September 19, 2024

ನಗರ ಸಭೆ ಆವರಣದ ಪಾರ್ಕ್‌ನಲ್ಲಿ ವಿಶ್ವ ಪರಿಸರ ದಿನಾಚರಣೆ

0
ನಗರ ಸಭೆ ಆವರಣದ ಪಾರ್ಕ್‌ನಲ್ಲಿ ವಿಶ್ವ ಪರಿಸರ ದಿನಾಚರಣೆ

ಚಿಕ್ಕಮಗಳೂರು:  ನಗರ ಸಭೆ ಆವರಣದ ಪಾರ್ಕ್‌ನಲ್ಲಿ ವಿವಿಧ ಬಗೆಯ ಸಸಿಗಳನ್ನು ನೆಡುವುದರ ಮೂಲಕ ವಿನೂತನ ವಿಶ್ವ ಪರಿಸರ ದಿನಾಚರಣೆ ಹಾಗೂ ವನಮಹೋತ್ಸವವನ್ನು ಆಚರಿಸಲಾಗುತ್ತಿದೆ ಎಂದು ನಗರಸಭಾ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ತಿಳಿಸಿದರು.

ಅವರು ಇಂದು ನಗರಸಭೆ ವತಿಯಿಂದ ಏರ್ಪಡಿಸಲಾಗಿದ್ದ ವನಮಹೋತ್ಸವವನ್ನು ಗಿಡಗಳನ್ನು ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಕಳೆದ ವ? ನಗರದ ಹೊರಭಾಗದಲ್ಲಿ ಸಸಿಗಳನ್ನು ನೆಟ್ಟು ವನಮಹೋತ್ಸವ ಆಚರಿಸಲಾಗಿತ್ತು. ಈ ವ? ನಗರಸಭೆ ಒಳಗೆ ಇರುವ ಪಾರ್ಕ್ ಜಾಗದಲ್ಲಿ ವಿವಿಧ ಬಗೆಯ ಸಸ್ಯಗಳನ್ನು ನೆಡಲಾಗಿದೆ ಎಂದು ಹೇಳಿದರು.

ಸುಂದರವಾದ ಗಿಡಗಳು, ಎಲ್ಲಾ ರೀತಿಯ ಹಣ್ಣಿನ ಗಿಡಗಳನ್ನು ನೆಟ್ಟು ಪರಿಸರ ದಿನಾಚರಣೆಗೆ ಅರ್ಥ ನೀಡಲಾಗಿದೆ ಎಂದ ಅವರು ಮುಂದಿನ ದಿನಗಳಲ್ಲಿ ನಗರಸಭೆ ವ್ಯಾಪ್ತಿಯ ಖಾಲಿ ಜಾಗದಲ್ಲಿ ಗಿಡಗಳ ನೆಟ್ಟು ಪೋಷಿಸಿ, ಸುಂದರ ಪಾರ್ಕ್ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ ಎಂದರು.

ಈಗಾಗಲೇ ೧೫೦೦ ಸಸಿ ನೆಡಲು ಗುರಿ ಹೊಂದಲಾಗಿದೆ. ರಾಮನಹಳ್ಳಿಯಲ್ಲಿರುವ ನೀರು ಶುದ್ಧೀಕರಣ ಘಟಕ, ಹೌಸಿಂಗ್‌ಬೋರ್ಡ್ ಘಟಕ, ಮುಗಳವಳ್ಳಿಯಲ್ಲಿರುವ ಫಿಲ್ಟರ್‌ಬೆಡ್ ಇನ್ನೂ ಮುಂತಾದ ಕಡೆಗಳಲ್ಲಿ ಗಿಡಗಳನ್ನು ನೆಡಲು ಸೂಚಿಸಲಾಗಿದೆ ಎಂದು ಹೇಳಿದರು.

ಪಕ್ಷಿಗಳಿಗೆ ಆಹಾರವಾಗುವ ದಾಳಿಂಬೆ, ನೇರಳೆ, ಸಪೋಟ, ಮಾವು, ಹಲಸು ಸೇರಿದಂತೆ ಎಲ್ಲಾ ಬಗೆಯ ಹಣ್ಣಿನ ಗಿಡಗಳನ್ನು ನೆಡಲು ತೀರ್ಮಾನಿಸಲಾಗಿದೆ. ಪರಿಸರ ದಿನಾಚರಣೆ ಸವಿನೆನಪಿಗಾಗಿ ಒಂದು ಗಿಡವನ್ನು ನೆಡುವ ಮೂಲಕ ಪರಿಸರ ರಕ್ಷಣೆಗೆ ನಾಗರಿಕರು ಮುಂದಾಗಬೇಕೆಂದು ಮನವಿ ಮಾಡಿದರು.

ಪ್ಲಾಸ್ಟಿಕ್ ಮುಕ್ತ ನಗರವನ್ನು ಮಾಡಿ ಪರಿಸರ ಕಾಪಾಡುವ ಕೆಲಸವನ್ನು ನಗರಸಭೆ ಮಾಡುತ್ತದೆ. ಎಂ.ಜಿ ರಸ್ತೆಯಲ್ಲಿ ಷೋ ಗಿಡಗಳ ನೆಡುವ ಮೂಲಕ ಪರಿಸರ ರಸ್ತೆ, ಹಸಿರು ರಸ್ತೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಪೌರಾಯುಕ್ತರಾದ ಕೃ?ಮೂರ್ತಿ, ಇನ್ಸ್‌ಪೆಕ್ಟರ್ ಆರ್.ಓ, ರಾಜಸ್ವ ನಿರೀಕ್ಷಕರು ಸೇರಿದಂತೆ ನಗರಸಭೆಯ ಸಿಬ್ಬಂದಿ ಭಾಗವಹಿಸಿ ಸಂತೋ?ದಿಂದ ವನಮಹೋತ್ಸವ ಆಚರಣೆ ಮಾಡಿದರು.

World Environment Day Celebration at City Hall Park

About Author

Leave a Reply

Your email address will not be published. Required fields are marked *

You may have missed