎಂದು ವಿಶ್ವಾಸ ಮೂಡಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ, ಕೆಪಿಸಿಸಿ ಪ್ರಧಾನ ಕಾರ್ಯ ದರ್ಶಿ ರೇಖಾ ಹುಲಿಯಪ್ಪಗೌಡ, ಜಿಪಂ. ಮಾಜಿ ಅಧ್ಯಕ್ಷ ಕೆ.ಮಹಮ್ಮದ್, ಮುಖಂಡರಾದ ಗಾಯತ್ರಿಶಾಂತೇಗೌಡ, ಬಿ.ಎಚ್ ಹರೀಶ್ ರೂಬೆನ್‌ಮೋಸಸ್, ಎಂಇಎಸ್ ಅಧ್ಯಕ್ಷ ಎನ್.ಕೇಶವಮೂರ್ತಿ, ಉಪಾಧ್ಯಕ್ಷೆ ರಾಧಾಸುಂದ್ರೇಶ್ ಹಾಗೂ ಕಾಲೇಜಿನ ಪ್ಯಾಧ್ಯಾಪಕರು, ಶಿಕ್ಷಕರು ಹಾಜರಿದ್ದರು.

Vote solicitation by MLA HD Thammayya in favor of Legislative Council candidates

About Author

Leave a Reply

Your email address will not be published. Required fields are marked *

You may have missed