September 8, 2024

ನೈರುತ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿ-ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳ ಪರ ಮತಯಾಚನೆ

0
ಜೆವಿಎಸ್ ಶಾಲೆಯಲ್ಲಿ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳ ಪರ ಮತಯಾಚನೆ

ಜೆವಿಎಸ್ ಶಾಲೆಯಲ್ಲಿ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳ ಪರ ಮತಯಾಚನೆ

ಚಿಕ್ಕಮಗಳೂರು:  ಶಿವಮೊಗ್ಗ ನಗರದಲ್ಲಿ ಪ್ರತಿಷ್ಠಿತ ಆಸ್ಪತ್ರೆಯನ್ನು ತೆರೆದು ಕಡಿಮೆ ದರದಲ್ಲಿ ಬಡವರಿಗೆ ಚಿಕಿತ್ಸೆ ಸೌಲಭ್ಯ ಕಲ್ಪಿಸಿ, ಸಮಾಜ ಸೇವೆ ಮಾಡುತ್ತಿರುವ ಕ್ರಿಯಾಶೀಲ ವ್ಯಕ್ತಿ ಡಾ. ಧನಂಜಯಸರ್ಜಿ ಅವರನ್ನು ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಮತ ನೀಡುವ ಮೂಲಕ ಆಯ್ಕೆ ಮಾಡಬೇಕೆಂದು ಜಿಲ್ಲಾ ಬಿಜೆಪಿ ಮುಖಂಡ ಟಿ.ರಾಜಶೇಖರ್ ಪದವೀಧರ ಸಮೂಹದಲ್ಲಿ ಮನವಿ ಮಾಡಿದರು.

ಅವರು ಇಂದು ನಗರದ ವಿಜಯಪುರದಲ್ಲಿರುವ ಜೆವಿಎಸ್ ಶಾಲೆಯಲ್ಲಿ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾದ ಎಸ್.ಎಲ್ ಭೋಜೇಗೌಡ ಹಾಗೂ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಡಾ. ಧನಂಜಯ ಸರ್ಜಿ ಅವರಿಗೆ ಮತ ನೀಡಬೇಕೆಂದು ವಿನಂತಿಸಿದರು.

ಡಾ. ಧನಂಜಯ ಸರ್ಜಿ ಅವರು ಪ್ರಸ್ತುತ ೨೦೦ ವಿದ್ಯಾರ್ಥಿಗಳನ್ನು ದತ್ತು ಪಡೆದು ಶಿಕ್ಷಣ ಕೊಡಿಸುತ್ತಿದ್ದಾರೆ. ಶಿಕ್ಷಕ ಕ್ಷೇತ್ರದ ಅಭ್ಯರ್ಥಿ ಎಸ್.ಎಲ್ ಭೋಜೇಗೌಡರು ಶಿಕ್ಷಕರು ಮತ್ತು ಜೆವಿಎಸ್ ಶಾಲೆಯನ್ನು ಬೆಳೆಸಲು ಬೆಂಬಲವಾಗಿ ನಿಲ್ಲುವುದರ ಜೊತೆಗೆ ಸಮಸ್ಯೆಗೆ ಸ್ಪಂದಿಸುವ ವಿಶ್ವಾಸವಿದೆ. ಈ ಇಬ್ಬರನ್ನು ಜೂ.೩ ರಂದು ನಡೆಯಲಿರುವ ಪರಿಷತ್ ಚುನಾವಣೆಯಲ್ಲಿ ಗೆಲ್ಲಿಸಬೇಕೆಂದು ಹೇಳಿದರು.

ಜೆವಿಎಸ್ ಶಾಲೆ ಒಂದರಲ್ಲೇ ೪೧ ಶಿಕ್ಷಕರು ಹೆಸರು ನೊಂದಾಯಿಸಿಕೊಂಡಿದ್ದಾರೆ. ೫೦ ಪದವೀಧರ ಕ್ಷೇತ್ರದ ಮತದಾರರಿದ್ದಾರೆ. ಎಲ್ಲರೂ ಮೊದಲನೇ ಪ್ರಾಶಸ್ತ್ಯದ ಮತವನ್ನು ಎಸ್.ಎಲ್ ಭೋಜೇಗೌಡರಿಗೆ ಮತ್ತು ಡಾ. ಧನಂಜಯ ಸರ್ಜಿ ಅವರಿಗೆ ನೀಡಬೇಕೆಂದು ಕೋರಿದರು.

ಬಿಜೆಪಿ ಸಂಘಟನಾ ಕಾರ್ಯದರ್ಶಿ ಸೀತಾರಾಮ್ ಭರಣ್ಯ ಮಾತನಾಡಿ, ಶಿಕ್ಷಕರ ಹುದ್ದೆ ಇತರರನ್ನು ಮಾದರಿಯನ್ನಾಗಿ ಮಾಡುವಂತಹ ಮಹತ್ವದ ಕಾಯಕ ಮಾಡುತ್ತಿದ್ದೇವೆ ಕಾರಣ ಕಳೆದ ಇದೇ ಚುನಾವಣೆಯಲ್ಲಿ ೧೫೦ ಮತಗಳು ಸಿಂಧುವಾಗಿಲ್ಲ. ಈ ಬಾರಿ ಚುನಾವಣೆಯಲ್ಲಿ ಶಿಕ್ಷಕರು ಜಾಗೃತಿಯಿಂದ ಮತದಾನ ಮಾಡುವಂತೆ ತಿಳಿಸಿದರು.

