September 19, 2024
ಕಾಂಗ್ರೆಸ್‌ ಪಕ್ಷದ ಕಚೇರಿಯಲ್ಲಿ ರಾಜ್ಯಸಭಾ ಸದಸ್ಯ ಜಯರಾಮ್ ರಮೇಶ್ ಗೆ ಹೀರೇಮಗಳೂರು ರಾಮಚಂದ್ರ ಮನವಿ

ಕಾಂಗ್ರೆಸ್‌ ಪಕ್ಷದ ಕಚೇರಿಯಲ್ಲಿ ರಾಜ್ಯಸಭಾ ಸದಸ್ಯ ಜಯರಾಮ್ ರಮೇಶ್ ಗೆ ಹೀರೇಮಗಳೂರು ರಾಮಚಂದ್ರ ಮನವಿ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಹಲವಾರು ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದಿರುವ ದಲಿತ ಸಮುದಾಯದ ಮುಖಂಡರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಿಕೊಡಬೇಕು ಎಂದು ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಹಿರೇಮಗಳೂರು ರಾಮಚಂದ್ರ ಶನಿವಾರ ರಾಜ್ಯಸಭಾ ಸದಸ್ಯ ಜಯರಾಮ್ ರಮೇಶ್ ಅವ ರಿಗೆ ಒತ್ತಾಯಿಸಿದರು.

ಇಂದು ಪಕ್ಷದ ಕಚೇರಿಯಲ್ಲಿ ಮುಖಂಡರ ಸಭೆಯಲ್ಲಿ ಹಿರೇಮಗಳೂರು ರಾಮಚಂದ್ರ ಮನವಿ ಸಲ್ಲಿ ಸಿ ಮಾತನಾಡಿದ ಅವರು ಇಂದಿರಾಗಾಂಧಿ ಕಾಲಘಟ್ಟದಿಂದ ಪ್ರಸ್ತುತದವರೆಗೂ ಜಿಲ್ಲೆಯ ಐದು ಕಾಂಗ್ರೆಸ್ ಗೆಲುವಿಗೆ ಕಾರಣಕರ್ತರಾಗಿರುವ ದಲಿತ ಸಮುದಾಯಕ್ಕೆ ಜಿಲ್ಲಾ ಮಟ್ಟದಲ್ಲಿ ಸಮರ್ಪಕ ಸ್ಥಾನ ಕಲ್ಪಿಸದಿ ರುವುದು ನೋವುಂಟಾಗಿದೆ ಎಂದು ತಿಳಿಸಿದ್ದಾರೆ.

ಪ್ರಸ್ತುತ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ಆಯ್ಕೆಗೊಳಿಸಿದರೆ ದಲಿತ ಜನಾಂಗ ದ ಬೆಳವಣಿಗೆಗೆ ಒತ್ತು ನೀಡಿದಂತೆ ಎಂದ ಅವರು ಮೂರುವರೆ ದಶಕಗಳ ಸಕ್ರಿಯ ಕಾರ್ಯಕರ್ತನಾಗಿ, ಬೂತ್‌ಮಟ್ಟದಿಂದ ಕಾರ್ಯನಿರ್ವಹಿಸಿ ಹಾಗೂ ಪಕ್ಷದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿರುವ ತಮಗೆ ಸಿಡಿಎ ಅಧ್ಯಕ್ಷ ಸ್ಥಾನ ಕಲ್ಪಿಸಿಕೊಡಬೇಕು ಎಂದಿದ್ದಾರೆ.

ಮುಂಬರುವ ದಿನಗಳಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳಿರುವ ಹಿನ್ನೆಲೆಯ ಲ್ಲಿ ಜನಾಂಗಕ್ಕೆ ಸ್ಥಾನಮಾನ ಕಲ್ಪಿಸದಿರುವ ಕಾರಣ ದಲಿತರ ಸಮುದಾಯಕ್ಕೆ ಉತ್ತರಿಸಲಾಗುತ್ತಿಲ್ಲ. ಈ ಬಗ್ಗೆ ಗಂಭೀರವಾಗಿ ಆಲೋಚಿಸಿ ಜಿಲ್ಲಾ ಮಟ್ಟದಲ್ಲಿ ಸ್ಥಾನ ದೊರಕಿಸಿಕೊಟ್ಟರೆ ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಗೆಲುವು ಲಭಿಸಲು ಸಾಧ್ಯವಾಗಲಿದೆ ಎಂದಿದ್ದಾರೆ.

ಈ ಬಾರಿ ಸಿಡಿಎ ಅಧ್ಯಕ್ಷ ಸ್ಥಾನ ದಲಿತ ಸಮುದಾಯದವರಾದ ತಮಗೆ ಲಭಿಸಲೆಂದು ಮುಖ್ಯಮಂ ತ್ರಿ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಹೀಗಾಗಿ ಜಿಲ್ಲೆಯ ದಲಿತ ಜನಾಂಗದ ಬೆಳವಣಿಗೆಗೆ ರಾಜ್ಯಸಭಾ ಸದ ಸ್ಯರು ಸಹಕರಿಸಬೇಕು ಎಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ರಾಜ್ಯಸಭಾ ಸದಸ್ಯರ ಸಲಹೆ ಮೇರೆಗೆ ಪ್ರತಿಕ್ರಿಯಿಸಿದ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ಜಿಲ್ಲೆಯನ್ನು ಪಕ್ಷ ವನ್ನು ಬಲಗೊಳಿಸಲು ದಲಿತ ಸಮುದಾಯ ಬಹಳಷ್ಟು ಶ್ರಮವಹಿಸಿದೆ. ಹಾಗಾಗಿ ಸಾಮಾಜಿಕ ನ್ಯಾಯ ಒದ ಗಿಸುವ ನಿಟ್ಟಿನಲ್ಲಿ ಪಕ್ಷವು ಕಟಿಬದ್ಧವಾಗಿದೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಆದೇಶದನ್ವಯ ಸಾಮಾಜಿಕ ನ್ಯಾಯ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

Provide status for Dalits at district level

About Author

Leave a Reply

Your email address will not be published. Required fields are marked *

You may have missed