September 19, 2024

ಸಕಲ ಅವಶ್ಯಕತೆ ಪೂರೈಸುವ ಪ್ರಕೃತಿ ಕಾಪಾಡಿಕೊಳ್ಳಬೇಕು

0
ಜಿಲ್ಲಾ ಕಾರಾಗೃಹದಲ್ಲಿ ವಿಶ್ವ ಪರಿಸರ ದಿನಾಚರಣೆ

ಜಿಲ್ಲಾ ಕಾರಾಗೃಹದಲ್ಲಿ ವಿಶ್ವ ಪರಿಸರ ದಿನಾಚರಣೆ

ಚಿಕ್ಕಮಗಳೂರು: ಮನುಷ್ಯ ಸಕಲ ಅವಶ್ಯಕತೆ ಪೂರೈಸುವ ಪ್ರಕೃತಿಯನ್ನು ನಿಷ್ಟೆಯಿಂದ ಕಾಪಾಡಿಕೊಳ್ಳಬೇಕು. ಗಾಳಿ, ಬೆಳಕು, ಆಹಾರ ಒದಗಿಸುವ ಭೂಮಿ ಫಲವತ್ತತೆಯಿಂದ ಕೂಡಿರಲು ಪ್ರತಿಯೊ ಬ್ಬರು ಸಸಿಗಳನ್ನು ಬೆಳೆಸಬೇಕು ಎಂದು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯ ದರ್ಶಿ ವಿ.ಹನುಮಂತಪ್ಪ ಹೇಳಿದರು.

ನಗರದ ಜಿಲ್ಲಾ ಕಾರಾಗೃಹದಲ್ಲಿ ಕಾನೂನು ಸೇವಾ ಪ್ರಾಧಿಕಾರ, ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಹಾಗೂ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಸಹಯೋಗದಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡನ್ನು ನೀರೆರೆಯುವ ಮೂಲಕ ಉದ್ಘಾಟಿಸಿದರು.

ವಿಶ್ವದಲ್ಲಿ ಮಾನವ ಜೀವನ ಸಾಗಿಸಲು ಪ್ರಕೃತಿ ಪ್ರತಿಯೊಂದನ್ನು ಕೊಡುಗೆಯಾಗಿ ನೀಡಿದೆ. ನಿಯ ಮಿತವಾಗಿ ಬಳಕೆ ಮಾಡಿಕೊಂಡು ಬದುಕು ರೂಪಿಸಿಕೊಳ್ಳಬೇಕು. ಅತಿಯಾಗಿ ಬಳಸಿಕೊಂಡಲ್ಲಿ ಇಡೀ ಜೀವ ರಾಶಿಗೆ ಅಪಾಯ ತಪ್ಪಿದ್ದಲ್ಲ. ಹೀಗಾಗಿ ಹೆಚ್ಚೆಚ್ಚು ಸಂಖ್ಯೆಯಲ್ಲಿ ಮರ-ಗಿಡಗಳನ್ನು ಬೆಳೆಸುವ ಕಾಯಕದಲ್ಲಿ ಮುಂದಾಗಬೇಕು ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ತಾಪಮಾನ ಏರಿಕೆ, ಹವಾಮಾನದ ಏರುಪೇರಿನಿಂದ ಪರಿಸರಕ್ಕೆ ಬಹಳಷ್ಟು ಹಾನಿಗೊಂಡಿದೆ. ಇವುಗಳನ್ನು ಸರಿದೂಗಿಸುವ ನಿಟ್ಟಿನಲ್ಲಿ ಪರಿಸರಾಸಕ್ತರು ಸೇರಿದಂತೆ ಜಿಲ್ಲೆಯ ಜನತೆ ಯಥೆ ಚ್ಚವಾಗಿ ತಮ್ಮ ಮನೆಯಂಗಳ ಅಥವಾ ಖಾಲಿ ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವ ಮೂಲಕ ಪ್ರಕೃತಿ ಗೆ ಪೂರಕವಾಗಿ ಕಾರ್ಯೋನ್ಮುಖರಾಗಬೇಕು ಎಂದರು.

