September 19, 2024

ಜೂ.15ಕ್ಕೆ ‘ನಮ್ಮ ಹಾಡು ನಮ್ಮದು’ ಚಿತ್ರಗೀತೆಗಳ ಗಾಯನ ಕಾರ್ಯಕ್ರಮ

0
ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಸುದ್ದಿಗೋಷ್ಠಿ

ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಸುದ್ದಿಗೋಷ್ಠಿ

ಚಿಕ್ಕಮಗಳೂರು: ನಗರದ ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಹಾಗೂ ಯುರೇಕಾ ಅಕಾಡೆಮಿ ಇವರ ಸಹಯೋಗದಲ್ಲಿ ಪೂರ್ವಿ ಗಾನಯಾನ-೧೦೦ ವಿಶೇಷ ಸಂಚಿಕೆಯಡಿ ಜೂ.೧೫ ಮತ್ತು ೧೬ ರಂದು ಕುವೆಂಪು ಕಲಾ ಮಂದಿರದಲ್ಲಿ ‘ನಮ್ಮ ಹಾಡು ನಮ್ಮದು’ ಚಿತ್ರಗೀತೆಗಳ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ.

ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಯುರೇಕಾ ಅಕಾಡೆಮಿ ಸಂಸ್ಥಾಪಕ ದೀಪಕ್ ದೊಡ್ಡಯ್ಯ ಜೂ.೧೫ ರಂದು ಶನಿವಾರ ಸುಗಮ ಸಂಗೀತ ಕ್ಷೇತ್ರದ ಆಚಾರ್ಯ ತ್ರಯರಾದ ಪಿ.ಕಾಳಿಂಗರಾವ್, ಮೈಸೂರು ಅನಂತಸ್ವಾಮಿ ಹಾಗೂ ಸಿ.ಅಶ್ವಥ್ ರವರ ಸಂಯೋಜನೆಯ ಭಾವಗೀತೆಗಳ ಗಾಯನ ನಡೆಯಲಿದೆ ಎಂದರು.

ಜೂ.೧೬ ರಂದು ಭಾನುವಾರ ಸಂಜೆ ೫:೩೦ ಕ್ಕೆ ಕನ್ನಡ ಚಿತ್ರರಂಗದ ಹಿರಿಯ ನಟ ರಮೇಶ್ ಭಟ್ ಅವರಿಗೆ ಅಭಿನಂದನಾ ಸಮಾರಂಭ ನಡೆಯಲಿದ್ದು, ಇದರ ಜೊತೆಗೆ ನಾಡಿನ ಪ್ರಮುಖ ವಾಹಿನಿಯ ಗಾಯಕ-ಗಾಯಕಿಯರಾದ ಜೀ ಟಿವಿ ಸರಿಗಮಪ ಜೂರಿ ಖ್ಯಾತಿಯ ರಮ್ಯ ಪ್ರಸನ್ನ, ಮಾಲಿನಿ ಕೇಶವಪ್ರಸಾದ್ ಇವರು ಭಾಗವಹಿಸಲಿದ್ದಾರೆಂದು ಹೇಳಿದರು.

ಖ್ಯಾತ ಹಿನ್ನೆಲೆ ಗಾಯಕಿ ಶೃತಿ ಮಹೇಶ್, ಗಾಯಕ ಹಾಗೂ ಸಂಗೀತ ನಿರ್ದೇಶಕ ಮಹೇಶ್ ಪ್ರಿಯದರ್ಶನ್, ಎದೆ ತುಂಬಿ ಹಾಡುವೆನು ಖ್ಯಾತಿಯ ಸುರೇಖಾ ಹೆಗ್ಡೆ, ಪೂಜ್ಯ ಸ್ಟಾರ್ ಸಿಂಗರ್ ಖ್ಯಾತಿಯ ಹಾಸನದ ಚೇತನ್ ರಾಮ್, ಚನ್ನರಾಯಪಟ್ಟಣದ ಮಂಜುನಾಥ್, ಬೆಂಗಳೂರಿನ ಅನುರಾಧ ಭಟ್, ಶ್ವೇತಾ ಭಾರದ್ವಾಜ್ ಇವರ ಜೊತೆಗೆ ನಮ್ಮ ಪೂರ್ವಿ ಸಂಸ್ಥೆಯ ಗಾಯಕರುಗಳಾದ ರಾಯ ನಾಯ್ಕ್, ದರ್ಶನ್ ಪ್ರಣಮ್ಯ, ಪಂಚಮಿ ಚಂದ್ರಶೇಖರ್, ಪೃಥ್ವಿ ಶ್ರೀ ಇವರೆಲ್ಲರು ಎಂ.ಎಸ್ ಸುಧೀರ್ ರವರ ಗಾಯನದ ಸಾಹಿತ್ಯದಲ್ಲಿ ಹಾಡಲಿದ್ದಾರೆ ಎಂದರು.

