September 19, 2024

ಇಂದಿನ ಯುವಪೀಳಿಗೆ ಪರಿಸರ ಪ್ರಜ್ಞೆ ಮೂಡಿಸಿಕೊಳ್ಳಿ

0
ಕಾಳಿದಾಸರನಗರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ವಿಶ್ವ ಪರಿಸರ ದಿನಾಚರಣೆ

ಕಾಳಿದಾಸರನಗರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ವಿಶ್ವ ಪರಿಸರ ದಿನಾಚರಣೆ

ಚಿಕ್ಕಮಗಳೂರು: ವಿಶ್ವದ ಪ್ರತಿಯೊಂದು ಜೀವರಾಶಿಗೂ ಪ್ರಕೃತಿ ಸಂಪತ್ತು ಅವಶ್ಯಕ. ಸಂಪತ್ಪರಿತ ಪರಿಸರವನ್ನು ಉಳಿಸುವ ಕಾರ್ಯ ಮನುಷ್ಯ ಮಾಡಿದರೆ, ಮುಂದಿನ ಪೀಳಿಗೆಗೆ ಸ್ವಚ್ಚಂದ ವಾತಾವರಣ ಕೊಂಡೊಯ್ಯಲು ಸಾಧ್ಯ ಎಂದು ನಗರಸಭಾ ಮಾಜಿ ಅಧ್ಯಕ್ಷ ಕೆ.ಎಸ್.ಪುಷ್ಪರಾಜ್ ಹೇಳಿದರು.

ಕಾಳಿದಾಸನಗರದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಾಳಿದಾಸರನಗರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ವಾರ್ಡಿನ ಮನೆಗಳ ಮುಂಭಾಗದಲ್ಲಿ ಹೊಂಗೆ, ನೇರಳೆ, ಪನ್ನಿರಳೆ ತಳಿಗಳ ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

ಸ್ವಚ್ಚಂಧ ಗಾಳಿ, ಹಚ್ಚಹಸಿರಿನ ವಾತಾವರಣ ಮಾನವನ ಆರೋಗ್ಯವನ್ನು ಇನ್ನಷ್ಟು ವೃದ್ದಿಗೊಳಿಸಲು ಸಹಕಾರಿ. ಪ್ರಪಂಚದಲ್ಲಿ ಜನಿಸಿದ ಪ್ರತಿಯೊಬ್ಬರು ಮನೆಗೊಂದು ಸಸಿಗಳನ್ನು ನೆಟ್ಟು ಪೋಷಿಸಬೇಕು ಎಂದ ಅವರು ಉತ್ತಮ ಜೀವನಕ್ಕೆ ಆದ್ಯತೆ ಕೊಡುವ ರೀತಿಯಲ್ಲೇ ಪರಿಸರ ಬೆಳವಣಿಗೆ ಹೆಚ್ಚು ಆದ್ಯತೆ ನೀಡುವುದು ಅತಿಮುಖ್ಯ ಎಂದರು.

ಮಲೆನಾಡು ಪ್ರದೇಶವನ್ನು ಒಳಗೊಂಡಿರುವ ಚಿಕ್ಕಮಗಳೂರು ಎಲ್ಲೆಲ್ಲೂ ಬೃಹದಾಕಾರದ ಮರಗಳು ಹಬ್ಬಿಕೊಂಡಿರುವ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪರಿಸರಾಸಕ್ತರು ಭೇಟಿ ನೀಡುವ ಮೂಲಕ ಪ್ರಕೃತಿ ಸೊಬಗನ್ನು ಸವಿಯುತ್ತಿದ್ದಾರೆ. ಹಾಗಾಗಿ ಇಂದಿನ ಯುವಪೀಳಿಗೆ ಹೆಚ್ಚೆಚ್ಚು ಪರಿಸರ ಪ್ರಜ್ಞೆ ಮೂಡಿ ಸಿಕೊಳ್ಳುವುದು ಅನಿವಾರ್ಯ ಎಂದು ತಿಳಿಸಿದರು.

ಕಾಳಿದಾಸರನಗರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಜಯಪ್ರಕಾಶ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಮಳೆಯ ಅಭಾವ, ಅತಿಯಾದ ತಾಪಮಾನ ಏರಿಕೆ ಕಾಣುತ್ತಿದ್ದೇವೆ. ಇದಕ್ಕೆಲ್ಲಾ ಮೂಲ ಕಾರಣ ಉತ್ತಮ ಪರಿಸರವನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿ ನಾವೆದ್ದೇವೆ ಎಂದ ಅವರು ನಾಗರೀಕ ಸಮಾಜವು ಇವುಗಳನ್ನು ಅರಿತುಕೊಂಡು ಮನೆಗೊಂದು ಸಸಿಗಳನ್ನು ನೆಡುವ ಮೂಲಕ ಸಂರಕ್ಷಣೆಗೆ ಮುಂದಾಗಬೇಕು ಎಂದರು.

ಪ್ರಸ್ತುತ ವಾರ್ಡಿನ ನೂರಕ್ಕೂ ಹೆಚ್ಚು ಮನೆಗಳ ಮುಂಭಾಗದಲ್ಲಿ ವಿವಿಧ ತಳಿಗಳ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಸಸಿಗಳನ್ನು ದಿನನಿತ್ಯ ಪೋಷಿಸುವ ಜವಾಬ್ದಾರಿ ಆಯಾ ನಿವಾಸಿಗಳು ಮಾ ಡಬೇಕು. ಮುಂದೊಂದು ದಿನ ನೆಟ್ಟಂಥಹ ಸಸಿ ಹೆಮ್ಮರವಾಗಿ ಬೆಳೆದು ಮುಂದಿನ ಪೀಳಿಗೆಯ ಮಕ್ಕಳಿಗೆ ಕಾಯುವ ಜೊತೆಗೆ ಪೂರ್ವಜರ ನೆನಪು ಮರುಕಳಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಲಲಿತ ರವಿನಾಯ್ಕ್, ಜೆ.ರಾಜು, ಸಂಘದ ಉಪಾಧ್ಯಕ್ಷ ಉದಯ್ ಶಂಕರ್, ಕಾರ್ಯದರ್ಶಿ ಚೇತನ್, ಖಜಾಂಚಿ ರಾಜು, ಸಹ ಕಾರ್ಯದರ್ಶಿ ಕಿರಣ್, ಮಾಜಿ ಅಧ್ಯಕ್ಷ ಧರ್ಮಪ್ಪ, ಸದಸ್ಯರುಗಳಾದ ಮಲ್ಲಿಕಾರ್ಜುನ್, ಗಣೇಶ್, ಮನು, ನಿವಾಸಿಗಳಾದ ಮಿಥುನ್, ಹ?, ಪ್ರಶಾಂತ್ ಮತ್ತಿತರರು ಹಾಜರಿದ್ದರು.

Make today’s youth environmentally conscious

About Author

Leave a Reply

Your email address will not be published. Required fields are marked *

You may have missed