September 19, 2024

ಬಿಇ ಪದವಿಯಲ್ಲಿ ರೋಬೋಟಿಕ್ಸ್ ಅಂಡ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇಂಜಿನಿಯರಿಂಗ್ ಆರಂಭ

0
ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಸಿ.ಟಿ ಜಯದೇವ ಸುದ್ದಿಗೋಷ್ಠಿ

ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಸಿ.ಟಿ ಜಯದೇವ ಸುದ್ದಿಗೋಷ್ಠಿ

ಚಿಕ್ಕಮಗಳೂರು: ಇಲ್ಲಿನ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಬಿಇ ಪದವಿಯಲ್ಲಿ ರೋಬೋಟಿಕ್ಸ್ ಅಂಡ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇಂಜಿನಿಯರಿಂಗ್ ಎಂಬ ಬಹು ಬೇಡಿಕೆಯ ಕೋರ್ಸ್‌ಅನ್ನು ಪ್ರಾರಂಭಿಸಲಾಗಿದೆ ಎಂದು ಪ್ರಾಂಶುಪಾಲ ಡಾ. ಸಿ.ಟಿ ಜಯದೇವ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ವಿಷಯ ತಿಳಿಸಿ, ಈ ವಿಭಾಗವು ಕರ್ನಾಟಕದ ಕೆಲವೇ ಪ್ರತಿಷ್ಠಿತ ಕಾಲೇಜುಗಳಲ್ಲಿ ಮಾತ್ರ ಲಭ್ಯವಿದ್ದು, ಇದೀಗ ನಮ್ಮ ಕಾಲೇಜಿನಲ್ಲಿ ವಿಶೇ? ಸೌಲಭ್ಯಗಳೊಂದಿಗೆ ಆರಂಭಿಸಲಾಗುತ್ತಿದ್ದು, ಇದಕ್ಕೆ ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯ ಪ್ರಸ್ತುತ ಶೈಕ್ಷಣಿಕ ವರ್ಷ ೨೦೨೪-೨೫ನೇ ಸಾಲಿಗೆ ಅನುಮತಿ ನೀಡಿದೆ ಎಂದರು.

ಇಂದಿನ ಆಧುನಿಕ ಯುಗದಲ್ಲಿ ಪ್ರತಿಕ್ಷಣವೂ ಸಹ ತಂತ್ರಜ್ಞಾನವು ಬದಲಾವಣೆಯ ದಾರಿಯಲ್ಲಿ ಸಾಗುತ್ತಿರುವಾಗ ಹೆಚ್ಚಿನ ತಂತ್ರಜ್ಞಾನದ ಅವಶ್ಯಕತೆ ಇದ್ದು ಮತ್ತು ಇದರ ಅಳವಡಿಕೆಯು ಮಾನವನ ಪ್ರಸ್ತುತ ದೈನಂದಿನ ಬದುಕಿನ ಸುಲಭ ಕಾರ್ಯಗಳಿಗೆ ಬೇಕಾಗಿದೆ ಎಂದು ಹೇಳಿದರು.

ಈ ರೋಬೋಟಿಕ್ಸ್ ಮತ್ತು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಇಂಜಿನಿಯರಿಂಗ್ ಪದವಿ ವಿಭಾಗವು ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನ ತಂತ್ರಜ್ಞಾನಗಳ ಸಮ್ಮಿಲನವಾಗಿದ್ದು ಹೆಚ್ಚಿನ ಪರಿಣತಿಯನ್ನು ಹೊಂದಿದೆ ಹಾಗೂ ರೋಬೋಟಿಕ್ಸ್ ತಂತ್ರಜ್ಞಾನ ಪ್ರಸಕ್ತ ಕಾಲಘಟ್ಟದಲ್ಲಿ ಬಹು ಬೇಡಿಕೆಯಲ್ಲಿದ್ದು ಇದರೊಂದಿಗೆ ಆರ್ಟಿಫಿಷಿಯಲ್ ಇಂಟಲಿಜೆನ್ಸ್‌ಅನ್ನು ಬಳಸಿ ಈ ಪದವಿಯನ್ನು ಆರಂಭಿಸಲಾಗಿದೆ. ಈ ಆವಿಷ್ಕರಿಸಿದ ಪದವಿ ಮುಂದಿನ ಪೀಳಿಗೆಗೆ ಉದ್ಯೋಗದ ದೃಷ್ಟಿಯಿಂದ ಉಜ್ವಲ ಭವಿ?ವಾಗುತ್ತದೆ ಎಂದು ತಿಳಿಸಿದರು.

