September 19, 2024

ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದಿಂದ ಪ್ರತಿಭಟನೆ

0
ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದಿಂದ ಪ್ರತಿಭಟನೆ

ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದಿಂದ ಪ್ರತಿಭಟನೆ

ಚಿಕ್ಕಮಗಳೂರು: ಕಾರ್ಮಿಕರ ಮಕ್ಕಳ ಶೈಕ್ಷಣಿಕ ಧನಸಹಾಯಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸದಿರುವುದನ್ನು ವಿರೋಧಿಸಿ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ನಗರದ ಆಜಾದ್ ವೃತ್ತದಲ್ಲಿ ಬುಧವಾರ ನೂರಾರು ಸಂಖ್ಯೆಯಲ್ಲಿ ಕಾರ್ಮಿಕರು ಜಮಾವಣೆಗೊಂಡು ಸರ್ಕಾರದ ನಡೆ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ವಸಂತ್‌ಕುಮಾರ್ ಕಟ್ಟಡ ಮತ್ತು ಇತರೆ ನಿ ರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಮಕ್ಕಳಿಗೆ ೧ ರಿಂದ ೧೦ನೇ ತರಗತಿವರೆಗೆ ಧನ ಸಹಾಯಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಪ್ರಸ್ತಕ್ತ ಸಾಲಿನಲ್ಲಿ ಶೈಕ್ಷಣಿಕ ಧನಸಹಾಯಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದ್ದರೂ ಸಹ ಸಮಾಜ ಕಲ್ಯಾ ಣ, ಪ.ಪಂಗಡ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳಲ್ಲಿ ಶೈಕ್ಷಣಿಕ ಧನಸಹಾಯದ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿರುವ ಕಾರಣ ಅರ್ಜಿ ಸಲ್ಲಿಸುವ ವೇಳೆ ಸರ್ವರ್ ಸಮಸ್ಯೆಯಿದ್ದು ಹೆಚ್ಚು ವರಿ ದಿನಾಂಕವನ್ನು ಮುಂದುವರೆಸಬೇಕು ಎಂದರು.

ಹಿಂದಿನ ಸಾಲಿನಲ್ಲಿ ಕೆಲವೇ ಫಲಾನುಭವಿಗಳಿಗೆ ಮಂಜೂರಾತಿಯಾಗಿ ಶೈಕ್ಷಣಿಕ ಧನಸಹಾಯವು ಖಾತೆಗೆ ಜಮಾಗೊಂಡಿವೆ. ಉಳಿದ ಕಟ್ಟಡ ಕಾರ್ಮಿಕರಿಗೆ ಮಂಜೂರಾತಿಯಾಗಬೇಕು. ಆನ್‌ಲೈನ್ ಸಮಸ್ಯೆ ಯಿಂದ ಕಾರ್ಮಿಕ ಕಾರ್ಡ್‌ಗಳಿಗೆ ಆಪ್‌ಲೋಡ್ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಇದರಿಂದ ಹೆಚ್ಚು ಕಾಲಾ ವಕಾಶವನ್ನು ನೀಡಬೇಕು ಎಂದರು.

ಕಟ್ಟಡ ಕಾಮಗಾರಿಗಳಲ್ಲಿ ತೊಡಗಿರುವ ಮರಗೆಲಸ, ಪೈಂಟಿಂಗ್, ಎಲೆಕ್ಟ್ರೀಷಿಯನ್, ಗಾರೆಕೆಲಸ ಸೇರಿ ದಂತೆ ಮುಂತಾದ ವೃತ್ತಿಯಲ್ಲಿರುವ ಕಾರ್ಮಿಕರಿಗೆ ಕ್ಷೇಮಾಭಿವೃದ್ದಿಗಾಗಿ ಮಂಡಳಿ ರಚಿತವಾಗಿದೆ. ಆದರೆ ಅನಗತ್ಯವಾಗಿ ಪ್ರಚಾರ ಮತ್ತು ರಾಜಕೀಯ ದೃಷ್ಟಿಯಿಂದ ಬೇರೆ ಅನುಪಯುಕ್ತ ಸ್ಕೀಮ್‌ಗಳನ್ನು ರಚಿಸಿ ನಿರ್ವಹಣೆಗಾಗಿ ಖಾಸಗೀ ಕಂಪನಿಗಳಿಗೆ ನೀಡುತ್ತಿದೆ ಎಂದು ಹೇಳಿದರು.

