September 7, 2024
ಲಯನ್ಸ್ ಸಂಸ್ಥೆಯ ಅಧ್ಯಕ್ಷ ಜಿ.ರಮೇಶ್ ಸುದ್ದಿಗೋಷ್ಠಿ

ಲಯನ್ಸ್ ಸಂಸ್ಥೆಯ ಅಧ್ಯಕ್ಷ ಜಿ.ರಮೇಶ್ ಸುದ್ದಿಗೋಷ್ಠಿ

ಚಿಕ್ಕಮಗಳೂರು: ನಗರದ ಕಲ್ಕಟ್ಟೆ ಪುಸ್ತಕದ ಮನೆ, ಲಯನ್ಸ್ ಸಂಸ್ಥೆ ಹಾಗೂ ಬೆಂಗಳೂರಿನ ಅವ್ಯಕ್ತ ಪ್ರಕಾಶನ ಇವರುಗಳ ಸಂಯುಕ್ತಾಶ್ರಯದಲ್ಲಿ ಜೂ.೨ ರಂದು ಭಾನುವಾರ ಸಂಜೆ ೫:೩೦ಕ್ಕೆ ರೇಖಾ ನಾಗರಾಜ್‌ರಾವ್ ರವರ ‘ಮನದಂಗಳ’ ಕೃತಿ ಬಿಡುಗಡೆ ಸಮಾರಂಭ ನಡೆಯಲಿದೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿ?ಯ ತಿಳಿಸಿದ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಜಿ.ರಮೇಶ್, ಕಾರ್ಯಕ್ರಮ ಬಸವನಹಳ್ಳಿ ಮುಖ್ಯರಸ್ತೆಯಲ್ಲಿರುವ ಶೃಂಗೇರಿ ಶಂಕರ ಮಠದ ಪ್ರವಚನ ಮಂದಿರದಲ್ಲಿ ಆಯೋಜಿಸಲಾಗಿದೆ ಎಂದರು.

ಪುಸ್ತಕದ ಲೋಕಾರ್ಪಣೆಯನ್ನು ಅಮೆರಿಕದ ರಿಚ್ಮಂಡ್ ಕನ್ನಡ ಸಂಘದ ಕಾರ್ಯದರ್ಶಿ ಸೌಮ್ಯಕೃ? ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಶೃಂಗೇರಿಯ ಹಿರಿಯ ಸಮಾಜ ಸೇವಕಿ ಶೈಲಜಾ ರತ್ನಾಕರ ಹೆಗ್ಡೆ ವಹಿಸಲಿದ್ದು, ಕೃತಿಯ ಕುರಿತು ನಾಡಿನ ಖ್ಯಾತ ಕವಯಿತ್ರಿ, ವಾಗ್ಮಿ ಮಂಡ್ಯದ ಭವಾನಿಲೋಕೇಶ್ ಮಾತನಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಮಾರಂಭದಲ್ಲಿ ೨೦೨೪ನೇ ಸಾಲಿನ ‘ಕಲ್ಕಟ್ಟೆ ಕನ್ನಡಿಗ’ ಪುರಸ್ಕಾರವನ್ನು ಖ್ಯಾತ ವೈದ್ಯರಾದ ಡಾ. ಜೆ.ಪಿ ಕೃಷ್ಣೇಗೌಡರಿಗೆ ನೀಡಲಾಗುತ್ತಿದ್ದು, ಬೆಂಗಳೂರಿನ ಸಾಧನಕೇರಿ ಸಾಹಿತ್ಯ ವೇದಿಕೆಯ ಅಧ್ಯಕ್ಷೆ ವತ್ಸಲ ಸುರೇಶ್, ನಗರದ ಡಿಟಿಪಿ ಆಪರೇಟರ್ ಜ್ಯೋತಿ ಹಾಗೂ ಪತ್ರಿಕಾ ವಿತರಕ ರಾಕೇಶ್‌ರವರನ್ನು ಗೌರವಿಸಲಾಗುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಜನಮಿತ್ರ ಪ್ರಧಾನ ಸಂಪಾದಕ ಮದನಗೌಡ ಭಾಗವಹಿಸುತ್ತಿದ್ದು, ಗೀತ ಗಾಯನವನ್ನು ಸೀತೂರಿನ ಖ್ಯಾತ ಗಾಯಕಿ ರಂಗಿಣಿ ಯು.ರಾವ್ ನಡೆಸಿಕೊಡಲಿದ್ದಾರೆ. ಲೇಖಕಿ ರೇಖಾ ನಾಗರಾಜ್ ರಾವ್, ಶಂಕರ ಮಠದ ಗೌರವ ಪ್ರತಿನಿಧಿ ಚೆನ್ನಕೇಶವ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ರಂಗ ನಿರ್ದೇಶಕಿ ಪ್ರತಿಭಾ ಹಾಗೂ ಕಲಾವಿದೆ ವೈ?ವಿ ಎನ್.ರಾವ್ ಕಾರ್ಯಕ್ರಮ ಪ್ರಸ್ತುತಪಡಿಸಲಿದ್ದಾರೆ. ನಗರದ ಸುಗಮ ಸಂಗೀತ ಗಂಗಾ, ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್, ಸೂರಂಕಣ, ಶ್ರೀಕಂಠೇಶ್ವರ ಕಲಾಮಂದಿರ, ಭರತ ಕಲಾ ಕ್ಷೇತ್ರದ ಸಹಕಾರದಲ್ಲಿ ಕಾರ್ಯಕ್ರಮ ನೆರವೇರುತ್ತಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ನಾರಾಯಣಸ್ವಾಮಿ, ಪು?ರಾಜ್, ಕೇಶವಮೂರ್ತಿ, ಗೋಪಿಕೃ?, ಸುರೇಶ್ ಇದ್ದರು.

‘Manadamgala’ work release ceremony on June 2

About Author

Leave a Reply

Your email address will not be published. Required fields are marked *

You may have missed