September 19, 2024

ನೂತನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ

0
ನೂತನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ

ನೂತನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ

ಚಿಕ್ಕಮಗಳೂರು:  ಸಕಲ ಚರಾಚರ ಜೀವರಾಶಿಗಳಿಗಿರುವುದು ಒಂದೇ ಭೂಮಿ ದುರಾಸೆಗಾಗಿ ಕಲುಷಿತಗೊಳಿಸಿದರೆ ಜೀವರಾಶಿಗಳು ಭೂಮಿಯ ಮೇಲೆ ಬದುಕಲು ಸಾಧ್ಯವಿಲ್ಲ ಎಂದು ಪ್ರಧಾ ನ ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಶುಭಗೌಡರ್ ಹೇಳಿದರು.

ನಗರದ ಎಐಟಿ ಕಾಲೇಜು ಹಿಂಭಾಗದ ನೂತನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನ್ಯಾಯಾ ಂಗ ಮತ್ತು ಅರಣ್ಯ ಇಲಾಖೆ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬುಧವಾರ ಅವರು ಮಾತನಾಡಿ ದರು.

ಪರಿಸರ ಜಾಗೃತಿ ಮೂಡಿಸುವುದು ಅಗತ್ಯ. ಯಾವುದೇ ಜೀವಿ ಬದುಕಲು ಸುತ್ತಮುತ್ತಲ ಉತ್ತಮ ಪರಿಸರ ಅವಶ್ಯಕ. ಇಲ್ಲದಿದ್ದರೆ ಜೀವಸಂಕುಲದ ಬದುಕಿಗೆ ಕುತ್ತು. ಮಳೆ, ಗಾಳಿ ಮುಂತಾದ ಪ್ರಕೃತಿದತ್ತ ಕ್ರಿಯೆ ಗೆ ಸೂಕ್ತ ಪರಿಸರವಿಲ್ಲದಿದ್ದರೆ ನಮ್ಮ ಬದುಕು ದುರಂತವಾಗಲಿದೆ ಎಂದರು.

ಪರಿಸರದ ಮೇಲೆ ಮಾನವ ದೌರ್ಜನ್ಯ ನಿತ್ಯ ನಡೆದರೆ ಊಟವಿರಲಿ, ಶುದ್ಧಗಾಳಿ ಸಿಗದಂತಹ ಪರಿ ಸ್ಥಿತಿಯಿದೆ. ಹಾಗಾಗಿ ನಾವುಗಳು ಪರಿಸರ ಉಳಿವಿಗೆ ನಮ್ಮ ಕೈಲಾದ ಕೊಡುಗೆ ನೀಡಬೇಕು. ಮನಯಂಗಳ ಅಥವಾ ಸುತ್ತಮುತ್ತಲ ಖಾಲಿ ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದರು.

ಪರಿಸರ ಸಂರಕ್ಷಣೆ ದಿನಾಚರಣೆಯು ಕೇವಲ ಒಂದು ದಿನಕ್ಕೆ ಸೀಮಿತವಾಗದೇ ನಿತ್ಯ ಪ್ರಕೃತಿಯನ್ನು ಸಂರಕ್ಷಿಸುವ ಹೊಣೆಯಾಗಬೇಕು. ಪರಿಶುದ್ಧ ಆಮ್ಲಜನಕ ಹಾಗೂ ಸುಂದರ ವಾತಾವರಣ ನಿರ್ಮಾಣ ಕ್ಕೆ ಪರಿಸರ ಅತ್ಯಂತ ಪೂರಕ. ಆ ನಿಟ್ಟಿನಲ್ಲಿ ಸಮಾಜದ ನಾಗರೀಕರು ಹೆಚ್ಚೆಚ್ಚು ಪರಿಸರದ ಪ್ರಜ್ಞೆ ಮೂಡಿಸಿ ಕೊಳ್ಳಬೇಕು ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಸುಜೇಂದ್ರ ಮಾತನಾಡಿ ಆರೋಗ್ಯಕರ ಜೀವನಕ್ಕಾಗಿ, ಪರಿ ಸರವು ಪ್ರಮುಖ ಪಾತ್ರ ವಹಿಸುತ್ತದೆ. ಪ್ರಾಣಿಗಳು ಮತ್ತು ಮನು?ರ ನಡುವಿನ ವ್ಯತ್ಯಾಸವೆಂದರೆ ಪ್ರಾಣಿಗಳು ಪರಿಸರಕ್ಕಾಗಿ ತಮ್ಮನ್ನು ಬದಲಾಯಿಸಿಕೊಳ್ಳುತ್ತವೆ, ಆದರೆ ಮಾನವರು ಪರಿಸರವನ್ನು ತಮಗಾಗಿ ಬದಲಾ ಯಿಸುತ್ತಾರೆ ಎಂದರು.

