September 19, 2024

ಪರಿಸರ ಪ್ರಜ್ಞೆ ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು

0
ಅಂಧಮಕ್ಕಳ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಅಂಧಮಕ್ಕಳ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಚಿಕ್ಕಮಗಳೂರು: ಪರಿಸರ ದಿನದ ಅಂಗವಾಗಿ ಪ್ರತಿಯೊಬ್ಬರೂ ಪ್ರತಿಜ್ಞೆ ಕೈಗೊಂಡು ಸಸಿಗಳನ್ನು ನೆಟ್ಟು ಪೋಷಿಸುವ ಮೂಲಕ ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾ ಒಕ್ಕಲಿಗರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಚೈತ್ರ ಎಸ್.ಗೌಡ ಹೇಳಿದರು.

ನಗರದ ಆಶಾಕಿರಣ ಅಂಧಮಕ್ಕಳ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಹಾಗೂ ವಿಕಲಚೇತನ ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮವನ್ನು ಗುರುವಾರ ಆಯೋಜಿಸಿ ಅವರು ಮಾತನಾಡಿದರು.

ಆಧುನಿಕತೆ ಬೆಳೆದಂತೆ ಪರಿಸರ ಪ್ರೇಮವು ಮರೆಯಾಗುತ್ತಿದೆ. ಪುರಾತನ ಕಾಲದ ಮರಗಳು ಧರೆ ಗುಳಿದ ಪರಿಣಾಮ ಆಮ್ಲಜನಕ ಕೊರತೆ ಎದುರಾಗುತ್ತಿದೆ. ಮುಂಬರುವ ದಿನಗಳಲ್ಲಿ ಅನೇಕ ಸಂಕಷ್ಟವನ್ನು ಎದುರಿಸುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಇಂದಿನಿಂದಲೇ ಎಚ್ಚೆತ್ತುಕೊಂಡು ಪರಿಸರ ಪ್ರಜ್ಞೆ ಮೂಡಿಸಿಕೊ ಳ್ಳಬೇಕು ಎಂದರು.

ಅಜ್ಜ-ಅಜ್ಜಿಯರ ಕಾಲದಲ್ಲಿ ಪರಿಸರವು ಸಮೃದ್ಧ ವಾತಾವರಣವಿತ್ತು. ಆ ನಿಟ್ಟಿನಲ್ಲಿ ನಮ್ಮ ಹಿರಿಯರು ೮೦ಕ್ಕೂ ಹೆಚ್ಚು ವರ್ಷಗಳ ಹೆಚ್ಚು ಕಾಲ ಜೀವನ ನಡೆಸಿರುವ ಅನೇಕ ಉದಾಹರಣೆಗಳಿವೆ. ಇತ್ತೀಚಿನ ವಾ ತಾವರಣದ ಏರುಪೇರಿನಿಂದ ಆರೋಗ್ಯ ಸಮಸ್ಯೆ ಸೇರಿದಂತೆ ಇನ್ನಿತರೆ ಕಾಯಿಲೆಗಳಿಗೆ ತುತ್ತಾಗುವ ಪರಿಸ್ಥಿತಿ ಯಿದೆ ಎಂದರು.

ಹೀಗಾಗಿ ಪೋಷಕರು ಮಕ್ಕಳಿಗೆ ಪರಿಸರ ಪ್ರಜ್ಞೆಯನ್ನು ಬಾಲ್ಯದಿಂದಲೇ ಅಳವಡಿಸಬೇಕು. ವಿಕಲಚೇ ತನ ಮಕ್ಕಳು ಶಾಲೆಯಲ್ಲಿ ವಿಶಾಲವಾದ ಸ್ಥಳದ ವ್ಯವಸ್ಥೆಯಿರುವ ಹಿನ್ನೆಲೆಯಲ್ಲಿ ಕನಿಷ್ಟ ತಿಂಗಳಿಗೊಮ್ಮೆ ಸಸಿ ಗಳನ್ನು ನೆಟ್ಟು ಪೋಷಿಸಲು ಮುಂದಾದರೆ ಹಚ್ಚ ಹಸಿರು ಹಾಗೂ ಶುದ್ಧ ಆಮ್ಲಜನಕ ಲಭಿಸಲಿದೆ ಎಂದು ತಿಳಿಸಿದರು.

ರಾಜ್ಯ ಸಹ ಕಾರ್ಯದರ್ಶಿ ಆಶಾ ಮೋಹನ್ ಮಾತನಾಡಿ ಪರಿಸರ ಪ್ರಜ್ಞೆ ಮೂಡಿಸಿಕೊಳ್ಳುವ ಜೊ ತೆಗೆ ರಸಪ್ರಶ್ನೆಗಳಂಥ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಬೌದ್ಧಿಕವಾಗಿ ಮುನ್ನುಗ್ಗಬೇಕು. ಇದರಿಂದ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮನ್ನಣೆ ಗಳಿಸಲು ಸಾಧ್ಯ ಎಂದ ಅವರು ವಿಕಲಚೇತನರು ನಿರಾಸೆಗೊಳಗಾಗದೇ ಆಸಕ್ತಿ ಹೊಂದಿರುವ ವಿಷಯದಲ್ಲಿ ಹೆಚ್ಚು ಸಾಧನೆ ಮಾಡಬೇಕು ಎಂದರು.

ಕಾರ್ಯಕ್ರಮದ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು. ಬಳಿಕ ರಸಪ್ರಶ್ನೆ ಸ್ಪರ್ಧೆ ಆಯೋಜಿಸ ಲಾಗಿತ್ತು. ತದನಂತರ ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಕೃಷ್ಣವೇಣಿ, ಖಜಾಂಚಿ ಧರಣಿ, ಜಿಲ್ಲಾ ಉಪಾಧ್ಯಕ್ಷೆ ಉಮಾಗೌಡ, ಕಾರ್ಯಾಧ್ಯಕ್ಷೆ ನೇತ್ರ ವೆಂಕಟೇಶ್, ಖಜಾಂಚಿ ಸವಿತಾ, ಸಹ ಕಾರ್ಯದರ್ಶಿಗಳಾದ ರೇಖಾ ರಾಜು, ಮಾಲಾತಿ ಜಗದೀಶ್, ವಿನೋದ, ಪದಾಧಿಕಾರಿಗಳಾದ ಅವಿಲ, ಪ್ರೀತಿ, ಅಮೂಲ್ಯ, ರತಿ, ಸುಮಿತ್ರ, ರೂಪ, ಕಿರಣ, ಮತ್ತಿ ತರರು ಹಾಜರಿದ್ದರು.

World Environment Day celebration at school for blind children

About Author

Leave a Reply

Your email address will not be published. Required fields are marked *

You may have missed