September 19, 2024

ಸಾಮಾಜಿಕ ಸೇವೆಗಳ ಮೂಲಕ ಶಾಸಕರ ಹುಟ್ಟುಹಬ್ಬ ಆಚರಣೆ

0
ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಮುಖಂಡರಿಂದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ವಿತರಣೆ

ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಮುಖಂಡರಿಂದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ವಿತರಣೆ

ಚಿಕ್ಕಮಗಳೂರು:  ಚಿಕ್ಕಮಗಳೂರು ಕ್ಷೇತ್ರದ ಜನಪ್ರಿಯ ಶಾಸಕ ಹೆಚ್.ಡಿ.ತಮ್ಮಯ್ಯ ಅವರ ಹುಟ್ಟುಹಬ್ಬದ ಅಂಗವಾಗಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಮುಖಂಡರುಗಳು ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಾಗೂ ವೃದ್ದಾಶ್ರಮಕ್ಕೆ ಶುಕ್ರವಾರ ಊಟೋಪಚಾರದ ವ್ಯವಸ್ಥೆ ಕಲ್ಪಿಸಿದರು.

ಬಳಿಕ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ ಸರಳ, ಸಜ್ಜನಿಕೆಯ ವ್ಯಕ್ತಿತ್ವ ಹೊಂದಿರುವ ತಮ್ಮಯ್ಯನವರು ದೀರ್ಘಾಯುಷ್ಯ ಲಭಿಸುವ ಜೊತೆಗೆ ರಾಜಕೀಯ ಕ್ಷೇತ್ರದಲ್ಲಿ ಇನ್ನಷ್ಟು ಉನ್ನತಮಟ್ಟದಲ್ಲಿ ಬೆಳೆದು ಸರ್ವಜನತೆಗೂ ಸೌಕರ್ಯ ಒದಸುವಂತಾಗಲಿ ಎಂದು ಆಶಿಸಿದರು.

ರಾಜ್ಯದಲ್ಲಿ ಸರ್ಕಾರ ರಚನೆಗೊಂಡು ವರ್ಷ ಪೂರೈಸಿರುವ ವೇಳೆಯಲ್ಲಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ವನ್ನು ಮಂಜೂರಾತಿಗೆ ಕಾರಣಕರ್ತರಾದವರು. ಶಾಂತಿ, ಸೌಹಾರ್ದತೆ ಹಾಗೂ ಸಹೋದರತೆಯ ಮೂಲ ಮಂತ್ರವಾಗಿಸಿಕೊಂಡಿರುವ ಶಾಸಕರು ಮುಂಬರುವ ದಿನಗಳಲ್ಲಿ ಕ್ಷೇತ್ರದ ಅಭಿವೃದ್ದಿಗೆ ಹೆಚ್ಚು ಒತ್ತು ನೀಡುವಂ ತಾಗಲಿ ಎಂದು ಶುಭ ಕೋರಿದರು.

ಜಾತ್ಯಾತೀತ ನಿಲುವು ಹೊಂದಿರುವ ಶಾಸಕ ಹೆಚ್.ಡಿ.ತಮ್ಮಯ್ಯನವರು ಬಡವ, ಮಧ್ಯಮ ಹಾಗೂ ದೀನದಲಿತರ ಶ್ರೇಯೋಭಿವೃಧ್ದಿಗೆ ಪಟ್ಟತೊಟ್ಟಿರುವ ನಾಯಕ. ಈಗಾಗಲೇ ಹಲವಾರು ಕಾಮಗಾರಿಗಳಿಗೆ ಹಾ ಗೂ ಜನಾಂಗದ ಬೆಳವಣಿಗೆಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವ ಅವರಿಗೆ ಸಂಪುಟದಲ್ಲಿ ಸ್ಥಾನ ದೊರೆಯುವಂತಾಗಲಿ ಎಂದರು.

ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಹಿರೇಮಗಳೂರು ರಾಮಚಂದ್ರ ಮಾತನಾಡಿ ಗ್ರಾಮದ ಮೂಲತಃ ರಾದ ತಮ್ಮಯ್ಯನವರು ಅನೇಕ ವರ್ಷಗಳಿಂದ ರಾಜಕಾರಣದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಉನ್ನತ ಹುದ್ದೆ ಅಲಂಕರಿಸಿ ಜನಪರವಾಗಿ ಕೆಲಸ ಮಾಡಿದ್ದಾರೆ ಎಂದರು.

ಮಂಗಳಾ ತಮ್ಮಯ್ಯ ಮಾತನಾಡಿ ಪ್ರತಿವರ್ಷವು ಹುಟ್ಟುಹಬ್ಬವನ್ನು ಕುಟುಂಬದ ಜೊತೆಯಲ್ಲಿ ಆಚರಿ ಸಲಾಗುತ್ತಿತ್ತು. ಇದೀಗ ಶಾಸಕರಾಗಿ ಮೊದಲ ಬಾರಿಗೆ ಹುಟ್ಟುಹಬ್ಬವನ್ನು ಸಾರ್ವಜನಿಕರೊಟ್ಟಿಗೆ ಸಾಮಾಜಿಕ ಕಾರ್ಯಗಳ ಮೂಲಕ ಆಚರಿಸುತ್ತಿರುವುದು ಇನ್ನಷ್ಟು ಖುಷಿ ತಂದಿದೆ ಎಂದರು.

ಇದೇ ವೇಳೆ ಶಾಸಕರ ಹುಟ್ಟಹಬ್ಬದ ಅಂಗವಾಗಿ ಕುಟುಂಬ ಸಮೇತ ಹಿರೇಮಗಳೂರು ಶ್ರೀ ಕೋದಂ ಡರಾಮಚಂದ್ರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಗ್ರಾಮದ ಶಾಲೆಗೆ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಶಿವಾನಂದ್, ಧರ್ಮಯ್ಯ, ನಗರಸಭಾ ಸದಸ್ಯರುಗಳಾದ ಲಕ್ಷ್ಮಣ್, ಮುನೀರ್‌ಅಹ್ಮದ್, ಪರಮೇಶ್, ಖಲಂಧರ್, ಪ್ರಚಾರ ಸಮಿತಿ ತಾಲ್ಲೂಕು ಅಧ್ಯಕ್ಷ ಪ್ರವೀಣ್, ಮುಖಂಡರುಗಳಾದ ಪ್ರಕಾಶ್ ರೈ, ರಾಹೀಲ್‌ಷರೀಪ್, ಹುಣಸೇಮಕ್ಕಿ ಲಕ್ಷ್ಮಣ್, ಮಧು, ಹಿರೇ ಮಗಳೂರು ಜಗದೀಶ್, ಸಿಲ್ವೇಸ್ಟರ್ ಮತ್ತಿತರರಿದ್ದರು.

Birthday Celebration of MLA by Social Services

About Author

Leave a Reply

Your email address will not be published. Required fields are marked *

You may have missed