ಆ ನಿಟ್ಟಿನಲ್ಲಿ ಇಂದಿನ ಯುವಪೀಳಿಗೆಗೆ ಹೆಚ್ಚೆಚ್ಚು ಪರಿಸರದ ಬಗ್ಗೆ ಕಾಳಜಿ ಬೆಳೆಸಿಕೊಳ್ಳಬೇಕು. ಪರಿಸರ ಉಳಿದರೆ ಜೀವರಾಶಿ ಉಳಿದಂತೆ ಎಂಬ ತತ್ವಸಂದೇಶವನ್ನು ಆಳವಾಗಿ ಅಳವಡಿಸಿಕೊಂಡಾಗ ಮಾತ್ರ ಸುಂ ದರ ಜಗತ್ತನ್ನು ಉಳಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಸಾಧ್ಯ ಎಂದರು.

ವಕೀಲರ ಸಂಘದ ಕಾರ್ಯದರ್ಶಿ ಆರ್.ಅನಿಲ್‌ಕುಮಾರ್ ಮಾತನಾಡಿ ಪ್ರಸ್ತುತ ಕಾಲಘಟ್ಟದಲ್ಲಿ ಪರಿ ಸರ ಸಂರಕ್ಷಿಸುವುದು ಪ್ರತಿಯೊಬ್ಬರು ಕರ್ತವ್ಯ. ಪರಿಸರದಿಂದ ಗಾಳಿ, ನೀರು, ಆಹಾರ ಸೇರಿದಂತೆ ಹಲ ವಾರು ಸೌಲಭ್ಯ ಪಡೆದುಕೊಳ್ಳುವ ಮಾನವರು. ಜೊತೆಗೆ ಪರಿಸರಕ್ಕೆ ಪೂರಕವಾಗಿ ಸ್ಪಂದಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ, ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ವಿ.ಪ್ರಕಾಶ್, ಒಂದನೇ ಹೆಚ್ಚುವರಿ ಹಿರಿಯ ಶ್ರೇಣಿ ನ್ಯಾಯಾ ಧೀಶ ಎಸ್.ಬಿ.ದ್ಯಾವಪ್ಪ, ಎರಡನೇ ಹೆಚ್ಚುವರಿ ಹಿರಿಯ ಶ್ರೇಣಿಯ ಕೃಷ್ಣ, ಪ್ರಧಾನ ಸಿವಿಲ್ ಮತ್ತು ಕ್ರಿಮಿನಲ್ ಕಿರಿಯ ಶ್ರೇಣಿ ಆರ್.ಮಂಜುನಾಥ್, ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಮಂಜು, ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಹರೀಶ್, ಮೂರನೇ ಹೆಚ್ಚುವರಿ ನ್ಯಾಯಾಧೀಶೆ ನಂದಿನಿ, ವಕೀಲರ ಸಂ ಘದ ಉಪಾಧ್ಯಕ್ಷ ಕೆ.ಎಸ್.ಶರತ್‌ಚಂದ್ರ, ಖಜಾಂಚಿ ಡಿ.ಬಿ.ದೀಪಕ್, ಸಹ ಕಾರ್ಯದರ್ಶಿ ಎನ್.ವಿ.ಪ್ರಿಯ ದರ್ಶಿನಿ, ಸರ್ಕಾರಿ ವಕೀಲ ಸಿ.ಸತೀಶ್, ವಕೀಲ ಹೆಚ್. ಟಿ.ಸುನೀಲ್, ಮತ್ತಿತರರಿದ್ದರು.

World Environment Day celebration at New District Court premises

About Author

Leave a Reply

Your email address will not be published. Required fields are marked *

You may have missed