September 19, 2024

ವಿಕಲಚೇತನರಲ್ಲಿ ಸಾಧಿಸುವ ಅಪರೂಪ ಕಲೆ ಅಡಗಿದೆ

0
ಜಿಲ್ಲಾ ವಿಕಲಚೇತನ ಪತ್ತಿನ ಸಹಕಾರ ಸಂಘದ ವತಿಯಿಂದ ಎ.ಎನ್.ಮಹೇಶ್ ಗೆ ಅಭಿನಂದನೆ

ಜಿಲ್ಲಾ ವಿಕಲಚೇತನ ಪತ್ತಿನ ಸಹಕಾರ ಸಂಘದ ವತಿಯಿಂದ ಎ.ಎನ್.ಮಹೇಶ್ ಗೆ ಅಭಿನಂದನೆ

ಚಿಕ್ಕಮಗಳೂರು: ರಾಜ್ಯ ಪರಿಸರ ತಜ್ಞರ ಮೌಲ್ಯಮಾಪನ ಸಮಿತಿ ಅಧ್ಯಕ್ಷರಾಗಿ ನೇಮ ಕಗೊಂಡ ಎ.ಎನ್.ಮಹೇಶ್ ಅವರಿಗೆ ಜಿಲ್ಲಾ ವಿಕಲಚೇತನ ಪತ್ತಿನ ಸಹಕಾರ ಸಂಘದ ವತಿಯಿಂದ ಶುಕ್ರ ವಾರ ಸ್ಕೌಟ್ಸ್ ಭವನದಲ್ಲಿ ಅಭಿನಂದನೆ ಸಲ್ಲಿಸಲಾಯಿತು.

ಬಳಿಕ ಮಾತನಾಡಿದ ಎ.ಎನ್.ಮಹೇಶ್ ಸಮಾಜದಲ್ಲಿ ಕಾಯಕನಿಷ್ಟೆ ಇಲ್ಲದವರು ಸೋಮಾರಿಗಳು. ಶರೀರದಲ್ಲಿ ಅಂಗವೈಕಲ್ಯತೆ ಹೊಂದಿದ್ದರು ಸಾಧಿಸುವ ಛಲಬಿಡದೇ ನಿರಂತರ ಪ್ರಯತ್ನದಿಂದ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ವಿಕಲಚೇತನರು ಮನ್ನಣೆ ಗಳಿಸಿರುವ ಉದಾಹರಣೆಗಳಿವೆ ಎಂದು ತಿಳಿಸಿದರು.

ಪರರಿಗೆ ಹೊರೆಯಾಗದಂತೆ ಸ್ವಾಭಿಮಾನದಿಂದ ಜೀವನ ನಡೆಸುತ್ತಿರುವ ವಿಕಲಚೇತನರು ಸಮಾಜ ದ ಪ್ರತಿಯೊಬ್ಬರು ಮಾದರಿ ಎಂದ ಅವರು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಲು ಅಪರೂಪದ ಕಲೆ ಅಡ ಗಿದೆ. ಸರ್ಕಾರದಿಂದ ಹಲವಾರು ಸೌಕರ್ಯಗಳನ್ನು ವಿಕಲಚೇತನರಿಗೆ ಲಭ್ಯವಾಗಿ ಜೀವನ ಸುಧಾರಣೆಗೆ ಸಹಕಾರಿಯಾಗಿದೆ ಎಂದರು.

ಪಂಚಾಯಿತಿ ವ್ಯಾಪ್ತಿಗಳಲ್ಲಿ ವಿಕಲಚೇನರು ಇರುವ ಹಿನ್ನೆಲೆಯಲ್ಲಿ ಅಂತಹವರನ್ನು ಗುರುತಿಸಿ ಸಂಘಕ್ಕೆ ಸೇರ್ಪಡಿಸುತ್ತಿರುವುದು ಶ್ಲಾಘನೀಯ ಎಂದ ಅವರು ಅಂಗನ್ಯೂನ್ಯತೆ ಹೊರತುಪಡಿಸಿದರೆ ವಿಶಿಷ್ಟ ಶಕ್ತಿ ಹೊಂ ದಿರುವ ಅವರಿಗೆ ಆಸಕ್ತಿ ಹೊಂದಿರುವ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಂಪೂರ್ಣ ಸಹಕಾರ ನೀಡಲಾಗು ವುದು ಎಂದರು.

ಸಂಘದ ಅಧ್ಯಕ್ಷ ಶಿವಮೂರ್ತಿ ಮಾತನಾಡಿ ಜಿಲ್ಲೆಯಾದ್ಯಂತ ಸಾವಿರಕ್ಕೂ ಹೆಚ್ಚು ಸದಸ್ಯರನ್ನು ವಿಕಲ ಚೇತನರು ಹೊಂದಿದ್ದಾರೆ. ಪ್ರತಿಯೊಬ್ಬರಿಗೂ ಸಂಘದ ಸದಸ್ಯರುಗಳನ್ನಾಗಿಸಿ ಸಾಲಸೌಲಭ್ಯ ಸೇರಿದಂತೆ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಒದಗಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಸಂಘ ಸ್ಥಾಪನೆ ಹಾಗೂ ಸರ್ಕಾರದ ಯೋಜನೆಗಳನ್ನು ಲಭಿಸುವ ನಿಟ್ಟಿನಲ್ಲಿ ಎ.ಎನ್. ಮಹೇಶ್ ಅವರು ಕೊಡುಗೆ ಅಪಾರವಿದೆ. ಸಂಕಷ್ಟದ ಸಮಯದಲ್ಲಿ ನೆರವಿಗೆ ಧಾವಿಸುವ ಅವರಿಗೆ ಸಂಘ ದ ಆಡಳಿತ ಮಂಡಳಿ ಹಾಗೂ ಸದಸ್ಯರುಗಳು ಚಿರಋಣಿ ಎಂದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಮೋಹನ್‌ಗೌಡ, ಕಾರ್ಯದರ್ಶಿ ಜೆ.ವೈ.ಚಂದ್ರಶೇಖರ್, ಮಾಜಿ ಅಧ್ಯಕ್ಷ ಸೋಮಶೇಖರ್, ಸದಸ್ಯರುಗಳಾದ ಸುನೀಲ್, ಸರ್ವಮಂಗಳ, ಪ್ರಕಾಶ್, ವಸಂತರಾಜ್ ಅರಸ್ ಮತ್ತಿತರರು ಉಪಸ್ಥಿತರಿದ್ದರು.

A rare art of achievement lies in the disabled

About Author

Leave a Reply

Your email address will not be published. Required fields are marked *

You may have missed