September 8, 2024

ಪಕ್ಷೇತರ ಅಭ್ಯರ್ಥಿ ರಘುಪತಿಭಟ್ ರನ್ನು ಗೆಲ್ಲಿಸಲೇಬೇಕು

0
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸುದ್ದಿಗೋಷ್ಠಿ

ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸುದ್ದಿಗೋಷ್ಠಿ

ಚಿಕ್ಕಮಗಳೂರು:  ವಿಧಾನಪರಿಷತ್ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಹಿಂದುತ್ವದ ಬಗ್ಗೆ ಕಲ್ಪನೆಯೇ ಇಲ್ಲದ ವ್ಯಕ್ತಿಗೆ ಬಿಜೆಪಿ ಟಿಕೆಟ್ ನೀಡಿದ್ದರಿಂದ ಸಹಜವಾಗಿಯೇ ಆ ಪಕ್ಷದ ಕಾರ್ಯಕರ್ತರು ಆಕ್ರೋಶಗೊಂಡು ಪಕ್ಷೇತರ ಅಭ್ಯರ್ಥಿ ರಘುಪತಿಭಟ್ ಅವರನ್ನು ಗೆಲ್ಲಿಸಲೇಬೇಕು ಎಂದು ಪಣತೊಟ್ಟು ಅವರ ಪರ ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯನ್ನು ಶುದ್ದದೀಕರಣ ಮಾಡಬೇಕು ಎಂಬ ಉದ್ದೇಶದಿಂದ ರಘುಪತಿ ಭಟ್ ಕೂಡ ಈ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ. ಅನೇಕ ಕಾರ್ಯಕರ್ತರು ನೇರವಾಗಿ ಕೆಲಸ ಮಾಡುತ್ತಿದ್ದರೆ ಹಲವರು ಹಿಂಬದಿಯಲ್ಲಿ ಬೆಂಬಲಕ್ಕೆ ನಿಂತಿದ್ದಾರೆ. ಇತ್ತೀಚೆಗೆ ಪಕ್ಷ ಸೇರ್ಪಡೆಯಾದ ವ್ಯಕ್ತಿಗೆ ಬಿಜೆಪಿ ಟಿಕೆಟ್ ನೀಡಿದೆ ಎಂದು ದೂರಿದರು.

ಹಿಂದುತ್ವವಾದಿ ಹರ್ಷನ ಕೊಲೆಯಾದಾಗ ಅವರು ಇನ್ನೂ ಯಾವ ಪಕ್ಷದಲ್ಲೂ ಗುರುತಿಸಿಕೊಂಡಿರಲಿಲ್ಲ. ಆದರೆ, ಚುನಾವಣೆಗೆ ನಿಲ್ಲಬೇಕು ಎಂದು ಓಡಾಡಿಕೊಂಡಿದ್ದವರು. ಹರ್ಷನ ಕೊಲೆ ನಂತರ ಕ್ರೈಸ್ತರು, ಮುಸಲ್ಮಾನರು ಹಾಗೂ ನಕ್ಸಲಿಸಂ ಬಗ್ಗೆ ಅನುಕಂಪ ಇರುವವರನ್ನು ಒಗ್ಗೂಡಿಸಿಕೊಂಡು ಇದೇ ವ್ಯಕ್ತಿ ಶಾಂತಿಗಾಗಿ ನಡಿಗೆ ಕಾರ್ಯಕ್ರಮ ಮಾಡಿದರು.