ಪ್ರಸ್ತುತ ರೋಬೋಟಿಕ್ಸ್ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಳಕೆ ತುಂಬಾ ವಿಸ್ತಾರವಾಗಿದ್ದು ಅತಿಮುಖ್ಯ ಕ್ಷೇತ್ರವಾದ ಮಾಹಿತಿ ತಂತ್ರಜ್ಞಾನ, ಅಂತರಿಕ್ಷ, ಆಟೋಮೊಬೈಲ್, ಸಾರಿಗೆ, ಆರೋಗ್ಯ ಹಾಗೂ ಎಲ್ಲಾ ಗ್ರಾಹಕ ಸೇವಾ ಕ್ಷೇತ್ರಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶವಿರುತ್ತದೆ. ಪ್ರಸಕ್ತ ಶೈಕ್ಷಣಿಕ ವ?ದಲ್ಲಿ ಇಂಜಿನಿಯರಿಂಗ್ ಸೇರಬಯಸುವ ಆಸಕ್ತ ವಿದ್ಯಾರ್ಥಿಗಳು ರೋಬೋಟಿಕ್ಸ್ ಮತ್ತು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ವಿಭಾಗದಲ್ಲಿ ಪರಿಣತಿ ಹೊಂದಿದರೆ ಅವರಿಗೆ ಉಜ್ವಲ ಭವಿ?ವಿದ್ದು ವಿಫುಲ ಉದ್ಯೋಗವಕಾಶಗಳ ಬಾಗಿಲು ತೆರೆಯುತ್ತದೆ ಎಂದು ಹೇಳಿದರು.

ರೋಬೋಟಿಕ್ಸ್ ಮತ್ತು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮುಂದಿನ ತಂತ್ರಜ್ಞಾನದ ಕ್ರಾಂತಿಯ ದಿನಗಳಲ್ಲಿ ಅದರ ಬಳಕೆ, ಆವಿ?ರ ಹಾಗೂ ಉತ್ಪಾದನೆಯ ಜ್ಞಾನವನ್ನು ಹೊಂದಿದ ವಿದ್ಯಾರ್ಥಿಗಳಿಗೆ ಬಹು ಬೇಡಿಕೆಯನ್ನು ಸೃಷ್ಟಿಸಲಿದೆ. ರೋಬೋಟಿಕ್ಸ್ ಮತ್ತು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ವಿಭಾಗದಲ್ಲಿ ಪದವಿ ಹೊಂದಿದ ವಿದ್ಯಾರ್ಥಿಗಳು ಮಾಹಿತಿ ತಂತ್ರಜ್ಞಾನ ಹಾಗೂ ಇತರೆ ಕ್ಷೇತ್ರಗಳಲ್ಲೂ ಭವಿ?ದಲ್ಲಿ ಉದ್ಯೋಗಾವಕಾಶಗಳು ಹೆಚ್ಚಲಿದೆ ಎಂದರು.

ಇದು ನಾಲ್ಕು ವ?ದ ಪದವಿಯಾಗಿದ್ದು ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶವಾಗಿದೆ. ಸರ್ಕಾರ ನಿಗದಿಪಡಿಸಿರುವ ಶುಲ್ಕವನ್ನೇ ಪಡೆಯಲಾಗುವುದು. ಒಟ್ಟು ೩೦ ಸ್ಥಾನಗಳಿಗೆ ಮಾತ್ರ ಅವಕಾಶವಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಮಂಡಳಿಯ ಕೆ.ಮೋಹನ್, ಆರ್.ಓ ಸಾಗರ್, ಡಾ. ರಚನ್, ಶೇಖರ್, ಬಸವರಾಜಪ್ಪ, ಡಾ. ಚಂದನ್, ಸತ್ಯನಾರಾಯಣ ಇದ್ದರು.

Beginning Robotics and Artificial Intelligence Engineering in BE degree

About Author

Leave a Reply

Your email address will not be published. Required fields are marked *

You may have missed