ಶಿಕ್ಷಕರ ಕ್ಷೇತ್ರಕ್ಕೆ ಒಂದು ಮತ, ಪದವೀಧರ ಕ್ಷೇತ್ರಕ್ಕೆ ಒಂದು ಮತ ಇದ್ದು, ಮತದಾನ ಮಾಡಿದವರ ಬೆರಳಿಗೆ ಪ್ರತ್ಯೇಕ ಶಾಹಿ ಹಾಕುತ್ತಾರೆ. ಚಿಕ್ಕಮಗಳೂರು ತಾಲೂಕಿನ ಬೂತ್‌ಗಳನ್ನು ಜೂನಿಯರ್ ಕಾಲೇಜಿನಲ್ಲಿ ಇರಿಸಿ ವ್ಯವಸ್ಥೆ ಮಾಡಲಾಗಿದೆ ಎಂದರು.

ಜೂ.೩ ರಂದು ಸೋಮವಾರ ಬೆಳಗ್ಗೆ ೮ ಗಂಟೆಯಿಂದ ಸಂಜೆ ೪ ಗಂಟೆವರೆಗೆ ಮತದಾನ ಮಾಡಲು ಅವಕಾಶವಿದ್ದು, ಪದವೀಧರ ಕ್ಷೇತ್ರಕ್ಕೆ ಬಿಳಿ ಬಣ್ಣದ ಮತಪತ್ರ, ಶಿಕ್ಷಕರ ಕ್ಷೇತ್ರಕ್ಕೆ ತೆಳು ಕೆಂಪು ಬಣ್ಣದ ಮತಪತ್ರ ಇರುತ್ತದೆ. ಮೊದಲನೇ ಪ್ರಾಶಸ್ತ್ಯದ ಮತವನ್ನು ಈ ಇಬ್ಬರು ಅಭ್ಯರ್ಥಿಗಳಿಗೆ ಹಾಕುವಂತೆ ತಿಳಿಸಿದರು.

ಅತಿಥಿ ಉಪನ್ಯಾಸಕರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದ್ದು ಅವರಿಗೆ ವೇತನ ಮತ್ತಿತರ ಸೌಲಭ್ಯ ಕಲ್ಪಿಸುವ ಕುರಿತು ಸರ್ಕಾರದ ಗಮನ ಸೆಳೆಯಲು ಇವರಿಗೆ ಮತ ನೀಡುವ ಮೂಲಕ ತಮ್ಮ ಸೇವೆಗೆ ಅವಕಾಶ ಮಾಡಿಕೊಟ್ಟು ಧ್ವನಿನೀಡಿ ಎಂದರು.

ರಾಜ್ಯ ಸಫಾಯಿ ಕರ್ಮಚಾರಿ ನಿಗಮದ ಮಾಜಿ ಅಧ್ಯಕ್ಷ ಕೆ.ಪಿ ವೆಂಕಟೇಶ್ ಮಾತನಾಡಿ, ಈ ಚುನಾವಣೆ ಬುದ್ದಿವಂತರು, ತಿಳುವಳಿಕೆ ಇರುವವರು ಮತದಾನ ಮಾಡುವ ಚುನಾವಣೆಯಾಗಿದ್ದು, ಎಸ್.ಎಲ್ ಭೋಜೇಗೌಡರು ಇದೇ ಕ್ಷೇತ್ರದಿಂದ ಹಿಂದೆ ಆಯ್ಕೆಯಾಗಿದ್ದು ಈಗ ಮತ್ತೊಮ್ಮೆ ಪುನರಾಯ್ಕೆ ಬಯಸಿ ಸ್ಪರ್ಧಿಸಿರುವ ಅವರ ಕ್ರ.ಸಂ ೧ ಕ್ಕೆ ಮೊದಲ ಪ್ರಾಶಸ್ತ್ಯದ ಮತ ನೀಡಬೇಕೆಂದು ವಿನಂತಿಸಿದರು.

ಪದವೀಧರ ಕ್ಷೇತ್ರದ ಮತಪತ್ರದಲ್ಲಿ ಡಾ. ಧನಂಜಯ ಸರ್ಜಿಯವರ ಕ್ರ.ಸಂ ೨ ಆಗಿದ್ದು, ದಯಮಾಡಿ ಎಲ್ಲರೂ ಈ ಇಬ್ಬರು ಅಭ್ಯರ್ಥಿಗಳಿಗೆ ಮತನೀಡಿ ಮೇಲ್ಮನೆಗೆ ಕಳುಹಿಸುವಂತೆ ಕೋರಿದರು.ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಶ್ರೀನಿವಾಸ, ನವೀನ, ರಾಕೇಶ್ ಮತ್ತಿತರರಿದ್ದರು.

Polling in favor of BJP-JDS supported candidates of Southwest Teachers Constituency

About Author

Leave a Reply

Your email address will not be published. Required fields are marked *

You may have missed