September 19, 2024

ಮಾನಸಿಕ ಒತ್ತಡ ನಿವಾರಣೆಗೆ ಯೋಗಾಭ್ಯಾಸ ಸಹಕಾರಿ

0
ಅಂತರಾಷ್ಟ್ರೀ ಯ ಯೋಗ ದಿನಾಚರಣೆ ಪ್ರಯುಕ್ತ ಯೋಗೋತ್ಸವ ತರಬೇತಿ ಕಾರ್ಯಕ್ರಮ

ಅಂತರಾಷ್ಟ್ರೀ ಯ ಯೋಗ ದಿನಾಚರಣೆ ಪ್ರಯುಕ್ತ ಯೋಗೋತ್ಸವ ತರಬೇತಿ ಕಾರ್ಯಕ್ರಮ

ಚಿಕ್ಕಮಗಳೂರು: ಶಾರೀರಿಕ ಹಾಗೂ ಮಾನಸಿಕ ಒತ್ತಡ ನಿವಾರಣೆಗಾಗಿ ಯೋಗ ಅತ್ಯ ಂತ ಸಹಕಾರಿ. ದಿನದ ಕೆಲವು ಸಮಯವನ್ನು ಯೋಗಕ್ಕೆ ಮುಡಿಪಿಟ್ಟರೆ ಆರೋಗ್ಯಪೂರ್ಣ ಬದುಕು ರೂಪಿ ಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಮಂಗಳಾ ಹೆಚ್.ಡಿ.ತಮ್ಮಯ್ಯ ಹೇಳಿದರು.

ನಗರದ ಬಸವನಹಳ್ಳಿ ಸಮೀಪದ ಬ್ರಹ್ಮಾಕುಮಾರೀಸ್ ಸಂಸ್ಥೆಯಲ್ಲಿ ಜಿಲ್ಲಾಡಳಿತ, ಜಿ.ಪಂ. ಆಯುಷ್ ಇಲಾಖೆ ಹಾಗೂ ವಿಶ್ವ ಯೋಗ ದಿನಾಚರಣಾ ಸಮಿತಿ ಸಹಯೋಗದಲ್ಲಿ ಏರ್ಪಡಿಸಿದ್ದ ೧೦ನೇ ಅಂತರಾಷ್ಟ್ರೀ ಯ ಯೋಗ ದಿನಾಚರಣೆ ಪ್ರಯುಕ್ತ ಯೋಗೋತ್ಸವ ತರಬೇತಿ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ಆಹಾರ ಪದ್ಧತಿ, ಒತ್ತಡದ ಜೀವನವು ಮನುಷ್ಯನ ಆರೋಗ್ಯವನ್ನು ಹದಗೆಡಿಸುತ್ತಿದೆ. ವ್ಯಾಯಾಮದ ಆಸಕ್ತಿ ಹೊಂದಿರದ ಮಾನವರು ಅನಾರೋಗ್ಯವನ್ನು ಬರಮಾಡಿಕೊಳ್ಳುತ್ತಾರೆ. ಮುಕ್ತರಾಗಲು ಯೋಗಾಭ್ಯಾಸ ಮುಖ್ಯ. ಕೆಲವು ಗಂಟೆಗಳ ಕಾಲ ಯೋಗಾಸಾನದಲ್ಲಿ ತೊಡಗಿಸಿಕೊಂಡರೆ ನೆಮ್ಮದಿ ಜೀವನ ಗಳಿಸಿಕೊಳ್ಳಬಹುದು ಎಂದು ಕಿವಿಮಾತು ಹೇಳಿದರು.