ಆಕಸ್ಮಿಕ ಅಥವಾ ಇನ್ಯಾವುದೇ ತಪ್ಪುಗಳಿಗೆ ಬಂಧಿಗಳಾಗುವ ಖೈದಿಗಳು ಆತ್ಮವಿಶ್ವಾಸ ಕಳೆದುಕೊಳ್ಳ ಬಾರದು. ಕಾರಾಗೃಹದಲ್ಲಿ ಇರುವಷ್ಟು ದಿವಸಗಳು ಬದುಕಿನಲ್ಲಿ ಕಲಿತ ಪಾಠವೆಂದು ಪರಿಗಣಿಸಿ ಬಿಡುಗಡೆ ಬಳಿಕ ಸಾತ್ವಿಕ ಜೀವನ ನಡೆಸಬೇಕು. ಪೋಷಕರು, ಮಡದಿಯನ್ನು ಸೌಖ್ಯವಾಗಿ ಇರಿಸುವುದು ಹಾಗೂ ಮಕ್ಕಳಿಗೆ ಗುಣಮಟ್ಟದ ವಿದ್ಯಾಭ್ಯಾಸ ಕೊಡಿಸುವ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದರು.

ಬ್ರಹ್ಮಕುಮಾರೀಸ್ ಸಂಸ್ಥೆ ಜಿಲ್ಲಾ ಸಂಚಾಲಕಿ ಭಾಗ್ಯ ಮಾತನಾಡಿ ಪ್ರಕೃತಿಯನ್ನು ದೇವರೆಂದು ಪೂ ಜಿಸುವ ಮೂಲಕ ಕಾಪಾಡಿಕೊಳ್ಳುವ ಜವಾಬ್ದಾರಿ ನಾಗರೀಕರು ನಿರ್ವಹಿಸಬೇಕು. ಬಹುತೇಕ ಜೀವರಾಶಿಗೆ ತನ್ನದೇ ಕೊಡುಗೆ ನೀಡಿರುವ ಪರಿಸರವನ್ನು ಸಂರಕ್ಷಿಸುವ ಕಾರ್ಯದಲ್ಲಿ ಮುಂದಾಗಬೇಕು. ಅಲ್ಲಲ್ಲಿ ಸಸಿಗ ಳನ್ನು ನೆಡುವ ಮೂಲಕ ಪರಿಸರದ ಋಣ ತೀರಿಸಬೇಕು ಎಂದು ತಿಳಿಸಿದರು.

ಪ್ರಕೃತಿಗೆ ಪೂರಕವಾಗುವ ನಿಟ್ಟಿನಲ್ಲಿ ಅರಳಿ, ನೇರಳೆ, ಹೊಂಗೆ, ಆಲ ಸೇರಿದಂತೆ ಮುಂತಾದ ಸಸಿ ಗಳನ್ನು ಮನೆಗಳ ಸಮೀಪದಲ್ಲಿ ಬೆಳೆಸಿದರೆ ಪರಿಶುದ್ಧ ವಾತಾವರಣ ನಿಮ್ಮದಾಗಲಿದೆ. ಮುಂದಿನ ಪೀಳಿಗೆಗೆ ಆ ಮರವೊಂದು ಪೂರ್ವಜರ ನೆನಪಾರ್ಥ ಶಾಶ್ವತವಾಗಿ ಉಳಿಯಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಸ್.ಬಿ.ಐ. ಹಿರಿಯ ವ್ಯವಸ್ಥಾಪಕ ಕೃಷ್ಣ ಕಿಶೋರ್, ಕಾರಾಗೃಹ ಅಧೀಕ್ಷಕ ಎಸ್. ಎಸ್.ಮೇಟಿ, ಸಹಾಯಕ ಜೈಲರ್ ಎಂ.ಕೆ.ನೆಲಧರಿ, ಯೋಗ ತರಬೇತುದಾರ ಡಾ. ಭಾಸ್ಕರ್ ಹಾಗೂ ಕಾರಾ ಗೃಹ ಅಧಿಕಾರಿಗಳು, ಸಿಬ್ಬಂದಿಗಳು ವರ್ಗದವರು ಉಪಸ್ಥಿತರಿದ್ದರು.

World Environment Day celebration at District Jail

About Author

Leave a Reply

Your email address will not be published. Required fields are marked *

You may have missed