September 19, 2024

ವಿದ್ಯೆ ದುಡಿಮೆ – ತಾಳ್ಮೆ ಬದುಕಿನ ಯಶಸ್ಸಿಗೆ ಮೆಟ್ಟಿಲು

0
ಜೂನ್ ತಿಂಗಳ 'ರಂಭಾಪುರಿ ಬೆಳಗು' ಮಾಸ ಪತ್ರಿಕೆಯನ್ನು ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಬಿಡುಗಡೆಗೊಳಿಸಿದರು

ಜೂನ್ ತಿಂಗಳ 'ರಂಭಾಪುರಿ ಬೆಳಗು' ಮಾಸ ಪತ್ರಿಕೆಯನ್ನು ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಬಿಡುಗಡೆಗೊಳಿಸಿದರು

ಬಾಳೆಹೊನ್ನೂರು:  ಮೌಲ್ಯಾಧಾರಿತ ಬದುಕಿಗೆ ಶಿಕ್ಷಣ ಅಗತ್ಯ. ಸಂಸ್ಕಾರಯುಕ್ತ ಶಿಕ್ಷಣದಿಂದ ಜೀವನ ಉಜ್ವಲ. ವಿದ್ಯೆ ದುಡಿಮೆ ಮತ್ತು ತಾಳ್ಮೆ ಬದುಕಿನ ಯಶಸ್ಸಿಗೆ ಮೆಟ್ಟಿಲು ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಶನಿವಾರ ಶ್ರೀ ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ೩೨ನೇ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಕಣ್ಣು ಚೆನ್ನಾಗಿದ್ದರೆ ಜಗ ಚೆನ್ನಾಗಿ ಕಾಣುತ್ತದೆ. ನಾಲಿಗೆ ಚೆನ್ನಾಗಿದ್ದರೆ ಜನರಿಗೆ ಒಳ್ಳೆಯವರಾಗಿ ಕಾಣುತ್ತೇವೆ. ಕ? ಕಲಿಸುತ್ತದೆ. ಸುಖ ಮರೆಸುತ್ತದೆ. ಆದರೆ ಒಳ್ಳೆಯತನ ಮತ್ತು ಆತ್ಮವಿಶ್ವಾಸ ಮಾತ್ರ ಬಾನೆತ್ತರಕ್ಕೆ ಬೆಳೆಯಲು ಸಹಕರಿಸುತ್ತದೆ. ಕ? ಯಾವಾಗಲೂ ಸಾಗರದಷ್ಟು ಇದ್ದರೆ ಸುಖ ಸಾಸುವೆಯ? ಸಿಗುವುದು. ಮನು? ಮನಸ್ಸಿನಿಂದ ದೊಡ್ಡವನಾಗಬೇಕೆ ಹೊರತು ಬಟ್ಟೆ ಮತ್ತು ಸಿರಿ ಸಂಪತ್ತಿನಿಂದಲ್ಲ. ಎತ್ತರಕ್ಕೆ ಏರಬೇಕಾದರೆ ಮೆಟ್ಟಲು ತುಳಿಯಬೇಕೆ ವಿನಾ ಇನ್ನೊಬ್ಬರನ್ನು ತುಳಿಯಬಾರದು.

ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಪ್ರಾರಂಭಗೊಂಡು ೩೨ ವ?ಗಳು ಪೂರ್ಣಗೊಂಡಿವೆ. ಈ ಅವಧಿಯಲ್ಲಿ ಬಹಳ? ವೀರಮಾಹೇಶ್ವರ ಅರ್ಚಕರು, ಪುರೋಹಿತರು ಹಾಗೂ ಮಠಾಧೀಶರನ್ನು ನಾಡಿಗೆ ಕೊಟ್ಟ ಹೆಮ್ಮೆ ನಮಗಿದೆ. ಎಲ್ಲ ಸಾಧಕರು ಶಾಂತಿ ತಾಳ್ಮೆಯಿಂದಿದ್ದು ಆಧ್ಯಾತ್ಮ ಜ್ಞಾನ ಸಂಪತ್ತನ್ನು ಸ್ವೀಕರಿಸುವ ಸೌಭಾಗ್ಯ ಎಲ್ಲರಿಗೂ ಪ್ರಾಪ್ತವಾಗಲೆಂದರು.

ಪ್ರಾಸ್ತಾವಿಕವಾಗಿ ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಕುಲಪತಿಗಳಾದ ಬೆಳಗಾಲಪೇಟೆ ಹಿರೇಮಠದ ವಿದ್ವಾನ್ ಸಿದ್ದಲಿಂಗಯ್ಯ ಮಾತನಾಡಿ ವಿದ್ಯೆ ಸಾಧಕನ ಅಮೂಲ್ಯ ಸಂಪತ್ತು. ಜೀವನ ಬದಲಿಸಿಕೊಳ್ಳಲು ಎಲ್ಲರಿಗೂ ಸಮಯ ಸಿಗುತ್ತದೆ. ಸಮಯ ಬದಲಿಸಲು ಮತೊಮ್ಮೆ ಜೀವನ ಸಿಗದು. ತಿಳಿದವರೊಂದಿಗೆ ಅರ್ಧ ಗಂಟೆ ಕಳೆದರೆ ನಾಲ್ಕು ಪುಸ್ತಕ ಓದಿದಂತೆ. ನೋಡುವ ದೃಷ್ಟಿ ಕೈಕೊಂಡ ಕಾರ್ಯ ಉತ್ತಮವಾಗಿದ್ದರೆ.

ಶ್ರೇಯಸ್ಸು ಕಟ್ಟಿಟ್ಟ ಬುತ್ತಿ. ಗುರುಕುಲದ ಎಲ್ಲಾ ಸಾಧಕರು. ಶ್ರದ್ಧೆ ನಿ?ಯಿಂದ ಜ್ಞಾನ ಸಂಪತ್ತನ್ನು ಸಂಪಾದಿಸಿಕೊಳ್ಳಬೇಕೆಂದರು. ಈ ಸಂದರ್ಭದಲ್ಲಿ ಜೂನ್ ತಿಂಗಳ ‘ರಂಭಾಪುರಿ ಬೆಳಗು’ ಮಾಸ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಈ ಪವಿತ್ರ ಸಮಾರಂಭದಲ್ಲಿ ಸಾಧಕರು ಮತ್ತು ಜ್ಞಾನ ಸಂಪಾದಿಸಿಕೊಳ್ಳುವ ಕೆಲವು ಗಣ್ಯರು ಉಪಸ್ಥಿತರಿದ್ದರು. ಗುರುಕುಲ ಸಾಧಕರಿಂದ ವೇದಘೋಷ ಜರುಗಿತು. ಅರ್ಚಕ ಬಳಗದಿಂದ ಪ್ರಾರ್ಥನಾ ಗೀತೆ ಜರುಗಿತು. ನೀಲೂರು ಹಿರೇಮಠದ ಮಡಿವಾಳ ದೇವರು ನಿರೂಪಿಸಿದರು.

Education hard work – patience is the stepping stone to success in life

About Author

Leave a Reply

Your email address will not be published. Required fields are marked *

You may have missed