September 19, 2024

ಪರಿಸರ ಸಂರಕ್ಷಣೆಗೆ ಮುಂದಾಗದಿದ್ದಲ್ಲಿ ದುರಂತಗಳು ಸಂಭವ

0
ನಗರದ ಫ್ರೈಡ್ ಯುರೋ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚಾರಣೆ

ನಗರದ ಫ್ರೈಡ್ ಯುರೋ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚಾರಣೆ

ಚಿಕ್ಕಮಗಳೂರು: ಸಮಾಜದ ನಾಗರೀಕರು ಮತ್ತು ಮಕ್ಕಳು ಪರಿಸರ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಸುತ್ತಮುತ್ತಲು ಪರಿಸರಕ್ಕೆ ಪೂರಕವಾಗಿರುವ ಸಸಿಗಳನ್ನು ಬೆಳೆಸುವ ಮೂಲಕ ಪ್ರಕೃತಿ ರಕ್ಷಣೆಗೆ ಮುಂದಾಗಬೇಕು ಎಂದು ಬ್ರಹ್ಮ ಕುಮಾರಿ ಭಾಗ್ಯಲಕ್ಷ್ಮೀ ತಿಳಿಸಿದರು.

ನಗರದ ಫ್ರೈಡ್ ಯುರೋ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚಾರಣೆ ಅಂಗವಾಗಿ ಅಣುವ್ರತ್ ಸಮಿತಿ ವತಿಯಿಂದ ಸಸಿಗಳನ್ನು ನೆಟ್ಟು ಮಾತನಾಡಿದರು ಮುಂದಿನ ಜನಾಂಗದ ಶ್ರೇಯೋಭಿವೃದ್ದಿಗೆ ಪರಿಸರನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ, ಆ ನಿಟ್ಟಿನಲ್ಲಿ ಸಮಾಜ ನಾಗರೀಕರು ತಮ್ಮ ಸುತ್ತಮುತ್ತಲಿನ ಸ್ಥಳಗಳಲ್ಲಿ ಸಸಿಗಳನ್ನು ನೆಡುವ ಮೂಲಕ ಹೆಮ್ಮರವಾಗಿ ಬೆಳೆಸಿದರೆ ಶುದ್ಧ ಗಾಳಿ ಹಾಗೂ ನೆರಳಿನ ಆಸರೆ ಸಿಕ್ಕಂತಾಗುತ್ತದೆ ಎಂದ ಅವರು ಪ್ರತಿಯೊಬ್ಬರು ಇಂದಿನಿಂದಲೇ ಈ ನಿರ್ಧಾರ ವನ್ನು ಕೈಗೊಳ್ಳಬೇಕು ಎಂದು ಸಲಹೆ ಮಾಡಿದರು.

ಅಣುವ್ರತ್ ಸಮಿತಿಯ ಮಂಜುಳಾಬನ್ಸಾಲಿ ಮಾತನಾಡಿ ೧೯೭೪ರಲ್ಲಿ ವಿಶ್ವ ಪರಿಸರ ದಿನಾಚರಣೆ ಆರಂಭವಾಗಿ ಇಂದಿನವರೆಗೂ ಆಚರಿಸಲಾಗುತ್ತಿದೆ. ಪರಿಸರ ಆಚರಣೆ ಯ ಮೂಲ ಉದ್ದೇಶವೆಂದರೆ ಮಾಲಿನ್ಯ ತಡೆಗಟ್ಟಿ ಸಮಾಜದಲ್ಲಿ ಸ್ವಚ್ಚಂಧ ಪರಿಸರವನ್ನು ಉಳಿಸುವುದು ಎಂದರು.

