September 19, 2024

ಸಾಧನೆಯ ಮೆಟ್ಟಿಲು ಏರುವ ತವಕ ನಮ್ಮಲ್ಲಿರಬೇಕು

0
ಬ್ರಹ್ಮಕುಮಾರೀಸ್ ಸಂಸ್ಥೆಯಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪಿಯುಸಿ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ

ಬ್ರಹ್ಮಕುಮಾರೀಸ್ ಸಂಸ್ಥೆಯಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪಿಯುಸಿ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ

ಚಿಕ್ಕಮಗಳೂರು: ಸಾಧನೆಯ ಹಾದಿ ಸುಗಮವಲ್ಲ. ಛಲವಿದ್ದವರು ಮಾತ್ರ ಹಾದಿಯ ಲ್ಲಿ ಸಾಗಲು ಸಾಧ್ಯ. ಆ ರೀತಿ ವಿದ್ಯಾರ್ಥಿಗಳು ಅಪೇಕ್ಷೆ ಪಟ್ಟಂತ ಯಶಸ್ಸನ್ನು ಪಡೆಯಲು ಸಾಧನೆಯ ಹಾದಿ ಯಲ್ಲಿ ಸಾಗಬೇಕಾಗಿದೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

ನಗರದ ಬಸವನಹಳ್ಳಿ ಸಮೀಪ ಬ್ರಹ್ಮಕುಮಾರೀಸ್ ಸಂಸ್ಥೆಯಲ್ಲಿ ಆಧ್ಯಾತ್ಮಿಕ ಸಶಕ್ತಿಕರಣದಿಂದ ಸ್ವಚ್ಚ, ಸ್ವಾಸ್ಥ್ಯ ಸಮಾಜ ಉದ್ಘಾಟನೆ ಹಾಗೂ ೨೦೨೩-೨೪ನೇ ಸಾಲಿನ ಎಸ್.ಎಸ್.ಎಲ್.ಸಿ. ಪಿಯುಸಿ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಭೆ ಎಲ್ಲರಲ್ಲಿದೆ, ಆಧುನಿಕತೆ ಬೆಳೆದಂತೆ ಸ್ಫರ್ಧೆಗಳು ಹೆಚ್ಚಿದೆ. ಹೀಗಾಗಿ ಇವರೆಡರ ನಡುವೆ ಸಾ ಮಾಜಿಕ ಜವಾಬ್ದಾರಿಯ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಹೋದರೆ ಮಾತ್ರ ಯಶಸ್ಸು ನಿಶ್ಚಿತ ಎಂದ ಅವರು ಮಕ್ಕಳು ವಿದ್ಯಾಕ್ಷೇತ್ರದಲ್ಲಿ ಸಾಧನೆಗೈಯಲು ಹೆಚ್ಚು ಶ್ರಮವಹಿಸಬೇಕು ಎಂದು ತಿಳಿಸಿದರು.

ವೃತ್ತಿಯಲ್ಲಿ ಶ್ರದ್ದೆ, ನಿಷ್ಟೆ ಹಾಗೂ ನೈತಿಕ ಮೌಲ್ಯ ಹೊಂದಿರಬೇಕು. ಮರಳಿ ಯತ್ನಿಸು ಎಂಬ ನಾಣ್ನು ಡಿಯಂತೆ ನಿರಂತರ ಪ್ರಯತ್ನದಿಂದ ಮಾತ್ರ ಯಶಸ್ಸು ಸಿಗಬಲ್ಲದು. ಅದರ ಜೊತೆಗೆ ಜೀವನದ ಸವಾಲನ್ನು ಎದುರಿಸುವ ಶಕ್ತಿ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಸಾಧನೆಯ ಮೆಟ್ಟಿಲನ್ನು ಏರುವ ತುಡಿತ ನಮ್ಮಲ್ಲಿ ರಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಓ ಬಿ.ಗೋಪಾಲಕೃಷ್ಣ ಮಾತನಾಡಿ ಸಮಾಜದಲ್ಲಿ ಒಂದು ಹಂತದಲ್ಲಿ ವಿದ್ಯಾ ರ್ಥಿಗಳು ಬೆಳೆಯಲು ಶಿಕ್ಷಣ ಬಹುಮುಖ್ಯ. ಬದುಕಿನಲ್ಲಿ ಹಲವಾರು ಅಡೆತಡೆಗಳು ಎದುರಾಗಲಿದೆ. ಎಲ್ಲವ ನ್ನೂ ಮೀರಿ ನಿಂತು ಶ್ರಮವಹಿಸಿ ವಿದ್ಯಾಭ್ಯಾಸದಲ್ಲಿ ಉನ್ನತ ಸ್ಥಾನ ಗಳಿಸಿದರೆ ಯಶಸ್ವಿ ವ್ಯಕ್ತಿಯಾಗಿ ರೂಪು ಗೊಳ್ಳಲು ಸಾಧ್ಯ ಎಂದರು.

ಪೋಷಕರು ವೈದ್ಯ ಅಥವಾ ಇಂಜಿನಿಯರ್‌ಗಳು ಆಗಬೇಕೆಂಬ ಆಸೆಗಳ ಮೂಟೆ ಮಕ್ಕಳಿಗೆ ಏರಬಾ ರದು. ಆಸಕ್ತಿ ಹೊಂದಿರುವ ಕ್ಷೇತ್ರದಲ್ಲಿ ಪ್ರೋತ್ಸಾಹಿಸಿದರೆ ನಾಗರೀಕ ಸಮಾಜದಲ್ಲಿ ಉತ್ತಮರಾಗಬಹುದು. ಇತ್ತೀಚೆಗೆ ಸರ್ಕಾರ ನೌಕರರಿಗಿಂತ ಹೆಚ್ಚು ದುಡಿಮೆಯನ್ನು ಸ್ವಂತ ವ್ಯಾಪಾರದಲ್ಲಿ ಕಾಣುತ್ತಿರುವುದು ನಮ್ಮ ಮುಂದಿದೆ ಎಂದರು.

