September 19, 2024
ನಲಿಕಲಿ ತರಬೇತಿಯ ಶತಕದ ಸಂಭ್ರಮಾಚರಣೆ

ನಲಿಕಲಿ ತರಬೇತಿಯ ಶತಕದ ಸಂಭ್ರಮಾಚರಣೆ

ಚಿಕ್ಕಮಗಳೂರು: ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಸಹಯೋಗದಲ್ಲಿ ಕಳೆದ ಎರಡೂವರೆ ವರ್ಷಗಳ ಕಾಲ ಚಿಕ್ಕಮಗಳೂರಿನ ನಲಿಕಲಿ ತಾರೆಯರ ತಂಡದವರು ತರಬೇತಿ ನೀಡಿ ೧೦೦ ನೇ ದಿನ ಪೂರೈಸಿದ ಹಿನ್ನೆಲೆಯಲ್ಲಿ ೨೦ಕ್ಕೂ ಹೆಚ್ಚು ಶಿಕ್ಷಕಿಯರು, ಸಂಪನ್ಮೂಲ ವ್ಯಕ್ತಿಗಳಿಗೆ ಅಭಿನಂದನಾ ಪತ್ರ ನೀಡಿ ಗೌರವಿಸುವ ಮೂಲಕ ಶತಕದ ಸಂಭ್ರಮವನ್ನು ಆಚರಿಸಿಕೊಂಡರು.

ಬಳಿಕ ಮಾತನಾಡಿದ ಡಯಟ್ ಪ್ರಾಂಶುಪಾಲ ಕೆ.ಎಸ್.ಪ್ರಕಾಶ್ ಮಾತನಾಡಿ ಪ್ರತಿ ಭಾನುವಾರದ ರಜೆ ದಿನದಲ್ಲಿ ಶಿಕ್ಷಕರಿಗೆ ಒಂದಿಲ್ಲೊಂದು ಹೊಸ ವಿಚಾರಗಳನ್ನು ತೆಗೆದುಕೊಂಡು, ಆಯಾ ಕಾಲಘಟ್ಟಕ್ಕೆ ಬೇಕಾದಂತಹ ಮಾಹಿತಿಯನ್ನು ಒದಗಿಸುವಂತಹ ಉತ್ತಮ ವೇದಿಕೆ ಇದಾಗಿದೆ ಎಂದು ಅಭಿಪ್ರಾಯ ವ್ಯಕ್ತಪ ಡಿಸಿದರು.

ಕಳೆದ ಎರಡು ವ? ಎಂಟು ತಿಂಗಳಿನಿಂದಲೂ ಪ್ರತಿ ಭಾನುವಾರದ ರಜೆಯ ದಿನದಂದು ಆನ್ಲೈನ್ ಮೂಲಕ ರಾಜ್ಯದ ಶಾಲಾ ಶಿಕ್ಷಕರಿಗಾಗಿ ನಿರಂತರವಾಗಿ ಮಾರ್ಗದರ್ಶನ, ತರಬೇತಿಯನ್ನು ನೀಡುತ್ತಾ ಬರುತ್ತಿರುವುದು ಇಡೀ ಕರ್ನಾಟಕ ರಾಜ್ಯದಲ್ಲಿಯೇ ಶಿಕ್ಷಣ ಕ್ಷೇತ್ರದ ವಿನೂತನ ಕಾರ್ಯ ಚಟುವಟಿಕೆ ಯಾ ಗಿದ್ದು ಇದೀಗ ನೂರನೇ ಸಂಚಿಕೆಯ ಸಂಭ್ರಮ ಹೆಸರಿನಲ್ಲಿ ಆಚರಿಸಿಕೊಂಡಿದೆ ಎಂದರು.

ನಲಿಕಲಿ ಕೋಶದ ರಾಜ್ಯ ಕಿರಿಯ ಕಾರ್ಯಕ್ರಮಾಧಿಕಾರಿ ಡಾ. ಎಸ್. ಗುಣವತಿ ಮಾತನಾಡಿ ಎಲ್ಲಾ ಶಿಕ್ಷಕರು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುವ ಫಲವಾಗಿ ನಲಿಕಲಿ ಪದ್ಧತಿ ಅಂತರಾಷ್ಟ್ರೀಯ ಮಟ್ಟವನ್ನು ತಲುಪಿದೆ. ಅಲ್ಲದೇ ೮೩ ದೇಶಗಳಿಗೆ ನಲಿಕಲಿ ಪದ್ಧತಿಯನ್ನು ತಲುಪಿಸಲಾ ಗಿದೆ. ಅಲ್ಲಿ ಕನ್ನಡ ಕಲಿಯಲು ಈ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ನೋಡೆಲ್ ಅಧಿಕಾರಿ ಸುರೇಶ್ ಮಾತನಾಡಿ ನೂರರ ಶತಕ ಸಂಭ್ರಮವನ್ನು ಆಚರಿ ಸಿರುವಂತಹ ನಲಿಕಲಿ ಕಾರ್ಯಕ್ರಮ ರಾಜ್ಯಕ್ಕೆ ಮಾದರಿ. ನಮ್ಮ ವೆಬಿನಾರ್ ನಲಿಕಲಿ ವಿಚಾರಕ್ಕೆ ಮಾತ್ರ ಸೀಮಿ ತವಾಗದೆ ಹಲವಾರು ವಿಚಾರಗಳ ಚರ್ಚೆಗಳಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಮುಂದುವರೆಸಲಾಗುವುದು ಎಂದರು.

ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಕೆ.ಹೆಚ್.ಗೀತಾ ಮಾತನಾಡಿ ಕೊರೋನ ಕಾಲಘಟ್ಟದ ನಂತರ ಪುನಃ ಶಾಲೆಗಳು ಪ್ರಾರಂಭವಾದಾಗ ಸರ್ಕಾರಿ ಶಾಲೆಗಳಲ್ಲಿ ನಲಿಕಲಿ ಭೋದನೆ ಪದ್ಧತಿಯಲ್ಲಿ ಆದಂತಹ ಬದಲಾ ವಣೆಗಳನ್ನು ಇಲಾಖೆ ಟೆಲಿ ಕಾನ್ಫರೆನ್ಸ್ ಮೂಲಕ ತಿಳಿಸಿತ್ತಾದರೂ ಎಲ್ಲಾ ಶಿಕ್ಷಕರಿಗೆ ಇಲಾಖೆಯ ಮಾಹಿತಿ ಒದಗಿಸಬೇಕು ಎನ್ನುವ ಆಶಯದೊಂದಿಗೆ ಶಿಕ್ಷಕಿಯರ ತಂಡವನ್ನು ಕಟ್ಟಿ ವಾಟ್ಸಾಪ್ ಗುಂಪು ರಚಿಸಿ ಕೊಂಡು ಸಂಜೆ ಶಾಲಾ ಸಮಯದ ನಂತರದಲ್ಲಿ ಗೂಗಲ್ ಮೀಟ್ ಮೂಲಕ ವೆಬಿನಾರ್ ನಡೆಸಿ, ಶಿಕ್ಷಕರಿಗೆ ಮಾಹಿತಿ ಒದಗಿಸಲಾಗಿದೆ ಎಂದರು.

ಇದೇ ವೇಳೆ ೧೦೦ ನೆಯ ವೆಬಿನಾರ್ ಸಂಚಿಕೆಯ ಶತಕ ಸಂಭ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕನ್ನಡ ಚಲನಚಿತ್ರ ರಂಗದ ಖ್ಯಾತ ನಿರ್ದೇಶಕರು ಟಿ.ಎಸ್.ನಾಗಾಭರಣ ಹಾಗೂ ಕನ್ನಡ ಪೂಜಾರಿ ಹಿರೇಮಗಳೂ ರು ಕಣ್ಣನ್ ಭಾಗವಹಿಸಿದ್ದು ವಿಶೇಷವಾಗಿತ್ತು.

ವೆಬಿನಾರ್ ನಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಿದಂತಹ ರಾಜ್ಯದ ಹಲವಾರು ಜನ ಅಧಿಕಾ ರಿಗಳು ಮತ್ತು ಶಿಕ್ಷಕರಿಗೆ ಅಭಿನಂದನಾ ಪತ್ರವನ್ನು ಮತ್ತು ಕಾರ್ಯಕ್ರಮವನ್ನು ನಿರ್ವಹಣೆ ಮಾಡಿಕೊಂಡು ಬಂದಂತಹ ನಲಿಕಲಿ ತಾರೆಯರು ತಂಡದವರಿಗೂ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಹಾಸನ ಡಯಟ್ ಪ್ರಾಂಶುಪಾಲ ಪು?ಲತಾ, ಡಿ.ಎಸ್.ಇ.ಆರ್.ಟಿ ಯ ನಿರ್ದೇ ಶಕಿ ಸುಮಂಗಲ, ನಿವೃತ್ತ ನಿರ್ದೇಶಕ ಎಂ.ಎನ್.ಬೇಗ್, ಶಿವಮೊಗ್ಗ ಡಯಟ್‌ನ ಉಪನ್ಯಾಸಕಿ ಅಧಿ ಕಾರಿ ರೇಣುಕಾ, ಶಿಕ್ಷಕರಾದ ಜ್ಞಾನೇಶ್ವರಿ, ಅನುಪಮಾ, ಸೌಮ್ಯ, ಪ್ರಮೀಳಾ, ಸುರೇಂದ್ರ ನಾಯಕ್, ಆರ್.ಡಿ.ರವೀ ಂದ್ರ, ಧರಣಿ, ಶೀಲಾ, ವೀಣಾ, ಕೌಶಲ್ಯ, ರೂಪ ಮತ್ತಿತರರಿದ್ದರು.

Celebrating the Centenary of Nalikali Training

About Author

Leave a Reply

Your email address will not be published. Required fields are marked *

You may have missed