September 19, 2024

ಚಾರ್ಮಾಡಿ ಘಾಟಿಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್‌ಗೆ ಏಕಾಏಕಿ ಅಡ್ಡ ಬಂದ ಆನೆ

0
ಚಾರ್ಮಾಡಿ ಘಾಟಿಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್‌ಗೆ ಏಕಾಏಕಿ ಅಡ್ಡ ಬಂದ ಆನೆ

ಚಾರ್ಮಾಡಿ ಘಾಟಿಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್‌ಗೆ ಏಕಾಏಕಿ ಅಡ್ಡ ಬಂದ ಆನೆ

ಚಿಕ್ಕಮಗಳೂರು: ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಸಲಗ ಗೋಚರಿಸಿದೆ. ಕಳೆದ ರಾತ್ರಿ ಪ್ರಯಾಣಿಕರಿಂದ ತುಂಬಿ ತುಳುಕುತ್ತ ಚಲಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್‌ಗೆ ಏಕಾಏಕಿ ಅಡ್ಡ ಬಂದು ನಿಂತಿದೆ.

ನಿದ್ರೆಯ ಮಂಪರಿನಲ್ಲಿದ್ದವರೆಲ್ಲಾ ಗಾಬರಿಯಿಂದ ಎದ್ದು ಕಾಡಾನೆ ನೋಡುತ್ತಾ ಭಯದಲ್ಲೇ ಕಾಲ ಕಳೆಯುವಂತಾಗಿತ್ತು, ಅಂದ ಹಾಗೆ ಇದು ಅದೇ ಒಂಟಿ ಸಲಗ ಚಾರ್ಮಾಡಿ ಘಾಟಿಯಲ್ಲಿ ಮತ್ತರ ಸರ್ಕಾರಿ ಬಸ್ಸಿಗೆ ಕಾಡಾನೆ ಅಡ್ಡ ಬಂದಿದೆ. ಸರ್ಕಾರಿ ಬಸ್ಸಿನ ಪಕ್ಕದಲ್ಲೇ ಕಾಡಾನೆ ಕಳೆದ ರಾತ್ರಿ ಓಡಾಡಿದೆ.

ಕಾಡಾನೆ ಕಂಡು ಬಸ್ ನ ಒಳಗೆ ಇದ್ದ ಪ್ರಯಾಣಿಕರು ಗಾಬರಿಯಾಗಿದ್ದಾರೆ ಚಾರ್ಮಾಡಿ ಘಾಟಿಯ ೭ ಮತ್ತು ೮ನೇ ತಿರುವಿನಲ್ಲಿ ಘಟನೆ ನಡೆದಿದೆ ಸುಮಾರು ಅರ್ಧ ಗಂಟೆ ರಸ್ತೆಯಲ್ಲೇ ಒಂಟಿ ಸಲಗ ನಿಂತಲ್ಲೇ ನಿಂತಿದ್ದು ಆನೆಯನ್ನ ಕಂಡು ತಕ್ಷಣ ಬಸ್ ಅನ್ನು ಚಾಲಕ ನಿಲ್ಲಿಸಿದ್ದಾನೆ.

ಆನೆ ಸಂಚಾರ ಹಿನ್ನೆಲೆಯಲ್ಲಿ ಘಾಟಿಯಲ್ಲಿ ಎರಡು ಕಿ.ಮೀ. ನಷ್ಟು ಟ್ರಾಫಿಕ್ ಜಾಮ್ ಉಂಟಾಗಿತ್ತು ಚಿಕ್ಕಮಗಳೂರು ಮಂಗಳೂರು ಎರಡೂ ಕಡೆಯಲ್ಲೂ ಟ್ರಾಫಿಕ್ ಜಾಮ್ ಆಗಿದ್ದು ಅರ್ಧ ಗಂಟೆ ಬಳಿಕ ಅರಣ್ಯಕ್ಕೆ ಇಳಿದ ಒಂಟಿ ಸಲಗ ಹೋಗಿದೆ.

ಇದು ಅದೇ ಕಾಡಾನೆ ಕಳೆದ ಎರಡು ತಿಂಗಳಿಂದಲೂ ಚಾರ್ಮಾಡಿಯಲ್ಲೇ ಇರೋ ಒಂಟಿ ಸಲಗವಾಗಿದೆ. ಹಗಲಿರುಳೆನ್ನದೇ ಚಾರ್ಮಾಡಿ ರಸ್ತೆಯಲ್ಲಿ ಸಂಚಾರ ಮಾಡುತ್ತಾ ಚಾರ್ಮಾಡಿ ಘಾಟ್ ತಪ್ಪಲಿನ ಗ್ರಾಮದೊಳಕ್ಕೂ ಬಂದು ಉಪಟಳ ನೀಡಿತ್ತು, ಹೆಚ್ಚುತ್ತಿರುವ ಇದರ ಕಾಟ ದಿಂದ ಈ ಕಾಡಾನೆಯನ್ನು ಶೀಘ್ರವೇ ಸ್ಥಳಾಂತರಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಅಲ್ಲಲ್ಲಿ ಕಾಡಾನೆ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದೆ.

An elephant suddenly came across a KSRTC bus at Charmadi ghat

 

 

About Author

Leave a Reply

Your email address will not be published. Required fields are marked *

You may have missed