September 16, 2024

ಲೋಕಸಭೆ ಚುನಾವಣೆ ಸೋಲಿನ ಬಳಿಕ ರಾಜ್ಯ ಸರ್ಕಾರ ಜನರ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ

0
ಸಿ. ಟಿ. ರವಿ

ಸಿ. ಟಿ. ರವಿ

ಚಿಕ್ಕಮಗಳೂರು: ಲೋಕಸಭೆ ಚುನಾವಣೆ ಸೋಲಿನ ಬಳಿಕ ಸರ್ಕಾರ ಜನರ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ. ರಾಜಕೀಯ ಪಕ್ಷ, ನಾಯಕರ ಮೇಲೆ ಸೇಡು ತೀರಿಸಿಕೊಂಡು ಆಗಿದೆ. ಈಗ ಜನಸಾಮಾನ್ಯರ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅಸಮಾಧಾನ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆಯನ್ನೇ ತನ್ನ ನೀತಿಯನ್ನಾಗಿ ಮಾಡಿಕೊಂಡಿದೆ. ಮೂಗು ಹಿಡಿದರೆ ಬಾಯಿ ಬಿಡಬೇಕಾಗುತ್ತೆ ಎನ್ನುತ್ತಾರಲ್ಲ ಹಾಗೆಯೇ ಪೆಟ್ರೋಲ್ ಡೀಸೆಲ್ ಬೇರೆ ಏರಿಕೆ ಆದರೆ ಎಲ್ಲಾ ವಸ್ತುಗಳ ಬೆಲೆ ಏರಿಕೆಗೆ ಲೇಸೆನ್ಸ್ ಕೊಟ್ಟಂತಾಗುತ್ತದೆ ಎಂದು ವ್ಯಕ್ತಪಡಿಸಿದರು.

ಕಷ್ಟದಲ್ಲಿರುವ ಜನರಿಗೆ ಸರ್ಕಾರ ಬೆಲೆ ಏರಿಕೆ ಬರೆ ಹಾಕಿದೆ. ಇದೊಂದು ಜನ ವಿರೋಧಿ ಸರ್ಕಾರ ಎನ್ನುವುದಕ್ಕೆ ಮತ್ತಿನ್ಯಾವ ಸರ್ಟಿಫಿಕೇಟ್ ನ ಅಗತ್ಯವು ಇಲ್ಲ.

ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪೆಟ್ರೋಲ್ ರೇಟ್ ಜಾಸ್ತಿ ಮಾಡಿದಾಗ ಶವದ ಅಣಕು ಪ್ರದರ್ಶನ ಮಾಡಿದ್ದರು. ಈಗ ಅಂದು ಪ್ರತಿಭಟನೆ ಮಾಡಿದವರೇ ಪೆಟ್ರೋಲ್ ಬೆಲೆ ಜಾಸ್ತಿ ಮಾಡಿದ್ದಾರೆ. ಈಗ ಯಾರನ್ನು ಹೊತ್ತುಕೊಂಡು ಹೋಗಬೇಕು. ಈಗ ನಿಮ್ಮ ಸರ್ಕಾರವನ್ನೇ ಹೊತ್ತುಕೊಂಡು ಹೋಗಬೇಕಿದೆ. ರಾಜ್ಯದಲ್ಲಿರುವುದು ಸತ್ತು ಹೋಗಿರುವ ಸರ್ಕಾರ. ಜನರೇ ಈ ಸರ್ಕಾರವನ್ನು ಧಪನ್ ಮಾಡೋ ದಿನ ಬರಲಿದೆ ಎಂದು ಹೇಳಿದರು.

ರಾಜ್ಯ ಸರ್ಕಾರ ಮಾಡಿರುವುದು ಬೆಲೆ ಏರಿಕೆ ಹಾಗೂ ಲೂಟಿ ಇವೆರಡನ್ನೇ. ಓಲೈಕೆ ರಾಜಕಾರಣಕ್ಕೆ ಗ್ಯಾರಂಟಿ ಆಸೆ ತೋರಿಸಿದ್ದಿರಿ. ಅದು ಧಕ್ಕದಿದ್ದಾಗ ಬೆಲೆ ಏರಿಕೆ ಮಾಡಿದ್ದೀರಾ. ನಾಚಿಕೆ, ಮಾನ, ಮರ್ಯಾದೆ ಅನ್ನುವುದರಲ್ಲಿ ಯಾವುದನ್ನಾದರೂ ಇಟ್ಕೊಂಡು ಇದನ್ನು ಮಾಡಿದ್ದೀರಾ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರ ರಾಜ್ಯಕ್ಕೆ ವರವಾಗುವ ಬದಲು ಶಾಪವಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಸೆಕ್ಸ್ ಕಡಿಮೆ ಮಾಡಿದ್ದೆವು. ಆದರೆ ಈಗ ರಾಜ್ಯ ಸರ್ಕಾರ ಬೆಲೆ ಏರಿಕೆ ಮಾಡಿದೆ. ಹೀಗಾದರೆ ರಾಜ್ಯದ ಮುಂದಿನ ಗತಿ ಏನು? ಪ್ರಶ್ನಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಂ.ಬಿ.ಪಾಟೀಲ್ ಅವರು ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯನ್ನು ಸಮರ್ಥನೆ ಮಾಡಿಕೊಂಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ, ಈಗಾಗಲೇ ರಾಜ್ಯದಲ್ಲಿ ನಾಲ್ಕು ಜನ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದು ಕಡೆ ಗುತ್ತಿಗೆದಾರರು ಮತ್ತೊಂದು ಕಡೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಬೆಲೆ ಏರಿಕೆಯ ಬರೆಯು ರಾಜ್ಯದ ಜನರ ಮೇಲೆ ಬಿದ್ದಿದೆ. ಆದರೂ ಇದನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಉತ್ಪಾದನಾ ವೆಚ್ಚ ಜಾಸ್ತಿಯಾದರೆ ಇಲ್ಲಿ ಹೂಡಿಕೆ ಮಾಡಲು ಯಾವ ಬಂಡವಾಳಶಾಹಿಗಳು ಮುಂದೆ ಬರುವುದಿಲ್ಲ. ಈಗಾದಲ್ಲಿ ರಾಜ್ಯ ಸದ್ಯದಲ್ಲಿಯೇ ರೋಗಗ್ರಸ್ತ ರಾಜ್ಯವಾಗಲಿದೆ. ರಾಜ್ಯಕ್ಕೆ ಬರುವ ಉದ್ದಿಮೆಗಳೆಲ್ಲವೂ ನೆರೆ ರಾಜ್ಯದ ಪಾಲಾಗುತ್ತಿವೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

After the Lok Sabha election defeat the state government is taking revenge on the people

About Author

Leave a Reply

Your email address will not be published. Required fields are marked *