September 19, 2024

ವಾಲ್ಮಿಕಿ ನಿಗಮದ ಅಕ್ರಮದ ಬಗ್ಗೆ ತನಿಖೆಮಾಡಿ ಸರ್ಕಾರವನ್ನು ವಜಾಗೋಳಿಸಿ

0
ಬಿಜೆಪಿ ಎಸ್‌ಇ ಮೋರ್ಚಾದ ಅಧ್ಯಕ್ಷ ನಂದೀಶ್

ಬಿಜೆಪಿ ಎಸ್‌ಇ ಮೋರ್ಚಾದ ಅಧ್ಯಕ್ಷ ನಂದೀಶ್

ಚಿಕ್ಕಮಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಣದ ಅವ್ಯವಹಾರದಲ್ಲಿ ತನಿಖೆ ನೆಡೆಸಿ ಸರ್ಕಾರವನ್ನು ವಜಾಗೊಳಿಸಬೇಕೆಂದು ಬಿಜೆಪಿ ಎಸ್‌ಇ ಮೋರ್ಚಾದ ಅಧ್ಯಕ್ಷ ನಂದೀಶ್ ಮದಕರಿ ತಿಳಿಸಿದರು.

ಸುದ್ಧಿಗಾರರೊಂದಿಗೆ ಮಾತನಾಡಿ ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮದ ಅಕ್ರಮ ವಹಿವಾಟಿನ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ರಾಷ್ಟ್ರಪತಿಗಳು ಸರ್ಕಾರವನ್ನು ವಜಾಗೊಳಿಸಬೇಕೆಂದು ತಿಳಿಸಿದರು.

ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮದ ಅಧಿಕಾರಿ ಚಂದ್ರಶೇಖರನ್‌ರವರ ಸಾವಿನ ತನಿಖೆ ನಡೆಸಿ, ನಿಗಮದಲ್ಲಿ ನಡೆದಿರುವ ಹಗರಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಚಿವ ನಾಗೇಂದ್ರ ಅವರನ್ನು ವಜಾಗೊಳಿಸಿದ್ದಾರೆ, ಮುಂದಿನ ದಿನಗಳಲ್ಲಿ ಸರ್ಕಾರವನ್ನು ಸಹ ವಜಾಗೊಳಿಸಬೇಕೆಂದು ತಿಳಿಸಿದರು.

ರಾಜ್ಯ ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ಸುಮಾರು ೧೮೭ ಕೋಟಿ ರೂ. ಅಕ್ರಮ ಹಣ ವರ್ಗಾವಣೆಯ ಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರವೆಸಗಿರುವುದು ಸ್ಪಷ್ಟವಾಗಿ ವ್ಯಕ್ತವಾಗುತ್ತಿದೆ. ವರ್ಗಾವಣೆ ದಂಧೆ ಯಲ್ಲಿ ತೊಡಗಿರುವ ಸಚಿವ ನಾಗೇಂದ್ರ ನೇರವಾಗಿ ವರ್ಗಾವಣೆಗೆ ಮೌಖಿಕ ಆದೇಶ ನೀಡಿರುವುದು ಭ್ರಷ್ಟ ಚಾರಕ್ಕೆ ಜೀವಂತ ನಿದರ್ಶನವಾಗಿದೆ ಎಂದರು.

ಸಚಿವರ ಒತ್ತಡಕ್ಕೆ ಮಣಿದು ಅಭಿವೃದ್ದಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಹಣ ವರ್ಗಾವಣೆಗೊಳಿ ಸಿದ ಪರಿಣಾಮ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವುದು ಸ್ಪಷ್ಟವಾಗಿದ್ದು, ಅಧೀಕ್ಷಕರ ಸಾವಿನ ಪ್ರಕರಣದಲ್ಲಿ ಸಚಿವರ ಪ್ರಚೋದನೆಯಿದ್ದ ಹಿನ್ನೆಲೆಯಲ್ಲಿ ಕೂಡಲೇ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ತಿಳಿಸಿದರು.

ಹಣ ವರ್ಗಾವಣೆ ದಂಧೆಯಲ್ಲಿ ಮೌಖಿಕ ಆದೇಶ ನೀಡಿರುವ ಸಚಿವರೇ ಒಪ್ಪಿಗೆ ನೀಡಿದ್ದರೂ ಮುಖ್ಯ ಮಂತ್ರಿ ಸೇರಿದಂತೆ ಸಚಿವ ಸಂಪುಟವು ರಕ್ಷಣೆಗೆ ನಿಂತಿರುವುದು ಕಾಂಗ್ರೆಸ್ ಸರ್ಕಾರದ ನೈತಿಕತೆಗೆ ಹಿಡಿದ ಕೈಗನ್ನಡಿಯಾಗಿದೆ. ಹೀಗಾಗಿ ತಕ್ಷಣವೇ ಸಚಿವರನ್ನು ವಜಾಗೊಳಿಸಿದಂತೆ ಸರ್ಕಾರವನ್ನು ವಜಾಗೊಳಿಸಬೇಕು ಎಂದು ತಿಳಿಸಿದರು.

Investigate the illegality of Valmiki Corporation and sack the government

About Author

Leave a Reply

Your email address will not be published. Required fields are marked *

You may have missed