September 8, 2024

ಶಿಕ್ಷಣದ ಜೊತೆಗೆ ಯುವ ಪೀಳಿಗೆಗೆ ಜಾನಪದ ಸಂಸ್ಕೃತಿ ಅಗತ್ಯ

0
ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ ಮತ್ತು ಜಾನಪದ ಪರಿಕರ ವಿತರಣೆ

ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ ಮತ್ತು ಜಾನಪದ ಪರಿಕರ ವಿತರಣೆ

ಶೃಂಗೇರಿ: ಹಿಂದಿನ ಕಾಲದ ಜನರ ಬದುಕು ಇಂದಿನ ಜಾನಪದ ಆದ ರೀತಿಯಲ್ಲಿ ಇಂದಿನ ಜೀವನ ಭವಿಷ್ಯದ ಜಾನಪದ. ಯುವ ಪೀಳಿಗೆಗೆ ಶಿಕ್ಷಣದ ಜೊತೆಗೆ ಜಾನಪದ ಸಂಸ್ಕೃತಿ ಪರಿಚಯಿಸುವ ಅಗತ್ಯ ಇದೆ. ಇದಕ್ಕಾಗಿ ಸಂಘಸಂಸ್ಥೆಗಳು ಒಂದಾಗಿ ಕೆಲಸ ಮಾಡಬೇಕು ಎಂದು ವಕೀಲ ಸುಧೀರ್ ಕುಮಾರ್ ಮುರೋಳ್ಳಿ ಸಲಹೆ ನೀಡಿದರು.

ಶೃಂಗೇರಿಯ ಕುಂಚೇಬೈಲ್ ಸರ್ಕಾರಿ ಶಾಲೆಯಲ್ಲಿ ಕನ್ನಡ ಜಾನಪದ ಪರಿಷತ್‌ನ ತಾಲ್ಲೂಕು ಘಟಕ ಆಯೋಜಿಸಿದ್ದ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ ಮತ್ತು ಜಾನಪದ ಪರಿಕರ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ `ಬದುಕಿನ ನೋವು, ನಲಿವು, ಕಷ್ಟ ಮತ್ತು ಸುಖವನ್ನು ಜಾನಪದ ಒಳಗೊಂಡಿದೆ ಎಂದರು.

ಧಾರ್ಮಿಕ ಆಚರಣೆಗಳು ಆಧ್ಯಾತ್ಮವಲ್ಲ, ಜಾನಪದ ನಿಜವಾದ ಆಧ್ಯಾತ್ಮ. ಭೂಮಿಯ ನಂಟಿಲ್ಲದೆ ಜಾನಪದವಿಲ್ಲ. ಬದುಕಿನ ಸಂತೋಷ, ಸಂಕಷ್ಟ, ಪ್ರೀತಿಯ ಬಗ್ಗೆ ಹಾಡುಗಳ ಮೂಲಕ ಲಕ್ಷಾಂತರ ಜನರು ಜಾನಪದ ಪ್ರಸಾರ ಮಾಡಿದರು. ಅಂತಹ ಗೀತೆಗಳು ಶಾಶ್ವತವಾಗಿ ಸಮುದಾಯದಲ್ಲಿ ನೆಲೆಯೂರಬೇಕಿದೆ ಎಂದು ಅವರು ಹೇಳಿದರು.

ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಓಣಿತೋಟ ರತ್ನಾಕರ್ ಮಾತನಾಡಿ ?ದೃಶ್ಯ ಮಾಧ್ಯಮಗಳು ಜಾನಪದ ಸಂಸ್ಕೃತಿಯನ್ನು ಪ್ರಚುರಪಡಿಸುವುದಿಲ್ಲ. ಅವಶ್ಯ ಇರುವುದನ್ನು ನಾವಿಂದು ಮರೆಯುತ್ತಿದ್ದೇವೆ. ಕರ್ನಾಟಕದಲ್ಲಿ ಜಾನಪದದ ಸೊಗಡು ಮಾಯವಾಗಿದೆ ಎಂದರು.

ಕನ್ನಡ ಜಾನಪದ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಆಶೀಶ್ ದೇವಾಡಿಗ ಮಾತನಾಡಿದರು. ಮಲೆನಾಡು ಮತ್ತು ಕರಾವಳಿ ಜನಪರ ಒಕ್ಕೂಟದ ರಾಜ್ಯ ಸಂಚಾಲಕ ಅನಿಲ್ ಹೊಸಕೊಪ್ಪ, ಸಬ್ ಇನ್‌ಸ್ಪೆಕ್ಟರ್ ಜಕ್ಕಣ್ಣವರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುಕೇಶ್, ಶಶಾಂಕ್ ಜಿ.ಆರ್, ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಮಂಜುನಾಥ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಭಾಗ್ಯಾ ಕೌಶಿಕ್, ಸದಸ್ಯ ಆಶೋಕ್, ಜಗದೀಶ್ ಕಣದಮನೆ, ಸಂತೋಷ್ ಕಾಳ್ಯ, ಶ್ರೀನಿವಾಸ್, ಅವಿನಾಶ್, ಸಿದ್ದಿಕ್, ಜಿನೇಶ್ ಇರ್ವತ್ತೂರು ಭಾಗವಹಿಸಿದ್ದರು.

Along with education folk culture is necessary for the younger generation

About Author

Leave a Reply

Your email address will not be published. Required fields are marked *

You may have missed