ಕಟ್ಟಡ ಕಾರ್ಮಿಕರಿಗೆ ಸರಬರಾಜು ಮಾಡುತ್ತಿರುವ ಮಹಿಳಾ ಪ್ರತಿರಕ್ಷಣಾ ಕಿಟ್ ಮತ್ತು ಆರೋಗ್ಯ ತಪಾಸಣಾ ಶಿಬಿರ ಮುಂತಾದವುಗಳ ಹೆಸರಿನಲ್ಲಿ ಖಾಸಗೀ ಕಂಪನಿಗಳಿಗ ಗುತ್ತಿಗೆ ನೀಡಿದ್ದು ಅವುಗಳು ತೀವ್ರ ಕಳಪೆಯಾಗಿದೆ. ಅಲ್ಲದೇ ಕಡಿಮೆ ದರದ ಸಾಮಾಗ್ರಿಗಳನ್ನು ಸರಬರಾಜು ಮಾಡಿ ಕೋಟಿಗಟ್ಟಲೇ ಲಾಭ ಮಾಡಿಕೊಳ್ಳುತ್ತಿದೆ ಎಂದು ದೂರಿದರು.

ಕೋಟ್ಯಾಂತರ ರೂ.ಗಳನ್ನು ಖಾಸಗೀ ಕಂಪನಿಗೆ ನೀಡಿದ ಹಿನ್ನೆಲೆಯಲ್ಲಿ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನಸಹಾಯವನ್ನು ಕಡಿಮೆ ಮಾಡಿ ವಿದ್ಯಾಭ್ಯಾಸಕ್ಕೆ ತೀವ್ರ ತೊಂದರೆಯಾಗಿದೆ. ಹೀಗಾಗಿ ಅನುಪ ಯುಕ್ತ ಸ್ಕೀಮ್‌ಗಳನ್ನು ರದ್ದುಪಡಿಸಿ ಕಾರ್ಮಿಕರಿಗೆ ಪೂರಕ ಯೋಜನೆಗಳಿಗೆ ಹಣ ವ್ಯಯಿಸಬೇಕು ಎಂದು ಒತ್ತಾಯಿಸಿದರು.

ಪ್ರಚಾರ ಮತ್ತು ಲಾಭದ ದೃಷ್ಟಿಯಿಂದ ಜಾರಿಗೊಳಿಸಿರುವ ಯೋಜನೆಗಳಿಂದಾಗಿ ಕಟ್ಟಡ ಕಾರ್ಮಿಕರ ಮೂಲ ಸೌಲಭ್ಯಕ್ಕಾಗಿ ಸಂಗ್ರಹಿಸಿರುವ ಕೋಟ್ಯಾಂತರ ರೂ. ಹಣ ಖಾಲಿಯಾಗಿವೆ. ಮುಂದಿನ ದಿನಗಳಲ್ಲಿ ಮಂಡಳಿಯಲ್ಲಿ ಹಣವಿಲ್ಲದೇ ಮುಚ್ಚುವ ಸ್ಥಿತಿಗೆ ತಲುಪುವ ಸಾಧ್ಯತೆಗಳಿವೆ ಎಂದು ಹೇಳಿದರು.

ಶೈಕ್ಷಣಿಕ ಧನಸಹಾಯವನ್ನು ಹಿಂದಿನ ಪದ್ಧತಿಯಂತೆ ಮುಂದುವರೆಸಬೇಕು. ಮಂಡಳಿಯಲ್ಲಿರುವ ಹಣವನ್ನು ಕಾರ್ಮಿಕರ ಕಲ್ಯಾಣಕ್ಕೆ ಮಾತ್ರ ವಿನಿಯೋಗಿಸಬೇಕು. ಸರ್ವರ್ ಸಮಸ್ಯೆಯನ್ನು ಕೂಡಲೇ ಸರಿಪ ಡಿಸಬೇಕು ಹಾಗೂ ಎಲ್ಲಾ ಕಟ್ಟಡ ಕಾರ್ಮಿಕರಿಗೆ ಭವಿಷ್ಯನಿಧಿ ಯೋಜನೆಗಳನ್ನು ಜಾರಿ ಸೇರಿದಂತೆ ವಿವಿಧ ಸವಲತ್ತುಗಳನ್ನು ಒದಗಿಸಬೇಕು ಎಂದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಜಿ.ರಘು, ಪ್ರಧಾನ ಕಾರ್ಯದರ್ಶಿ ಎ.ಜಯಕುಮಾರ್, ಉಪಾಧ್ಯಕ್ಷರುಗಳಾದ ಸಿ.ಸಿ.ಮಂಜೇಗೌಡ, ಕುಪ್ಪನ್, ಕಾರ್ಯದರ್ಶಿ ಎಂ.ಎಸ್.ಜಾನಕಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಸಿ.ಮಂಜುನಾಥ್, ಧಯಾಕ್ಷಿ, ಶ್ರೀನಿವಾಸ್, ಎ.ಶ್ರೀಧರ್, ಚಂದ್ರಚಾರಿ, ಸುಶೀಲಮ್ಮ ಮತ್ತಿತರರು ಹಾಜರಿದ್ದರು.

Protest by District Building Workers Union

 

 

About Author

Leave a Reply

Your email address will not be published. Required fields are marked *

You may have missed