ಹಿಂದುತ್ವದ ಕಲ್ಪನೆಯೇ ಇಲ್ಲದ ವ್ಯಕ್ತಿ ಯಡಿಯೂರಪ್ಪ, ವಿಜಯೇಂದ್ರ ಅವರ ಪ್ರಭಾವ ಮತ್ತು ಹಣ, ಜಾತಿ ಬಲದಿಂದ ಟಿಕೆಟ್ ಪಡೆದುಕೊಂಡರು. ಇದು ನಿಷ್ಠಾವಂತ ಕಾರ್ಯಕರ್ತರಿಗೆ ನೋವಾಗಿದೆ ಎಂದು ಬಿಜೆಪಿ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಧನಂಜಯ ಸರ್ಜಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಅಪ್ಪಮಕ್ಕಳಿಂದ ಬಿಜೆಪಿ ಮುಕ್ತಮಾಡಬೇಕು. ಬಿಜೆಪಿ ಪಕ್ಷ ಅಪ್ಪ-ಮಕ್ಕಳ ಕೈಲಿ ಸಿಲುಕಿಕೊಂಡಿದೆ. ಇದರಿಂದ ಮುಕ್ತಿ ಮಾಡಬೇಕು ಎಂಬ ಅಪೇಕ್ಷೆ ಬಿಜೆಪಿ ಕಟ್ಟಿದ ಅನೇಕ ಕಾರ್ಯಕರ್ತರಿಗೆ ಇದೆ. ಕರ್ನಾಟಕದಲ್ಲಿ ಅಪ್ಪಮಕ್ಕಳಿಂದ ಪಕ್ಷವನ್ನು ಮುಕ್ತಿಮಾಡಬೇಕು ಎಂಬ ಉದ್ದೇಶದಿಂದ ಎಲ್ಲ ಕಾರ್ಯಕರ್ತರು ಒಗ್ಗೂಡಿ ಬಿಜೆಪಿ ಶುದ್ದೀಕರಣ ಕೆಲಸದಲ್ಲಿ ತೊಡಗಿದ್ದಾರೆ ಎಂದು ತಿಳಿಸಿದರು.

ಕೇಂದ್ರ ನಾಯಕರು ರಾಜ್ಯ ಇಂಧನ ಖಾತೆ ತ್ಯಜಿಸಬೇಕು ಎಂದಾಗ ತ್ಯಜಿಸಿದ್ದೆ. ವಿಧಾನಸಭೆ ಚುನಾವಣೆಗೆ ನಿಲ್ಲಬಾರದು ಎಂದಾಗಲು ಸುಮ್ಮನಾದೆ, ಅಂದರೆ ಯಡಿಯೂರಪ್ಪ ಹೇಳಿದ್ದೆಲ್ಲ ಸರಿ ಎಂಬ ಭ್ರಮೆಯಲ್ಲಿ ಕೇಂದ್ರ ನಾಯಕರಿದ್ದಾರೆ. ಹೀಗಾಗಿ ಅವರಿಗೂ ಮನವರಿಕೆ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.

ತನ್ನ ಮಗನೇ ಎಂಪಿ, ರಾಜ್ಯಾಧ್ಯಕ್ಷನಾಗಬೇಕು ಎಂಬುದು ಸ್ವಾರ್ಥ ರಾಜಕಾರಣವಲ್ಲದೆ ಮತ್ತೇನು ಎಂದು ಪ್ರಶ್ನಿಸಿ ಒಂದು ಕಾಲದಲ್ಲಿ ರೈತ ಹೋರಾಟಗಾರನಾಗಿದ್ದ ಯಡಿಯೂರಪ್ಪ ಈಗ ಜಾತಿವಾದಿಯಾಗಿದ್ದಾರೆ ಎಂದು ದೂರಿದರು. ಪತ್ರಿಕಾಗೋಷ್ಠಿಯಲ್ಲಿ ನಗರಸಭಾಧ್ಯಕ್ಷ ವರಸಿದ್ದಿ ವೇಣುಗೋಪಾಲ್, ರಾಜಶೇಖರ್ ನಾಯ್ಡು, ಅಕ್ಕಿಕಾಳು ವೆಂಕಟೇಶ್, ನಯನ, ಸೋಮೇಶ್, ತುಡುಕೂರು ಮಂಜು ಉಪಸ್ಥಿತರಿದ್ದರು.

Non-party candidate Raghupatibhat should win

About Author

Leave a Reply

Your email address will not be published. Required fields are marked *

You may have missed