ಮನಸ್ಸು, ಬುದ್ದಿ ಹಾಗೂ ಮೆದುಳನ್ನು ಆಧ್ಯಾತ್ಮಿಕ ಸಶಕ್ತಿಕರಣದಿಂದ ಸ್ವಚ್ಚವಾಗಿಡಬಹುದು. ಬಾಲ್ಯ ದಿಂದಲೇ ಮಕ್ಕಳು ಆಧ್ಮಾತ್ಮಿಕ ಅಭಿರುಚಿ ಬೆಳೆಸಿಕೊಂಡಲ್ಲಿ ಮುಂದಿನ ಉನ್ನತ ವ್ಯಾಸಂಗಕ್ಕೆ ಬಹಳಷ್ಟು ಸಹ ಕಾರಿ ಎಂದ ಅವರು ಮನಸ್ಸು ಹತೋಟಿ ಹಾಗೂ ಗೊಂದಲಗಳನ್ನು ನಿವಾರಿಸಲು ಆಧ್ಯಾತ್ಮಿಕ ಚಿಂತನೆ ಅನು ಕೂಲವಾಗಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ರಹ್ಮಕುಮಾರೀಸ್ ಸಂಸ್ಥೆ ಜಿಲ್ಲಾ ಸಂಚಾಲಕ ಭಾಗ್ಯಕ್ಕ ವಿದ್ಯಾರ್ಥಿದೆಸೆಯಲ್ಲಿ ಕೇವಲ ಅಂಕಗಳಿಗೆ ಮಾತ್ರ ಸೀಮಿತರಾಗದೇ ಮಾನವೀಯ ಹಾಗೂ ನೈತಿಕ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಸಮಾಜದಲ್ಲಿ ಸಂಕಲ್ಪ ಶಕ್ತಿ ಗ್ರಹಿಸಿದರೆ ಸಾಧನೆ ಮಾಡಬಹುದು ಎಂದ ಅವರು ಕೇವಲ ಪುಸ್ತಕದ ಹುಳುವಾಗದೇ ಸಾಮಾಜಿಕ ಹಾಗೂ ಆಧ್ಮಾತ್ಮಿಕ ಜ್ಞಾನ ಬೆಳೆಸಿಕೊಳ್ಳಬೇಕು ಎಂ ದರು.

ಪ್ರಸ್ತುತ ದಿನಗಳಲ್ಲಿ ಹಲವಾರು ಯುವಕರು ವಿದ್ಯಾವಂತರಾಗಿ ಕೆಲಸವಿಲ್ಲದೇ ಮನೆಯಲ್ಲೇ ಕೂರುವ ಂತಾಗಿದೆ. ಹಾಗಾಗಿ ಶಿಕ್ಷಣದ ಜೊತೆಗೆ ಬದುಕಿನ ಮೌಲ್ಯ ಅಳವಡಿಸಿಕೊಂಡು ಮುನ್ನೆಡೆದರೆ ಯಶಸ್ಸು ತಾನಾ ಗಿಯೇ ಲಭಿಸಲು ಸಾಧ್ಯ. ವೃತ್ತಿಯಲ್ಲಿ ಕಷ್ಟ-ಸುಖ ಸಮಾನವಾಗಿ ತೆಗೆದುಕೊಂಡಲ್ಲಿ ಆದರ್ಶಪ್ರಾಯವಾಗಿ ಬೆಳವಣಿಗೆ ಹೊಂದಲು ಸಹಕಾರಿ ಎಂದರು.

ಇದೇ ವೇಳೆ ಚಿಕ್ಕಮಗಳೂರು ತಾಲ್ಲೂಕಿನ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿಯಲ್ಲಿ ಅತಿಹೆಚ್ಚು ಗಳಿಸಿದ ೩೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶೇ.೧೦೦ ಫಲಿತಾಂಶ ಪಡೆದ ಶಾಲೆಗ ಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಲೆಪ್ಟಿನೆಂಟ್ ಜನರಲ್ ಬಿ.ಹೆಚ್.ರಾಜು, ಜಿಲ್ಲಾ ಕಾರಾಗೃಹ ಅಧೀಕ್ಷಕ ಎಸ್.ಎಸ್. ಮೇಟಿ, ಎಸ್.ಬಿ.ಐ ಹಿರಿಯ ವ್ಯವಸ್ಥಾಪಕಿ ಕೃಷ್ಣ ಕಿಶೋರ್, ಜ್ಞಾನರಶ್ಮಿ ಶಾಲೆ ಸಂಸ್ಥಾಪಕ ನಂದಕುಮಾರ್, ಶಿಕ್ಷಕ ಚಂದ್ರಶೇಖರ್, ಹೇಮಾವತಿ ಹಾಗೂ ವಿದ್ಯಾರ್ಥಿಗಳು, ಪೋಷಕರು ಮತ್ತಿತರರು ಉಪಸ್ಥಿತರಿದ್ದರು.

Pratibha Puraskar for SSLC and PUC students in Brahma Kumaris Institute

About Author

Leave a Reply

Your email address will not be published. Required fields are marked *

You may have missed