ಕಾರ್ಯಕ್ರಮವನ್ನು ಭಾವಗೀತೆಗಳ ಹಾಗೂ ಚಿತ್ರಗೀತೆಗಳ ವಿಶೇಷತೆಯೊಂದಿಗೆ ಪರಿಣಾಮಕಾರಿಯಾಗಿ ಸುಮಾ ಪ್ರಸಾದ್ ಮತ್ತು ರೂಪಾ ನಾಯ್ಕ್ ನಿರೂಪಿಸಲಿದ್ದಾರೆ ಎಂದ ಅವರು ಪೂರ್ವಿ ಗಾನಯಾನ-೧೦೦ ರ ಕಾರ್ಯಕ್ರಮಕ್ಕೆ ಸೇಂಟ್ ಮೇರೀಸ್ ಸಮೂಹ ಶಿಕ್ಷಣ ಸಂಸ್ಥೆಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸುಗಮ ಸಂಗೀತ ಗಂಗಾ, ಕರ್ನಾಟಕ ಸುಗಮ ಸಂಗೀತ ಪರಿಷತ್ ಘಟಕ, ಕಲ್ಕಟ್ಟೆ ಪುಸ್ತಕದ ಮನೆ, ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಹಾಗೂ ಲಯನ್ಸ್ ಸಂಸ್ಥೆ ಸಹಕಾರ ನೀಡಿದೆ ಎಂದು ಹೇಳಿದರು.

ಈ ಬಾರಿಯ ಪೂರ್ವಿ ನಾದೋಪಾಸನ ವಾರ್ಷಿಕ ಪ್ರಶಸ್ತಿಯನ್ನು ಶಿವಮೊಗ್ಗದ ಖ್ಯಾತ ಗಾಯಕಿ ಶ್ರೀಮತಿ ಸುರೇಖಾ ಜಿ ಹೆಗ್ಡೆ ಅವರಿಗೆ ನೀಡಲಿದ್ದು, ಖ್ಯಾತಿ ಕೀಬೋರ್ಡ್ ವಾದಕ ಬೆಂಗಳೂರಿನ ಕೃಷ್ಣ ಉಡುಪರವರಿಗೆ ಅಭಿನಂದನೆ ಸಲ್ಲಿಸಲಾಗುವುದೆಂದು ತಿಳಿಸಿದರು.

ಜೂ.೧೫ ರಂದು ಸಂಜೆ ೫:೩೦ ಕ್ಕೆ ಪ್ರಾರಂಭವಾಗುವ ಭಾವಗೀತೆಗಳ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಹೆಚ್.ಡಿ ತಮ್ಮಯ್ಯ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ತಾವು ವಹಿಸಲಿದ್ದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ರವರು ಪೂರ್ವಿ ಗಾನಯಾನ-೧೦೦ ರ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಹಾಗೂ ಹಿರಿಯ ಪತ್ರಕರ್ತ ಸ.ಗಿರಿಜಾ ಶಂಕರ ಸಮಾರೋಪ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುಗಮ ಸಂಗೀತ ಗಂಗಾ ಅಧ್ಯಕ್ಷ ಡಾ. ಜೆ.ಪಿ ಕೃಷ್ಣೇಗೌಡ, ನಗರಸಭಾಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಎಂಇಎಸ್ ಕಾರ್ಯದರ್ಶಿ ಡಾ. ಡಿ.ಎಲ್ ವಿಜಯಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸಿ.ರಮೇಶ್, ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾ ಪ್ರಬಂಧಕ ಬಿ. ಅನಿಲ್ ಕುಮಾರ್, ಸುಗಮ ಸಂಗೀತ ಪರಿಷತ್ ಅಧ್ಯಕ್ಷ ಎಸ್.ಎಸ್ ವೆಂಕಟೇಶ್, ಸೇಂಟ್ ಮೇರೀಸ್ ಸಂಸ್ಥೆಯ ಜೆರಾಲ್ಡ್ ಲೋಬೋ, ಲಯನ್ಸ್ ಅಧ್ಯಕ್ಷ ಜಿ.ರಮೇಶ್, ಎಐಟಿ ಕುಲಸಚಿವ ಡಾ. ಸಿ.ಕೆ ಸುಬ್ಬರಾಯ, ಎ.ಬಿ ಸುದರ್ಶನ್, ಪಲ್ಲವಿ ರವಿ, ಎಂ.ಆರ್ ದೇವರಾಜ್ ಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆಂದು ಹೇಳಿದರು.

ಈ ಕಾರ್ಯಕ್ರಮಕ್ಕೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಸಂಗೀತಾಸಕ್ತರು ಸತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಪ್ರೋತ್ಸಾಹಿಸುವಂತೆ ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಎಂ.ಎಸ್ ಸುಧೀರ್, ರಾಯನಾಯ್ಕ, ಸುಮಾ ಪ್ರಸಾದ್, ರೂಪನಾಯ್ಕ, ಚೈತನ್ಯ ಉಪಸ್ಥಿತರಿದ್ದರು.

On June 15 ‘Namma Song Namdu’ is a singing program of movie songs

About Author

Leave a Reply

Your email address will not be published. Required fields are marked *

You may have missed