ಮನುಷ್ಯ ಕುಲ, ಪ್ರಾಣಿ ಕುಲ ನೆಮ್ಮದಿಯ ಜೀವನವನ್ನು ನಡೆಸಬೇಕಾದರೆ ವನಗಳ ಸಂರಕ್ಷಣೆ ಅಗತ್ಯವಾಗಿದ್ದು, ಭಾರತ ಸರ್ಕಾರವು ಸಹ ಗಿಡಮರಗಳನ್ನು ಬೆಳೆಸುವಲ್ಲಿ ಶ್ರಮಿಸುತ್ತಿದ್ದು, ಅಣುವ್ರತದ ಉದ್ದೇಶವು ಸಹ ಪರ್ಯಾವರಣ, ಮೈತ್ರಿ, ನಶ ಮುಕ್ತಿ, ಅಹಿಂಸೆ ಮತ್ತು ಸದ್ಭಾವನೆಯ ಚೇತನವನ್ನು ಜಾಗೃತಗೊಳಿಸುವುದಾಗಿದೆ, ಇದರಿಂದ ಪರ್ಯಾವರಣ ಸುರಕ್ಷಿತವಾಗಬಲ್ಲದು ಹಾಗೂ ಮುಂದಿನ ಪೀಳಿಗೆಗೆ ಸ್ವಸ್ಥ ಸಮಾಜವನ್ನು ನೀಡಲು ಸಹಾಯವಾಗಬಲ್ಲದು ಎಂದರು.

ಜೈನ್ ಸಂಘದ ಅಧ್ಯಕ್ಷ ಕಾಂತಿಲಾಲ್ ಜೈನ್ ಮಾತನಾಡಿ ಪರಿಸದ ಬಗ್ಗೆ ಹೆಚ್ಚು ಕಾಳಜಿಯನ್ನು ಹೊಂದಿರುವ ಅಣುವ್ರತ್ ಸಮಿತಿಯು ಮುಂದಿನ ಯುವ ಪೀಳಿಗೆಗೆ ಒಳ್ಳೆಯ ವಾತಾವರಣದ ಜೊತೆಗೆ ಪರಿಶುದ್ದ ಗಾಳಿ ಸಿಗಬೇಕೆಂಬ ಉದ್ದೇಶದಿಂದ ಪರಿಸದ ಬಗ್ಗೆ ಕಾಳಜಿಯನ್ನು ವಹಿಸಲಾಗುತ್ತಿದ್ದು ಅದೇ ರೀತಿಯಲ್ಲಿ ಎಲ್ಲರೂ ಕಾಳಜಿ ವಹಿಸಿ ಗಿಡಮರಗಳನ್ನು ಉಳಿಸಿ ಬೆಳೆಸುವಂತೆ ತಿಳಿಸಿದರು.

ಅಖಿಲ ಕರ್ನಾಟಕ ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ಚೈತ್ರ.ಎಸ್.ಗೌಡ ಮಾತನಾಡಿ ಅಣುವ್ರತ್ ಸಮಿತಿಯು ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದು, ಅದೇ ರೀತಿಯಲ್ಲಿ ಪರಿಸರ ದಿನಾಚಾರಣೆಯ ಅಂಗವಾಗಿ ೫ ಸಾವಿರ ಸಸಿಗಳನ್ನು ಯಶಸ್ವಿಯಾಗಿ ನೆಡುವ ಮೂಲಕ ಅಭಿಯಾನ ಪ್ರಾರಂಭ ಮಾಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ಮಂಜುನಾಥ್, ಅಣುವ್ರತ್ ಸಮಿತಿ ಕಾರ್ಯದರ್ಶಿ ಗೌತಮ್ ಆಚಾ, ಸಭಾಧ್ಯಕ್ಷ ಮಹೇಂದ್ರ ದೋಸಿ, ಕಿಶೋರ್, ಮಾಜಿ ಅಧ್ಯಕ್ಷ ಲಾಲ್‌ಚಂದ್ ಬನ್ಸಾಲ್, ಸುರೇಂದ್ರ, ಸುರೇಶ್ ಆಚಾ, ಸಜ್ಜನ್‌ರಾಜ್, ಫಿರ್ಗಲ್, ಮಧನ್‌ಚಂದ್ ಗಾಧಿಯಾ, ಗುಣವತಿ, ಚಂದ್ರಬಾಯಿ, ಫ್ಯಾನ್ಸಿ ಆಚಾ, ಕೌಶಲ್ಯ ಬಾಯಿ ಉಪಸ್ಥಿತರಿದ್ದರು.

Disasters happen if we do not take action to protect the environment

About Author

Leave a Reply

Your email address will not be published. Required fields are marked *

You may have missed