ಯೋಗಾಸನವನ್ನು ಬದುಕಿನ ಒಂದು ಭಾಗವಾಗಿ ಅಳವಡಿಸಿಕೊಂಡ ವ್ಯಕ್ತಿಗಳು ಆರೋಗ್ಯಯುತ ಶರೀರ ಹೊಂದುವ ಜೊತೆಗೆ ಆಯುಷ್ಯನ್ನು ವೃದ್ದಿಸಿಕೊಂಡಿರುವ ಅನೇಕ ಉದಾಹರಣೆಗಳಿವೆ. ಹೀಗಾಗಿ ಪ್ರತಿ ಯೊಬ್ಬರು ಯೋಗಾಭ್ಯಾಸದ ಪ್ರಮುಖ ಆಸನಗಳನ್ನು ಅಭ್ಯಾಸಿಸುವ ಮೂಲಕ ನಿರೋಗಿಯಾಗಿ ಬದುಕಲು ಮುಂದಾಗಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆಯುಷ್ ಇಲಾಖೆ ಅಧಿಕಾರಿ ಡಾ|| ಎಸ್.ಗೀತಾ ಜೂನ್ ೨೧ ರಂದು ಯೋಗ ದಿನ ಆಚರಣೆ ಸಂಬಂಧ ಯೋಗಪಟುಗಳಿಗೆ ಬ್ರಹ್ಮಕುಮಾರೀಸ್ ಸಂಸ್ಥೆಯಲ್ಲಿ ಹತ್ತನೇ ಪೂರ್ವಭಾವಿ ಯೋಗೋತ್ಸವ ಕಾರ್ಯಕ್ರಮವನ್ನು ಆಯೋಜಿಸಿ ತರಬೇತಿ ನೀಡಲಾಗುತ್ತಿದೆ ಎಂದರು.

ಅಂಗನವಾಡಿ ಕಾರ್ಯಕರ್ತರಿಗೆ, ಸ್ವಸಹಾಯ ಸಂಘದ ಸದಸ್ಯರುಗಳಿಗೆ ನಿಗಧಿಪಡಿಸಿದ ಒಂದು ದಿನ ಏಕಕಾಲದಲ್ಲಿ ಯೋಗಾಭ್ಯಾಸದ ಜೀವನಶೈಲಿ ಕುರಿತು ಮಾಹಿತಿ ನೀಡುವ ಕಾರ್ಯಕ್ರಮ ಆಯೋಜಿಸಿದೆ. ಇಲಾಖೆಯಿಂದ ಯೋಗ ಶಿಕ್ಷಕರ, ಆಯಷ್ ತಜ್ಞರ ನಿಯೋಜನೆ, ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಪ್ರಮಾಣಪತ್ರ ಸೇರಿದಂತೆ ಅನೇಕ ಸೌಲಭ್ಯವನ್ನು ಒದಗಿಸಲಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ರಹ್ಮಕುಮಾರೀಸ್ ಸಂಸ್ಥೆ ಜಿಲ್ಲಾ ಸಂಚಾಲಕ ಭಾಗ್ಯ ದೇಹದಲ್ಲಿನ ರಕ್ತ ಸಂಚಲನ, ಬೆನ್ನು ನೋವು, ಬೊಜ್ಜು ಕರಗುವಿಕೆ, ದೇಹದ ಆಯಾಸ ತಗ್ಗುವಿಕೆ ಸೇರಿದಂತೆ ನಾನಾ ರೀತಿಯ ಯೋಗಾಸನಗಳು ಹಾಗೂ ಪ್ರಾಣಾಯಾಮ ತರಬೇತಿ ನೀಡುತ್ತಿದ್ದು, ಆರೋಗ್ಯಕ್ಕೆ ಹೆಚ್ಚಿನ ಉಪಯೋಗವಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಯೋಗಪಟುಗಳಾದ ನಾರಾಯಣಪೂಜಾರ್, ಗಿರೀಶ್, ಡಾ.ಭಾಸ್ಕರ್, ಪವಿತ್ರ, ವಿಜಯ ಹಾಗೂ ಯೋಗ ಸದಸ್ಯರುಗಳು ಉಪಸ್ಥಿತರಿದ್ದರು.

Yoga is helpful in relieving mental stress

About Author

Leave a Reply

Your email address will not be published. Required fields are marked *

You may have missed