September 19, 2024

ಕಡೂರು ತಾಲೂಕಿನ ಕಲ್ಲೇನಹಳ್ಳಿಯಲ್ಲಿ ನಾಲ್ಕನೇ ಜಿಲ್ಲಾ ಜಾನಪದ ಸಮ್ಮೇಳನ

0
ಕಲ್ಲೇನಹಳ್ಳಿಯ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಡೆದ ಕರ್ನಾಟಕ ಜಾನಪದ ಪರಿಷತ್ತಿನ ಸಭೆ

ಕಲ್ಲೇನಹಳ್ಳಿಯ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಡೆದ ಕರ್ನಾಟಕ ಜಾನಪದ ಪರಿಷತ್ತಿನ ಸಭೆ

ಚಿಕ್ಕಮಗಳೂರು: ಜಾನಪದ ಕೋಗಿಲೆ ಕೆ ಆರ್ ಲಿಂಗಪ್ಪನವರ ಹುಟ್ಟೂರಾದ ಕಡೂರು ತಾಲೂಕಿನ ಕಲ್ಲೇನಹಳ್ಳಿಯಲ್ಲಿ ಅ ೬ ರಂದು ಕರ್ನಾಟಕ ಜಾನಪದ ಪರಿಷತ್ತಿನಿಂದ ನಾಲ್ಕನೇ ಜಿಲ್ಲಾ ಜಾನಪದ ಸಮ್ಮೇಳನ ನಡೆಯಲಿದೆ

ಕಲ್ಲೇನಹಳ್ಳಿಯ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ ಬಿ ಸುರೇಶ್ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು ಸಮ್ಮೇಳನಾಧ್ಯಕ್ಷರನ್ನಾಗಿ ನಿವೃತ್ತ ಮುಖ್ಯ ಶಿಕ್ಷಕ ವೀರಗಾಸೆ ಕಲಾವಿದ ಶಿವನಿಯ ಕರಿಬಸಪ್ಪ ಅವರನ್ನು ಆಯ್ಕೆ ಮಾಡಲಾಗಿದೆ
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ ಬಿ ಸುರೇಶ್ ಜಿಲ್ಲೆಯ ಜಾನಪದ ವಿದ್ವಾಂಸ ಜಾನಪದ ಕೋಗಿಲೆ ಕೆ ಆರ್ ಲಿಂಗಪ್ಪನವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಅವರ ಹುಟ್ಟೂರಿನಲ್ಲೇ ಜಾನಪದ ಸಮ್ಮೇಳನವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು

ಹಿರಿಯ ಸಾಹಿತಿ ಡಾ ಗೊ ರು ಚನ್ನಬಸಪ್ಪ ಪರಿಷತ್ತಿನ ರಾಜ್ಯಾಧ್ಯಕ್ಷ ಪ್ರೊ ಹಿ ಶಿ ರಾಮಚಂದ್ರಗೌಡ ಹಂಪಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಹಿ ಚಿ ಬೋರಲಿಂಗಯ್ಯ ಖ್ಯಾತ ಜಾನಪದ ಗಾಯಕ ಡಾ ಅಪ್ಪಗೆರೆ ತಿಮ್ಮರಾಜು ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರು ಹಿರಿಯ ಜಾನಪದ ಕಲಾವಿದರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು

ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಜಾನಪದ ಕಲಾತಂಡಗಳ ನಡುವೆ ಅದ್ದೂರಿಯಾಗಿ ನಡೆಸಲಾಗುವುದು ಸಮ್ಮೇಳನದಲ್ಲಿ ಜಾನಪದ ವಸ್ತುಗಳ ಪ್ರದರ್ಶನವನ್ನು ಆಯೋಜಿಸಲಾಗುವುದು ವಿವಿಧ ಜಾನಪದ ಗೋಷ್ಠಿಗಳನ್ನು ಜಾನಪದದ ವಿವಿಧ ಪ್ರಕಾರಗಳ ಪ್ರದರ್ಶನವನ್ನು ನಡೆಸಲಾಗುವುದು ಎಂದು ತಿಳಿಸಿದರು
ಜಿಲ್ಲೆಯ ಮತ್ತು ತಾಲೂಕಿನ ಜಾನಪದ ಕಲಾವಿದರನ್ನು ಸಮ್ಮೇಳನದಲ್ಲಿ ಗೌರವಿಸಲಾಗುವುದು ಎಂದರು

ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ವೀರಗಾಸೆ ಕಲಾವಿದ ಡಾ ಮಾಳೇನಹಳ್ಳಿ ಬಸಪ್ಪ ಈ ಅಪರೂಪದ ಸಮ್ಮೇಳನದಲ್ಲಿ ಜಿಲ್ಲೆಯ ಎಲ್ಲಾ ಜಾನಪದ ಕಲಾವಿದರೂ ಪಾಲ್ಗೊಳ್ಳಬೇಕು ಸಮ್ಮೇಳನದ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸರೋಜಮ್ಮ ಮಾತನಾಡಿ ಜಿಲ್ಲಾ ಮಟ್ಟದ ಜಾನಪದ ಸಮ್ಮೇಳನ ನಡೆದರೆ ಗ್ರಾಮದ ಕೀರ್ತಿ ಹೆಚ್ಚುತ್ತದೆ ಹಾಗಾಗಿ ಎಲ್ಲಾ ಗ್ರಾಮಸ್ಥರೂ ಸಮ್ಮೇಳನದ ಯಶಸ್ಸಿಗೆ ದುಡಿಯಬೇಕು ಎಂದು ಹೇಳಿದರು

ಕರ್ನಾಟಕ ಜಾನಪದ ಪರಿಷತ್ತಿನ ಉಪಾಧ್ಯಕ್ಷ ಗೊಂಡೇದಹಳ್ಳಿ ತಿಪ್ಪೇಶ್ ಚಿಕ್ಕನಲ್ಲೂರು ಜಯಣ್ಣ ಶಿವನಿ ಹೋಬಳಿ ಅಧ್ಯಕ್ಷ ಕಾರೆಹಳ್ಳಿ ಬಸಪ್ಪ ಬಸವರಾಜಪ್ಪ ಗ್ರಾಪಂ ಸದಸ್ಯರಾದ ನಾಗರಾಜ್ ಮಲ್ಲೇಶಪ್ಪ ಗಂಗಣ್ಣ ಸಿದ್ದರಾಮಪ್ಪ ರಾಜಣ್ಣ ಕರಿಬಸಪ್ಪ ಗಂಗಾಧರಪ್ಪ ಶಂಕ್ರಪ್ಪ ಸಭೆಯಲ್ಲಿ ಪಾಲ್ಗೊಂಡಿದ್ದರು

Fourth District Folklore Conference at Kallenahalli in Kadur Taluk

 

 

About Author

Leave a Reply

Your email address will not be published. Required fields are marked *

You may have missed