September 7, 2024

ನ್ಯಾಯಾಲಯದ ಹಾಲಿ ಕಟ್ಟಡ ಆಧುನೀಕರಣಗೊಳಿಸಲು ಮನವಿ

0
ನ್ಯಾಯಾಲಯದ ಹಾಲಿ ಕಟ್ಟಡ ಆಧುನೀಕರಣಗೊಳಿಸಲು ಮನವಿ

ನ್ಯಾಯಾಲಯದ ಹಾಲಿ ಕಟ್ಟಡ ಆಧುನೀಕರಣಗೊಳಿಸಲು ಮನವಿ

ಚಿಕ್ಕಮಗಳೂರು: – ಜಿಲ್ಲಾ ನ್ಯಾಯಾಲಯದ ಹೊಸಕಟ್ಟಡದ ಸಂಕೀರ್ಣ ಕಾಮಗಾರಿಯ ನ್ನು ಸ್ಥಗಿತಗೊಳಿಸಿ, ಹಾಲಿ ಕಟ್ಟಡವನ್ನೇ ಆಧುನೀಕರಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡ ಬೇಕು ಎಂದು ಬಿಎಸ್ಪಿ ಹಾಗೂ ಕನ್ನಡಸೇನೆ ಮುಖಂಡರುಗಳು ಜಿಲ್ಲಾಧಿಕಾರಿ ಸಿ.ಎನ್. ಮೀನಾ ನಾಗರಾಜ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಬಳಿಕ ಮಾತನಾಡಿದ ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ನಗರದಿಂದ ಸುಮಾರು ೭ ಕಿ.ಮೀ. ಅಂತರದಲ್ಲಿರುವ ಹೊಸ ನ್ಯಾಯಾಲಯದ ಕಟ್ಟಡ ಪ್ರಾರಂಭಗೊಂಡರೆ ಪ್ರತಿನಿತ್ಯ ಆಗಮಿಸುವ ಸಾರ್ವಜನಿ ಕರಿಗೆ ತೀವ್ರ ಸಮಸ್ಯೆಯಾಗುವ ಜೊತೆಗೆ ದುಬಾರಿ ಬೆಲೆಕೊಟ್ಟು ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದು ತಿಳಿಸಿದರು.

ಪ್ರಸ್ತುತ ನ್ಯಾಯಾಲಯದ ಕಟ್ಟಡವು ನಗರದ ಹೃದಯ ಭಾಗದಲ್ಲಿದೆ. ಜನಸಾಮಾನ್ಯರಿಗೆ ಮತ್ತು ಕಕ್ಷಿದಾರರಿಗೆ ಓಡಾಟಕ್ಕೆ ಬಹಳಷ್ಟು ಸಮೀಪವಿರುವ ಜೊತೆಗೆ ಗ್ರಾಮೀಣ ಪ್ರದೇಶಗಳಿಂದ ಆಗಮಿಸುವ ಜನಸಾಮಾನ್ಯರಿಗೆ ಬಸ್ ಸೌಲಭ್ಯವು ಸಮರ್ಪಕವಾಗಿದೆ. ನ್ಯಾಯಾಲಯದಲ್ಲಿ ಸ್ಥಳವಕಾಶದ ಕೊರತೆಯಿಲ್ಲ ದಿರುವ ಹಿನ್ನೆಲೆಯಲ್ಲಿ ಹಳೇ ಕಟ್ಟಡವನ್ನು ನವೀಕರಣಗೊಳಿಸಬೇಕು ಎಂದರು.

ನಗರದಿಂದ ೭ ಕಿ.ಮೀ. ಅಂತರದಲ್ಲಿ ನೂತನ ನ್ಯಾಯಾಲಯ ಸಂಕೀರ್ಣವನ್ನು ನಿರ್ಮಿ ಸುತ್ತಿರುವ ಕ್ರಮ ಸರಿಯಲ್ಲ. ಹಾಲಿ ಕಟ್ಟಡದಲ್ಲಿ ಸ್ಥಳಾವಕಾಶ ಕೊರತೆಯಿದ್ದರೆ ಪಕ್ಕದಲ್ಲಿರುವ ಲೋಕೋಪಯೋಗಿ ಇಲಾಖೆಯ ಕ್ರಾಟ್ರಸ್‌ಗಳನ್ನು ನೆಲಸಮಗೊಳಿಸಿ ಹೊಸದಾಗಿ ಕಟ್ಟಡಗಳನ್ನು ನಿರ್ಮಿಸಬಹುದು ಎಂದು ಸಲಹೆ ನೀಡಿದರು.

ಪ್ರಸ್ತುತ ಹಾಲಿ ಕಟ್ಟಡಕ್ಕೆ ತೆರಳಲು ನಾಲ್ಕೈದು ಮಾರ್ಗಗಳ ಸೌಲಭ್ಯವಿದೆ. ಆದರೆ ಎಐಟಿ ಕಾಲೇಜು ಹಿಂಭಾಗದಲ್ಲಿ ನಿರ್ಮಾಣವಾಗುತ್ತಿರುವ ನೂತನ ಕಟ್ಟಡಕ್ಕೆ ಕೇವಲ ಒಂದೇ ರಸ್ತೆಯಿರುವ ಕಾರಣ ಬೇರೆ ಕಡೆ ಯಿಂದ ತೆರಳಲು ಮಾರ್ಗವಿಲ್ಲ. ಹೊಸ ಕಟ್ಡಡದಲ್ಲಿ ಕಲಾಪ ನಡೆದರೆ ಬಡವರು, ರೈತರು ಹಾಗೂ ಜನಸಾ ಮಾನ್ಯರ ಪಾಲಿಗೆ ಸಂಕಷ್ಟ ಎದುರಾಗಲಿದೆ ಎಂದು ತಿಳಿಸಿದರು.

ಹೀಗಾಗಿ ಹೊಸದಾಗಿ ನಿರ್ಮಾಣವಾಗುತ್ತಿರುವ ಕಟ್ಟಡವನ್ನು ವಸತಿ ಶಾಲೆ ಅಥವಾ ಕಾಲೇಜುಗಳಿಗೆ ಬಿಟ್ಟುಕೊಡಬೇಕು. ಹಾಲಿ ನ್ಯಾಯಾಲಯದ ಸಂಕೀರ್ಣವನ್ನು ಆಧುನೀಕರಣಗೊಳಿಸಿ ಕಲಾಪಗಳನ್ನು ನಡೆ ಯುವಂತೆ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಕೂಡಲೇ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ, ಲೋಕಸಭಾ ಉಡುಪಿ-ಚಿಕ್ಕಮ ಗಳೂರು ಸಂಯೋಜಕ ಗಂಗಾಧರ್, ಅಸೆಂಬ್ಲಿ ಉಪಾಧ್ಯಕ್ಷ ಹೊನ್ನಪ್ಪ, ಪ್ರಧಾನ ಕಾರ್ಯದರ್ಶಿ ಆರ್. ವಸಂತ್, ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ಆಟೋ ಘಟಕದ ಅಧ್ಯಕ್ಷ ಜಯಪ್ರಕಾಶ್, ಮುಖಂ ಡರಾದ ಕಳವಾಸೆ ರವಿ, ಹರೀಶ್ ಮತ್ತಿತರರಿದ್ದರು.

Request for modernization of existing court building

 

About Author

Leave a Reply

Your email address will not be published. Required fields are marked *

You may have missed