September 16, 2024

ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಬಿಜೆಪಿ ಅಭ್ಯರ್ಥಿ ಪರವಾಗಿ ಮತ

0
ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್ ದೇವರಾಜ್‌ಶೆಟ್ಟಿ ಪತ್ರಿಕಾಗೋಷ್ಠಿ

ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್ ದೇವರಾಜ್‌ಶೆಟ್ಟಿ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಬಿಜೆಪಿ ಅಭ್ಯರ್ಥಿ ಪರವಾಗಿ ಮತ ನೀಡಿದ ಜಿಲ್ಲೆಯ ಎಲ್ಲಾ ಮತದಾರರಿಗೆ ಹಾಗೂ ಈ ಗೆಲುವಿಗೆ ಶ್ರಮಿಸಿದ ಎಲ್ಲರಿಗೂ ಜಿಲ್ಲಾ ಬಿಜೆಪಿ ಧನ್ಯವಾದ ಅರ್ಪಿಸಿದೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್ ದೇವರಾಜ್‌ಶೆಟ್ಟಿ ಅವರು ತಾವು ಜಿಲ್ಲಾಧ್ಯಕ್ಷರಾಗಿ ಮೊದಲ ಬಾರಿಗೆ ನಡೆದ ದೊಡ್ಡ ಚುನಾವಣೆಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ತಮ್ಮ ಪಕ್ಷಕ್ಕೆ ಜಯ ದೊರೆತಿದ್ದು ಇದಕ್ಕಾಗಿ ಪಕ್ಷ ಸಮಸ್ತ ಮತದಾರರಿಗೆ ಅಭಿನಂದಿಸುತ್ತದೆ ಎಂದು ಹೇಳಿದರು.

ಚುನಾವಣೆ ಘೋ?ಣೆ ಆದಾಗಿನಿಂದ ಪಕ್ಷದ ಎಲ್ಲಾ ಹಿರಿಯ ಮುಖಂಡರುಗಳು, ಮಾಜಿ ಶಾಸಕರಾದ ಸಿ.ಟಿ ರವಿ, ಡಿ.ಎನ್ ಜೀವರಾಜ್, ಡಿ.ಎಸ್ ಸುರೇಶ್, ಬೆಳ್ಳಿಪ್ರಕಾಶ್ ರವರ ಮಾರ್ಗದರ್ಶನ ಪಡೆದು ಕಾರ್ಯಕರ್ತರು ಅತ್ಯಂತ ಹುರುಪಿನಿಂದ ಕೆಲಸ ಮಾಡಿದ್ದು, ಬಾರಿ ಪ್ರಮಾಣದ ಗೆಲುವಿಗೆ ಕಾರಣವಾಗಿದೆ ಎಂದು ಹೇಳಿದರು.

ಈ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್ ಪಕ್ಷದ ಮುಖಂಡರಾದ ಎಸ್.ಎಲ್ ಭೋಜೇಗೌಡ, ತರೀಕೆರೆ ನರೇಂದ್ರ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್‌ಕುಮಾರ್ ಇನ್ನೂ ಮುಂತಾದ ಮುಖಂಡರುಗಳು ಒಮ್ಮತದ ನಿಷ್ಟೆಯಿಂದ ಚುನಾವಣೆಯಲ್ಲಿ ಶ್ರಮವಹಿಸಿದ ಕಾರಣ ಉಡುಪಿ-ಚಿಕ್ಕಮಗಳೂರು ಕ್ಷೇತ್ರವು ಸೇರಿದಂತೆ ಇಡೀ ದೇಶದಲ್ಲಿ ಎನ್‌ಡಿಎ ಪಕ್ಷ ಅಧಿಕಾರ ಹಿಡಿಯುವಂತಾಗಿದೆ ಎಂದರು.

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಮತ ಪಡೆಯಲು ನಡೆಸಿದ ಪ್ರಯತ್ನಕ್ಕೆ ಮತದಾರರು ಮನ್ನಣೆ ನೀಡಲಿಲ. ದೇಶ ಮತ್ತು ನರೇಂದ್ರ ಮೋದಿಯವರಿಗೆ ಮನ್ನಣೆ ನೀಡಿದ್ದು ಕಾಂಗ್ರೆಸ್ಸಿನ ನಿರೀಕ್ಷೆ ಹುಸಿಯಾಯಿತು ಎಂದು ಹೇಳಿದರು.

ಚುನಾವಣೆ ಪ್ರಕಟವಾದಾಗ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ಅಭ್ಯರ್ಥಿಗಳ ಬಗ್ಗೆ ಚರ್ಚೆ ಏರ್ಪಟ್ಟಿತ್ತು. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಸದರಾಗಿದ್ದ ಕುಮಾರಿ ಶೋಭಾಕರಂದ್ಲಾಜೆ ಅವರಿಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆಗೆ ಇಳಿಸಿ ಈ ಕ್ಷೇತ್ರಕ್ಕೆ ವಿಧಾನಪರಿ?ತ್ ವಿರೋಧ ಪಕ್ಷದ ನಾಯಕರಾಗಿದ್ದ ಕೋಟಾ ಶ್ರೀನಿವಾಸಪೂಜಾರಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಯಿತು ಎಂದು ತಿಳಿಸಿದರು.

ಅದೇ ರೀತಿ ಕಾಂಗ್ರೆಸ್‌ನಲ್ಲಿ ಜಯಪ್ರಕಾಶ್‌ಹೆಗಡೆ ಯವರಿಗೆ ಟಿಕೆಟ್ ನೀಡಿ ಸ್ಪರ್ಧೆಗೆ ಇಳಿಸಲಾಯಿತು. ಚುನಾವಣಾ ಪ್ರಚಾರ ಕಾರ್ಯ ಆರಂಭವಾದ ಮೇಲೆ ಜಯಪ್ರಕಾಶ್ ಹೆಗಡೆ ಮತ್ತು ಕೋಟಾ ಶ್ರೀನಿವಾಸ್ ಪೂಜಾರಿ ಈ ಇಬ್ಬರು ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಯಿತೇ ವಿನಃ ಬೇರೆ ಯಾವುದೇ ವಿ?ಯಗಳು ಪ್ರಸ್ತಾಪಕ್ಕೆ ಬರಲಿಲ್ಲವೆಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸೋಮಶೇಖರ್, ಕೋಟೆ ರಂಗನಾಥ್, ಪು?ರಾಜ್, ನಾರಾಯಣಗೌಡ, ಹೆಚ್.ಎಸ್ ಪುಟ್ಟಸ್ವಾಮಿ, ಸಂತೋ? ಕೊಟ್ಯಾನ್, ಸಚಿನ್ ಮತ್ತಿತರರು ಉಪಸ್ಥಿತರಿದ್ದರು.

In the Lok Sabha elections the vote in favor of the BJP candidate exceeded expectations

About Author

Leave a Reply

Your email address will not be published. Required fields are marked *