September 19, 2024

ರಾಷ್ಟ್ರಮಟ್ಟದ ವೇದಾಂತ ಶಾಸ್ತ್ರದ ಪ್ರಶಿಕ್ಷಣ ವರ್ಗ

0
ರಾಷ್ಟ್ರಮಟ್ಟದ ವೇದಾಂತ ಶಾಸ್ತ್ರದ ಪ್ರಶಿಕ್ಷಣ ವರ್ಗ

ರಾಷ್ಟ್ರಮಟ್ಟದ ವೇದಾಂತ ಶಾಸ್ತ್ರದ ಪ್ರಶಿಕ್ಷಣ ವರ್ಗ

ಶೃಂಗೇರಿ: ಶೃಂಗೇರಿ ಕೇಂದೀಯ ಸಂಸ್ಕೃತ ವಿಶ್ವವಿದ್ಯಾಲಯದ ರಾಜೀವ್ ಗಾಂಧಿ ಪರಿಸರದಲ್ಲಿ ಕಳೆದ ಒಂದು ತಿಂಗಳ ಅವಧಿಯ ರಾಷ್ಟ್ರಮಟ್ಟದ ವೇದಾಂತ ಶಾಸ್ತ್ರದ ಪ್ರಶಿಕ್ಷಣ ವರ್ಗವು ನಡೆಯುತ್ತಿದ್ದು ಸಮಾರೋಪ ಸಮಾರಂಭ ಜೂನ್ ೧೯ರಂದು ನಡೆಯಲಿದೆ.

ಅಖಿಲಭಾರತ ಸ್ತರದ ಈ ಪ್ರಶಿಕ್ಷಣವರ್ಗದಲ್ಲಿ ಏಳು ರಾಜ್ಯಗಳಿಂದ ಒಟ್ಟು ೨೪ ಆಯ್ದ ಪ್ರತಿನಿಧಿಗಳು ಆಗಮಿಸಿದ್ದಾರೆ.ರಾಷ್ಟ್ರದ ಹತ್ತಕ್ಕೂ ಹಾಗೂ ರಾಜ್ಯದ ಹದಿನೈದಕ್ಕೂ ಹೆಚ್ಚು ವಿದ್ವಾಂಸರು ತರಬೇತಿಯನ್ನು ನೀಡುತ್ತಿದ್ದಾರೆ.

ಕೇಂದ್ರೀಯ ವಿಶ್ವಿದ್ಯಾಲಯದಿಂದ ಆಯೋಜನೆಗೊಂಡ ಪ್ರಶಿಕ್ಷಣ ತರಬೇತಿ ಒಂದೇ ಸಮಯಕ್ಕೆ ಮೂರು ರಾಜ್ಯಗಳಲ್ಲಿ ನಡೆಯುತ್ತಿದ್ದು ವ್ಯಾಕರಣ,ನ್ಯಾಯಶಾಸ್ತ್ರ ಮತ್ತು ವೇದಾಂತ ಶಾಸ್ತ್ರಗಳ ಕುರಿತು ಮಾಹಿತಿ ನೀಡಲಾಗುತ್ತಿದೆ.ನಾನಾ ವಿವಾಂಸರ ವಿಶಿಷ್ಟವಾದ ವ್ಯಾಖ್ಯಾನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಚೆನ್ಹೈ ಮದ್ರಾಸ್ ಸಂಸ್ಕೃತ ಮಹಾವಿದ್ಯಾಲಯದ ಶ್ರೀಮಣಿದ್ರಾವಿಡ ಶಾಸ್ತ್ರಿ,ಹೈದರಾಬಾದಿನ ಪ್ರೊ.ಶ್ರೀಪಾದ ಸುಬ್ರಮಣ್ಯಂ,ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಪ್ರೋ.ರಾಜರಾಮ ಶುಕ್ಲ,,ಪ್ರೊ.ಮಹಾಬಲೇಶ್ವರ ಭಟ್ ಕಿಚ್ಚಿಕೇರಿ,ಪ್ರೋ.ಗಣೇಶ ಈಶ್ವರ ಭಟ್,ಶಾರದಾಪೀಠದ ಅಸ್ಥಾನ ವಿದ್ವಾಂಸ ಎಮ್.ಎ.ನಾಗರಾಜ್ ಭಟ್,ತಿರುಪತಿಯ ಪ್ರೊ.ಗಣಪತಿಭಟ್,ಡಾ.ಗಣೇಶ್ ಪಂಡಿತ್ ಮುಂತಾದವರು ಭಾಗವಹಿಸಿದ್ದಾರೆ.

ಈಶ್ವನಾರಾಜ್ಯವಾದ ತ್ರಿಪುರಾ,ಅಸ್ಸಾಂ,ರಾಜ್ಯಸ್ಥಾನ,ಮಧ್ಯಪ್ರದೇಶ,ಮಹಾರಾಷ್ಟ್ರ,ಕೇರಳ,ಕರ್ನಾಟಕ,ತಮಿಳುನಾಡು,ಪಶ್ಚಿಮಬಂಗಾಳ ರಾಜ್ಯಗಳಿಂದ ಪ್ರತಿನಿಧಿಗಳು ಭಾಗವಹಿಸಿದ್ದು ಸಾಸ್ತ್ರ ಅಧ್ಯಯನ ಜೊತೆಗೆ ಕಂಪ್ಯೂಟರ್ ಜ್ಞಾನವನ್ನು ನೀಡಲಾಗುತ್ತಿದೆ.ಸಮಗ್ರ ಪ್ರಶಿಕ್ಷಣ ವರ್ಗದ ಕಾರ್ಯಕ್ರಮದ ಜವಾಬ್ದಾರಿಯನ್ನು ಕುಲಪತಿ ಪ್ರೊ.ಶ್ರೀನಿವಾಸ ವರಖೇಡಿ ಹಾಗೂ ಪರಿಸರದ ನಿರ್ದೇಶಕ ಪ್ರೊ.ಹಂಸಧರ್ ಝೂ ಅವರ ಮಾರ್ಗದರ್ಶನದಲ್ಲಿ ನೆಯುತ್ತಿದೆ.

“ಅದ್ವೈತ್ವ ಬ್ರಹ್ಮಸಿದ್ಧಿ” ಎಂಬ ಗ್ರಾಂತದ ಪಾಠಮಾಡಲು ವಿವಿಧ ರಾಜ್ಯಗಳಿಂದ ವಿದ್ವಾಂಸರಾದ ಚೆನ್ಹೈ ಡಾ|ವಾಸುದೇವನ್,ಕೇರಳದ ಚಿನ್ಮಯ ವಿಶ್ವವಿದ್ಯಾಪೀಠದ ಡಾ|ಕಾರ್ತಿಕ್ ಶರ್ಮ,ಶೃಂಗೇರಿಯ ಡಾ|ವಿಶ್ವನಾಥ್ ಸುಂಕಸಾಳ,ಮದ್ರಾಸ್ ಸಂಸ್ಕೃತ ಮಹಾವಿದ್ಯಾಲಯದ ಡಾ|ಮಹೇಶ್ವರನ್ ನಂಬೂದಿರಿ,ತಿರುಪತಿಯ ಪ್ರೋ.ಸತೀಶ್.ಕೆ,ಕೇರಳದ ಡಾ|ಪುಪ್ಕರ್ ದೇವಪೂಜಾರಿ ಭಾಗಿಯಾಗಿದ್ದಾರೆ.

National Level Vedanta Shastra Training Class

About Author

Leave a Reply

Your email address will not be published. Required fields are marked *

You may have missed